Showing posts with label ಸಾರಿದ ಡಂಗುರ ಯಮನು jagannatha vittala. Show all posts
Showing posts with label ಸಾರಿದ ಡಂಗುರ ಯಮನು jagannatha vittala. Show all posts

Saturday 14 December 2019

ಸಾರಿದ ಡಂಗುರ ಯಮನು ankita jagannatha vittala

ಜಗನ್ನಾಥದಾಸರು
ರಾಗ - ನಾದನಾಮಕ್ರಿಯೆ (ಸಾರಂಗ) ಅಟತಾಳ (ದೀಪಚಂದಿ)

ಸಾರಿದ ಡಂಗುರ ಯಮನು-ಅಘ-
ನಾರಿಯರೆಳೆದು ತಂದು ನರಕದೊಳಿಡು ಎಂದು ||ಅ.ಪ||

ಹೊತ್ತಾರೆ ಎದ್ದು ಪತಿಗೆ ಎರಗದವಳ
ಮೃತ್ತಿಕೆ ಶೌಚ ಮಾಡದೆ ಇಪ್ಪಳ
ಹೊತ್ತಾಗೆ ಮೈತೊಳೆದತ್ತಿಗೆ ನಾದಿನಿ
ಅತ್ತೆ ಮಾವರ ಬೈವಳೆತ್ತಿ ತನ್ನಿರೊ ಎಂದು ||೧||

ತಿಲಕಾಯುಧವ ಬಿಟ್ಟು ಕುಂಕುಮವಿಡುವಳ
ಬೆಳಗಾದ ಕಾಲಕ್ಕು ಮಲಗಿಪ್ಪಳ
ಮಲಿನ ವಸ್ತ್ರವನುಟ್ಟು ಪತಿಬಳಿ ಪೋಪಳ
ಕಲಹಕಾರಿಯ ಪಿಡಿದೆಳೆತನ್ನಿರೊ ಎಂದು ||೨||

ಉತ್ತಮ ಗುರುಹಿರಿಯರನು ನಿಂದಿಸುವಳ
ಹೆತ್ತ ಮಕ್ಕಳ ಮಾರಿ ಬದುಕುವಳ
ಪ್ರತ್ಯೇಕ ಶಯ್ಯದಿ ಮಲಗಿಪ್ಪಳ ನೀಚ-
ವೃತ್ತಿಯಳ ಪಿಡಿದೆತ್ತಿ ತನ್ನಿರೊ ಎಂದು ||೩||

ಜಲಜಕ್ಕಿಸಾಳಿ ಕಂಬಳಿ ಲೋಳೀ ಬಕ್ಕಿ ಗೊಂ-
ದಲ ಮೊದಲಾದುವು ದೈವವೆಂದು
ತಿಳಿದು ಪಿಶಾಚಿ ಎಂಜಲನುಂಡು ಹಿಗ್ಗುವ
ಲಲನೇರನಾಲಸ್ಯಗೊಳ್ಳದೆ ತನ್ನಿರೊ ಎಂದು ||೪||

ಒಲುಮೆ ಔಷಧ ಮಾಡಿ ಪತಿಯನೊಲಿಸುವಳ
ಮಲಮಕ್ಕಳೊಳು ಮತ್ಸರಿಸುತಿಪ್ಪಳ
ಕಳುವಿಲಿ ಕಾಂತನ ಧನವ ವಂಚಿಸುವಳ
ಗಳಕೆ ಪಾಶವ ಸುತ್ತಿ ಎಳೆದು ತನ್ನಿರೊ ಎಂದು ||೫||

ನಾಗೇಂದ್ರಶಯನನ ದಿನದಲಿ ಉಪವಾಸ
ಜಾಗರ ಮಾಡದೆ ಮಲಗಿಪ್ಪಳ
ಭಾಗವತಾದಿ ಶಾಸ್ತ್ರವ ಕೇಳದೆ ಮತ್ತ-
ಳಾಗಿ ತಿರುಗುವಳ ಎಳೆದು ತನ್ನಿರೊ ಎಂದು ||೬||

ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ
ಸುಡಲಿ ಗಂಡನ ಒಗತನವೆನ್ನುತ
ಪಡೆದವರನು ನುಡಿನುಡಿಗೆ ಬೈಯುವ ಇಂಥ
ಕಡುಪಾಪಿಗಳ ಹೆಡೆಮುಡಿ ಕಟ್ಟಿ ತಾ ಎಂದು ||೭||

ಗಂಡ ನಿರ್ಧನಿಕನೆಂದವಮಾನ ಮಾಳ್ಪಳ
ಉಂಡ ಶೇಷಾನ್ನವನುಣಿಸುವಳ
ಕೊಂಡೆ ಮಾತುಗಳ್ಹೇಳಿ ಕಳವಳಗೊಳಿಪಳ
ಮಂಡೆ ಕೂದಲು ಹಿಡಿದೆಳೆದು ತನ್ನಿರೊ ಎಂದು ||೮||

ಸಾಲೆಡೆಯಲಿ ಭೇದ ಮಾಡಿ ಬಡಿಸುವಳ
ನೀಲಾಂಬರವನುಟ್ಟು ಮಡಿಯೆಂಬಳ
ಬಾಲಕರನು ಬಡಿದಳಿಸುತಿಪ್ಪಳ ಹಿಂ-
ಗಾಲ ತೊಳೆಯದವಳ ಎಳೆದು ತನ್ನಿರೊ ಎಂದು ||೯||

ಮೀಸಲು ಮಡಿ ಎನ್ನದೆ ಭುಂಜಿಸುವಳ ಸ-
ಕೇಶಿಯೊಡನೆ ಗೆಳೆತನ ಮಾಳ್ಪಳ
ದಾಸೇರಿಂದಲಿ ಪಾಕಪಾತ್ರೆ ಮುಟ್ಟಿಸುವಳ
ಪಾತಗಳನೆ ಹಾಕಿ ಎಳೆದು ತನ್ನಿರೊ ಎಂದು ||೧೦||

ಪತಿಗೆ ಬೇಕಾದವರೊಳು ಮತ್ಸರಿಸುವಳ
ಮೃತವತ್ಸಗೋವಿನ ಪಾಲುಂಬಳ
ಹುತವಹನನು ಪಾದತಳದಿ ನೊಂದಿಸುವಳ
ಮತಿಗೇಡಿಯ ಹಿಡಿದೆಳೆದು ತನ್ನಿರೊ ಎಂದು ||೧೧||

ಅತ್ತೆಮಾವರ ಕೂಡೆ ಮತ್ಸರಿಸುವಳ
ಸತ್ತವರ ನೆನೆನೆನೆದಳುತಿಪ್ಪಳ
ದತ್ತಾಪಹಾರವ ಮಾಡುತಿಪ್ಪಳ ಉ-
ನ್ಮತ್ತಳ ಹಿಡಿದೆಳೆದೆತ್ತಿ ತನ್ನಿರೋ ಎಂದು ||೧೨||

ಲಶುನ ವೃಂತಾಕಾದಿಗಳನು ಭಕ್ಷಿಸುವಳ
ಸೊಸೆಯರೊಡನೆ ಮತ್ಸರಿಸುತಿಹಳ
ಹಸಿದು ಬಂದವರಿಗೆ ಅಶನವಿಲ್ಲೆಂಬಳ
ಉಸಿರು ಬಿಡದ ಹಗೆ ಎಳೆದು ತನ್ನಿರೊ ಎಂದು ||೧೩||

ತುಲಸಿವೃಂದಾವನಕಭಿನಮಿಸದವಳ
ಜಲವ ಶೋಧಿಸದೆ ಪಾನವ ಮಾಳ್ಪಳ
ಫಲಧಾನ್ಯಾದಿಗಳ ನೋಡದೆ ಪಾಕ ಮಾಳ್ಪಳ
ಮಳೆಗಾಳಿ ನಿಂದಿಪಳೆಳೆದು ತನ್ನಿರೊ ಎಂದು ||೧೪||

