Sunday, 19 December 2021

ಎನ್ನಂಥ ಭಕ್ತರು ಆನಂತ ನಿನಗಿಹರು ankita jagannatha vittala ENNANTHA BHAKTARU ANANTA NINAGIHARU




ಎನ್ನಂಥ ಭಕ್ತರು ಆನಂತ ನಿನಗಿಹರು
ನಿನ್ನಂಥ ಸ್ವಾಮಿ ಎನಗಿಲ್ಲ   ||ಎನ್ನಂಥ||

ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ
ಭಿನೈಪೆ ನಿನ್ನಾ ಸಲಹೆಂದೂ||2||   ||ಎನ್ನಂಥ||

ಪತೀತನಾನಾದರು ಪತೀತಪಾವನ ನೀನು
ರತಿನಾಥ ಜನಕ ನಗಪಾಣಿ ||ಪತೀತ||
ರತಿನಾಥ ಜನಕ ನಗಪಾಣಿ ನೀನಿರಲು
ಇತರ ಚಿಂತ್ಯಾಕೋ ಎನಗಿನ್ನು
ಮನದೊಳಗೆ ನೀನಿದ್ದು
ಮನವೆಂದೆನಿಸಿಕೊಂಡು
ಮನದಾ ವ್ರತ್ತಿಗಳನ್ನು ಸ್ರಜಿಸುವಿ
ಮನದಾ ವ್ರತ್ತಿಗಳನ್ನು ಸ್ರಜಿಸೀ
ಸಂಕರ್ಷಣನೆ ನಿನ್ನ ಕರುಣಕ್ಕೆ ಎಣೆಗಾನೆ  ||ಎನ್ನಂಥ||

ನಾನಾ ಪದಾರ್ಥದೊಳು ,ನಾನಾ ಪ್ರಕಾರದಲಿ
ನೀನಿದ್ದು ಜಗವಾ ನಡೆಸುವೀ   ||ನಾನಾ||
ನೀನಿದ್ದು ಜಗವಾ ನಡೆಸುವೀ ಹರಿ ನೀನೆ
ನಾನೆಂಬೋ ನರಗೆ ಗತಿ ಉಂಟೆ
ಎನ್ನಪ್ಪ ,ಎನ್ನಮ್ಮ ,ಎನ್ನಯ್ಯ,ಎನ್ನಣ್ಣಾ
ಎನ್ನರಸ ಎನ್ನ ಕುಲದೈವಾ   ||ಎನ್ನಪ್ಪಾ||
ಎನ್ನರಸ ಎನ್ನಾ ಕುಲದೈವಾ ಇಹಪರದಿ
ಎನ್ನಾ ಬಿಟ್ಟಗಲದೇ ಇರು ಕಂಡ್ಯಾ   ||ಎನ್ನಂಥ||

ಅನಾಥ ಬಂದು ಜಗನ್ನಾಥ ವಿಠ್ಠಲ
ಪ್ರಪನ್ನ ಪರಿಪಾಲ ಮಾಲೋಲ  ||ಅನಾಥ||
ಪ್ರಪನ್ನ ಪರಿಪಾಲ ಮಾಲೋಲ ಹರಿ
ಪಾಂಚಜನ್ಯ ಧ್ರತಪಾಣಿ ಸಲಹಯ್ಯ  ||ಎನ್ನಂಥ||
***


pallavi

ennantha bhaktaru ananta ninagiharu ninnantha svAmi enagillA ninnantha svAmi enagillA adarinda ninnitE ninna salahendu

caraNam 1

patitana nAtharu patitana vAvana nIni ratratna janaka nagapANi
ratiratna janaka nagapANi nI niralu itara cintyAtO enagiralu

caraNam 2

manadoLagE nI niddu manavendanu tIkoNDu manada vrttigaLenna krutisUvi
manada vrttigaLenna krutisUvi sankarSaNanE ninnA karuNakkE enagANE

caraNam 3

nAnA padArthadoLu nAnA prakAradali nIniddu jagavA naDesUvi
nIniddu jagavA naDesUvi hari nIne nAnembO nanagE gatiyuNTE

caraNam 4

ennappA annammA ennayyA ennaNNA ennarasA ennA kuladeiva
ennarasA ennA kuladeiva ihaparadu ennA biTTagaladE irukaNDyE

caraNam 5

anAtha bandhu jagannAtha viThala sapanna paripAla mAlOlA
sapanna paripAla mAlOlA harikAnca janyAdhrtapANi salahemmA
***

No comments:

Post a Comment