ನಿನ್ನಂಥ ಸ್ವಾಮಿ ಎನಗಿಲ್ಲ ||ಎನ್ನಂಥ||
ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ
ಭಿನೈಪೆ ನಿನ್ನಾ ಸಲಹೆಂದೂ||2|| ||ಎನ್ನಂಥ||
ಪತೀತನಾನಾದರು ಪತೀತಪಾವನ ನೀನು
ರತಿನಾಥ ಜನಕ ನಗಪಾಣಿ ||ಪತೀತ||
ರತಿನಾಥ ಜನಕ ನಗಪಾಣಿ ನೀನಿರಲು
ಇತರ ಚಿಂತ್ಯಾಕೋ ಎನಗಿನ್ನು
ಮನದೊಳಗೆ ನೀನಿದ್ದು
ಮನವೆಂದೆನಿಸಿಕೊಂಡು
ಮನದಾ ವ್ರತ್ತಿಗಳನ್ನು ಸ್ರಜಿಸುವಿ
ಮನದಾ ವ್ರತ್ತಿಗಳನ್ನು ಸ್ರಜಿಸೀ
ಸಂಕರ್ಷಣನೆ ನಿನ್ನ ಕರುಣಕ್ಕೆ ಎಣೆಗಾನೆ ||ಎನ್ನಂಥ||
ನಾನಾ ಪದಾರ್ಥದೊಳು ,ನಾನಾ ಪ್ರಕಾರದಲಿ
ನೀನಿದ್ದು ಜಗವಾ ನಡೆಸುವೀ ||ನಾನಾ||
ನೀನಿದ್ದು ಜಗವಾ ನಡೆಸುವೀ ಹರಿ ನೀನೆ
ನಾನೆಂಬೋ ನರಗೆ ಗತಿ ಉಂಟೆ
ಎನ್ನಪ್ಪ ,ಎನ್ನಮ್ಮ ,ಎನ್ನಯ್ಯ,ಎನ್ನಣ್ಣಾ
ಎನ್ನರಸ ಎನ್ನ ಕುಲದೈವಾ ||ಎನ್ನಪ್ಪಾ||
ಎನ್ನರಸ ಎನ್ನಾ ಕುಲದೈವಾ ಇಹಪರದಿ
ಎನ್ನಾ ಬಿಟ್ಟಗಲದೇ ಇರು ಕಂಡ್ಯಾ ||ಎನ್ನಂಥ||
ಅನಾಥ ಬಂದು ಜಗನ್ನಾಥ ವಿಠ್ಠಲ
ಪ್ರಪನ್ನ ಪರಿಪಾಲ ಮಾಲೋಲ ||ಅನಾಥ||
ಪ್ರಪನ್ನ ಪರಿಪಾಲ ಮಾಲೋಲ ಹರಿ
ಪಾಂಚಜನ್ಯ ಧ್ರತಪಾಣಿ ಸಲಹಯ್ಯ ||ಎನ್ನಂಥ||
***
pallavi
ennantha bhaktaru ananta ninagiharu ninnantha svAmi enagillA ninnantha svAmi enagillA adarinda ninnitE ninna salahendu
caraNam 1
patitana nAtharu patitana vAvana nIni ratratna janaka nagapANi
ratiratna janaka nagapANi nI niralu itara cintyAtO enagiralu
caraNam 2
manadoLagE nI niddu manavendanu tIkoNDu manada vrttigaLenna krutisUvi
manada vrttigaLenna krutisUvi sankarSaNanE ninnA karuNakkE enagANE
caraNam 3
nAnA padArthadoLu nAnA prakAradali nIniddu jagavA naDesUvi
nIniddu jagavA naDesUvi hari nIne nAnembO nanagE gatiyuNTE
caraNam 4
ennappA annammA ennayyA ennaNNA ennarasA ennA kuladeiva
ennarasA ennA kuladeiva ihaparadu ennA biTTagaladE irukaNDyE
caraNam 5
anAtha bandhu jagannAtha viThala sapanna paripAla mAlOlA
sapanna paripAla mAlOlA harikAnca janyAdhrtapANi salahemmA
***