ಅರಸಿನ ಕುಂಕುಮ ಪುಷ್ಪಾಂಜನ ವಸ್ತ್ರಾ-
ಭರಣಭೂಷಿತಳಾಗಿ ಪತಿಯೊಡನೆ
ಸರಸವಾಡುವ ಸುಖ ಹರಿಗೆ ಅರ್ಪಿತವೆಂದು
ಗರತೇರೆಡೆಗೆ ಕರಮುಗಿದು ಬನ್ನಿರೊ ಎಂದು ||೧೫||

ಬಾಲಕರನ್ನು ತೊಟ್ಟಿಲೊಳಗಿಟ್ಟು ತೂಗುತ
ಪಾಲೆರೆವುತ ಹಾಡಿ ಪಾಡುತಲಿ
ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮೀ-
ಲೋಲನ ಸ್ಮರಿಸುವವರನು ಮುಟ್ಟದಿರೆಂದು ||೧೬||

ಅಗಣಿತಮಹಿಮ ಶ್ರೀಜಗನ್ನಾಥವಿಠಲನ
ಹಗಲು-ಇರುಳು ಬಗೆಬಗೆಯಿಂದಲಿ
ಹೊಗಳುವ ದಾಸರ ಬಗೆಯವರೆನಿಸುವ
ಸುಗುಣೇರಿದ್ದೆಡೆಗೆ ಕೈಮುಗಿದು ಬನ್ನಿರೊ ಎಂದು ||೧೭||
***

pallavi

sArida Dangura yamanu agha

anupallavi

nAriyareLedu tandu narakadoLiDu endu

caraNam 1

hottAreyeddu patige eragedavaLa mrttike saucamADade ippaLa
hottAgi mai toLedattige nAdini atte mAvara baivoLett tannirO endu

caraNam 2

tilakAydhava biTTu kumkuma viDuvaLa beLagAda kAlakku malagippaLa
malina vastravanuTTu patibaLipOpaLa kalaha kArya piDideLe tannirO endu

caraNam 3

uttama guru hiriyarenu nindisuvaLa hetta makkaLa mAri badukuvaLa
pratyEka shayyadi malagippaLa nIca vrattiyeLa piDidetti tannirO endu

caraNam 4

jalajakki sALi kambaLi lOLo bakkigondala modalAduvu daivavendu
tiLidu pishAci enjalanuNDu higguva lalanEra nAlasyagoLade kannirO endu

caraNam 5

olume auSade mADi patiya nolisuvaLa mala makkaLoLu matsarisu tippaLa
kaLUvili kAntana dhanava vanciduvaLa gaLake pAshava sutti eLedu tannrOyendu

caraNam 6

nAgEndra shayanana dinadali upavAsa jAgare mADade malagippaLa
bhAgavatAdi shAstrada kELade mattaLAgi tiruguvaLa eLedu tannirO endu

caraNam 7

uDalalli uNalilla iDalalli toDalilla suDali gaNDana ogatanavennuta
paDEdavaranu nuDinuDige bayyuva intha kaDu pApigaLa heDE muDikaTTi tA endu

caraNam 8

gaNDa nirdhanika nendanamAna mAipaLa uNDa shESAnnavanu nisuvaLa
koNDe mAtugalhELi kaLavaLa goLipaLa maDE kUdalu hiDideLedu tannirO endu

caraNam 9

sAleDeyali bhEda mADi baDisuvaLa nIlAmbaravanuTTu maDiyembaLa
bAlakaranu baDidaLisi tippaLa hingAla toLeyadavaLa eLedu tannirO endu

caraNam 10

nIsalu maDi ennade bhunji suvaLa sakEsiyoDane geLetana mALpaLa
dAsErindali pAkapAtre muTTisuvaLa pAthagaLane hAki eLedu tannirO endu

caraNam 11

patige bEkAdavaroLu matsarisuvaLa mrta vatsagOvina pAlumbaLa
hutavahananu pAdataLadi nondisuvaLa matigEDiya hiDideLedu tannirO endu
1
caraNam 2

