Showing posts with label ಳಳ- ಭಾವಗೀತೆ- ರವಿಯ ಪಯಣ ಇನ್ನಾರು ತಿಂಗಳು ಉತ್ತರದ ದಿಕ್ಕಿ RAVIYA PAYANA INNAARU TINGALU UTTARADA DIKKI SAMPRADAYA. Show all posts
Showing posts with label ಳಳ- ಭಾವಗೀತೆ- ರವಿಯ ಪಯಣ ಇನ್ನಾರು ತಿಂಗಳು ಉತ್ತರದ ದಿಕ್ಕಿ RAVIYA PAYANA INNAARU TINGALU UTTARADA DIKKI SAMPRADAYA. Show all posts

Monday, 27 December 2021

ರವಿಯ ಪಯಣ ಇನ್ನಾರು ತಿಂಗಳು ಉತ್ತರದ ದಿಕ್ಕಿ others RAVIYA PAYANA INNAARU TINGALU UTTARADA DIKKI SAMPRADAYA


ಜನವರಿ 15  ಹಾಡುವ ಮಕರ ಸಂಕ್ರಾಂತಿಯ ಸಂಪ್ರದಾಯ ಹಾಡು


ವಿಯ ಪಯಣ ಇನ್ನಾರು ತಿಂಗಳು

ಉತ್ತರದ ದಿಕ್ಕಿನೆಡೆಗೆ |

ಸೂರ್ಯನೇರಿದ ರಥದ ತುರಗಗಳ

ನೋಡು ಗಾಂಭೀರ್ಯ ನಡಿಗೆ||


ಮಕರ ಸಂಕ್ರಮಣ ಚಳಿಯ ದಿನಗಣನ

ಸೂರ್ಯನುತ್ತರದ ಪಯಣ|

ಸುಗ್ಗಿ ಆಗಮನ ಹಬ್ಬದಾಚರಣ

ಎಳ್ಳು ಬೆಲ್ಲಗಳ ಮಿಶ್ರಣ||


ತಳಿರು ತೋರಣದ ಹುಗ್ಗಿ ಹೂರಣದ

ಬುಗ್ಗೆ ಹೊನಲುಗಳ ಚೇತನ|

ತೊಟ್ಟು ಹೊಸಬಟ್ಟೆ ಕೊಟ್ಟು ಖುಷಿಪಟ್ಟ

ಜೀವ ಜೀವಗಳ ಸ್ಪಂದನ||


ಸ್ನಾನ ಜಪಕೆ ಪೂಜಾದಿ ತರ್ಪಣಕೆ

ಇದುವೆ ಅತಿ ಶುಭ್ರ ಘಳಿಗೆ |

ಎಲ್ಲರನ್ನೂ ಕೇಳುವುದು ಒಂದನೆ

ಎಳ್ಳು ಬೆಲ್ಲ ಸವಿ ನುಡಿಗೆ ||


ಒಳ್ಳೆಮಾತುಗಳ ಕೊಳ್ಳೆಹೊಡೆಯುತಲಿ

ಎಳ್ಳು ಬೆಲ್ಲವನು ಮೆಲ್ಲು|

ಸುಳ್ಳನಾಡದಯೆ ಒಳ್ಳೆತನದಿಂದ

ಜನಮನವ ನೀನು ಗೆಲ್ಲು||


ಭೀಷ್ಮ ಕಾದಿದ್ದ ದಿನವ ನೂಕಿದ್ದ

ಹರಿಯ ಹಿಡಿದಿದ್ದ ಮನದಿ |

ಪುಣ್ಯ ಸಂಚಯಕೆ ದಿವ್ಯ ನಿಶ್ಚಯಕೆ

ಏಳು ಬೇಗೇಳು ಮುದದಿ ||


ಉತ್ತರಾಯಣದಿ ಬಿತ್ತು ನಗುಮುಖದಿ

ಎಲ್ಲರೊಂದೆಂಬ ಭಾವ|

ಹಿಗ್ಗಿ ಟಿಸಿಲೊಡೆದು ಬಗ್ಗಿ ಬೇರೊಡೆದು

ನುಂಗುವುದು ಭೇದ ಭಾವ||


ಮನವು ತಾನುಬ್ಬಿ ಮನದಿ ತಾ ಹಬ್ಬಿ

ಮಕರ ಸಂಕ್ರಾಂತಿ ಹಬ್ಬ|

ಮೇಲಿನಿಂದಿಳಿದು ಇಳೆಗೆ ಬರುತಿಹುದು

ಒತ್ತು ಶಾವಿಗೆಯ ಹಬ್ಬ|| 

***

*Why of late, Pongal falls on 15th of January every year, as against the usual 14th of January in the earlier years? *


Know a small Time calculation process.


Normally, Makar Sankrant or Pongal Festival should fall on 14th of January every year. Most of us, since childhood, were observing it on 14th of January every year. Isn't it? In fact, from the year 1935 onwards, till 2007, Pongal was falling on 14th January only every year. (Prior to that, know that, from 1862 to 1934, it was falling on 13th of January every year.) But from 2008 onwards, Pongal has been falling on 15th of January every year. Till the Year 2080, it will fall on 15th of January only every year. From the year 2081 onwards, it will fall on 16th of January every year for the next 72 years, that is, till 2153. 


Why this happens?


As per the Indian Almanac Time calculation, Sun enters the Zodiac sign of Makara Raasi (from Dhanur Raasi), 20 Minutes late every year, as compared to the English time or the World Time. Thus, once in 3 years, Sun enters the Makar Raasi late by one hour. That means, in every cycle of 72 years, Sun enters Makar Raasi late by one day. Got it?


(Also know that Indian Almanac Time is so accurate that our Pandits can accurately tell you today when exactly Solar or Lunar eclipse will take place after 5000 years. That also means that Universe works strictly as per precision timings which is why we can confidently calculate today when exactly will eclipse occur after 5000 years.)

***