ಕಾಖಂಡಕಿ ಶ್ರೀ ಕೃಷ್ಣದಾಸರು
ಎಂಥವ ನಿವನಮ್ಮಾ ಬಾಲಕನಂತಿಹ ಗೋಪೆಮ್ಮಾ ಎಂಥವನಿವ ತನ್ನಂತತ ನ್ನಂತದೋರ ಗುಡದ ನಂತ ಮಹಿಮ ನರಕಾಂತಕ ದೇವಾ ಪ
ವಾರಿಯೊಳಗ ಮನವಾರಿ ಕ್ರೀಡಿಸುತಿರೆ ಘೋರ ಪ್ರವಾಹದಿ ತೀರದಲೆಮ್ಮಾ ಆರು ಅರಿಯದಂತೆ ಸೀರೆನೆಗೆದು ಕೊಂಡು ಗಾರು ಮಾಡಿದ ಮರ ಸೇರಿದ ಕಾಣಮ್ಮಾ ನಾರೇರೆಲ್ಲರು ಕೂಡಿ ಸೀರೆ ಬೇಡಲು ಬಿಟ್ಟು ನೀರ ಮುಗಿದು ಕೈಯ್ಯದೋರೆರಡೆನವಾ 1
ಪುಣ್ಯ ಚರಣೆಸಳ ಗಣ್ಣ ಜಲಧರದ ಬಣ್ಣದ ಲೋಪ್ಪವ ಸಣ್ಣಪನೆಂದು ಬಣ್ಣಿಸಿ ಕರುವುತ ಹೆಣ್ಣೆಂದೊಪ್ಪುವ ತಿಣ್ಣ ಮೊಲೆಗಳನು ಉಣ್ಣೆಂದೂಡಿದಾ ಸಣ್ಣಿಸಿ ಕಳೆದ ಮುಕ್ಕಣ್ಣನ ಸಹಿನು2
ಇಂದು ವದನೆಯರು ಮುಂದಕ ಕದವನು ತಂದಿಕ್ಕಿ ಪೋಗೆರೆ ಮಂದಿರದಿಂದಾ ಸಂದಿಸ್ಯಾಗಳೆ ಆಂದದಿ ಗೋವಳ ವೃಂದ ನೆರಹಿಕೊಂಡು ಬಂದು ನೋಡಮ್ಮಾ ಛಂದದಿ ಬೆಣ್ಣೆಯನಿಂದು ಸೇವಿಸುತಿಹ ತಂದೆ ಮಹಿಪತಿ ನಂದನೋಡಿಯನು3
***