..
ಮಂಗಳೆಂದು ಬೆಳಗಿರೆ
ಭುಜಂಗಶಯನಗೆ ಶೃಂಗಾರದಿಂದಲಿ ಪ
ಶ್ರೀಧರಗೆ ಭೂಧವಗೆ ಯಾದವ
ಗೋಕಾಯ್ದವಗೆ | ಮೋದದಿ ಮಧುಸೂದಗೆ |
ಜಗದಾದಿ ಮೂರ್ತಿಗೆ | ಅಗಾಧಮಹಿಮಗೆ 1
ಧೀರಗೆ ಯದುವೀರಗೆ | ದಧಿ ಚೋರಗೆ |
ಭವದೂರನಿಗೆ | ಶೌರಿಗೆ ಮುರವೈರಿಗೆ |
ಗಿರಿಧಾರಿ ರಂಗಗೆ | ಅಪಾರ ಮಹಿಮಗೆ 2
ರಾಮಗೆ ತ್ರಿಧಾಮಗೆ | ಸಖಪ್ರೇಮಗೆ |
ಗುಣಧಾಮನಿಗೆ | ಶಾಮಸುಂದರ ಸ್ವಾಮಿಗೆ |
ಸುತ್ರಾಮನನುಜಗೆ ಸುಧಾಮಸಖನಿಗೆ 3
****