atte mAvare kUDa matsarusuvaLa sattavara nenenedaLu tippaLa
dattApa hArava mADu tippaLa unmattaLa hiDidetti tannirO endu
1
caraNam 3

lashuna vrntAkAdigaLanu bhakshisuvaLa svaseyaroDane matsarisu tihaLa
hasidu bandavarige ashanavillenbaLa usiru biDada hAgE eLadu tannirO endu
1
caraNam 4

tulasi vrndAvanakabhina misadavaLa jalava shOdisade pAnava mALpaLa
phal dhAnyAdigaLa nODade pAka mALpaLa maLegALi nindipaLeLedu tannirO endu
1
caraNam 5

arasina kumkuma puSpAnjana vastrAbharaNa bhUSitarAgi patiyoDane
sarasavADuva sukha harige arpitavemba garatEreDege karamugidu bannirO endu
1
caraNam 6

bAlakaranu toTTiloLagiTTu tUgutta pAleravutta hADi pADutali
AlayadoLu kelasa mADuta lakSmI lOlana smarisuvavaranu muTTadirendu
1
caraNam 7

agaNita mahima shrI jagannAtha viThalana hagali iruLu bagebageyindali
hogaLuva dAsara bageyavarenisuva sugunEriddeDege kaimugidu bannirO endu
***

ಸಾರಿದ ಡಂಗುರ ಯಮನು ಪ

ಅಘ ನಾರೇರ ಎಳತಂದು ನರಕದಲ್ಲಿಡಿರೆಂದು ಅ.ಪ.

ಹೊತ್ತಾರೆ ಎದ್ದು ಪತಿಗೆ ಎರಗದವಳ
ಮೃತ್ತಿಕೆ ಶೌಚ ಮಾಡದೆ ಇಪ್ಪಳಾ
ಬೆತ್ತಲೆ ಕುಳಿತು ಮೈದೊಳೆವಳ ನಾದಿನಿ
ಅತ್ತೆ ಮಾವನ ಬೈವವಳೆಳೆದು ತನ್ನೀರೆಂದು 1

ತಿಲಕಾಯುಧವ ಬಿಟ್ಟು ಕುಂಕುಮವಿಡುವಳ
ಬೆಳಗಾದ ಕಾಲಕ್ಕೂ ಮಲಗಿಪ್ಪಳ
ಮಲಿನ ವಸ್ತ್ರದಲಿ ಪತಿಯ ಬಳಿಗೆ ಪೋಗುವಳ
ಕಲಹಕಾರಿಯ ಹಿಡಿದೆಳೆದು ತನ್ನಿರಿಯೆಂದು 2

ಉತ್ತಮ ಗುರುಹಿರಿಯರನು ನಿಂದಿಸುವಳ
ಪೆತ್ತ ಮಕ್ಕಳ ಮಾರಿ ಬದುಕುವಳ
ಪ್ರತ್ಯೇಕ ಶಯ್ಯದಿ ಮಲಗಿ ಇಪ್ಪಳ ಪಿಡಿ
ದೆತ್ತ ಎಳೆದು ತಂದು ನರಕದಲ್ಲಿಡಿರೆಂದು 3

ಜಲ ಜಕ್ಕಿ ಸಾಳಿ ಕಂಬಳಿ ಬೋಳಿ ಬಕ್ಕಿ ಗೊಂ
ಡಳಿ ಮೊದಲಾದವು ದೈವವೆಂದು
ತಿಳಿದು ಪಿಶಾಚಿ ಎಂಜಲ ಉಂಡು ಹಿಗ್ಗುವ
ಲಲನೇರಾ ಸೆಳೆದು ತನ್ನಿರೋ ಎಂದು 4

ನಾಗೇಂದ್ರ ಶಯನನ ದಿನದುಪವಾಸದ
ಜಾಗರ ಮಾಡದೆ ಮಲಗಿಪ್ಪಳಾ
ಭಾಗವತ ಸಚ್ಛಾಸ್ತ್ರ ಕೇಳದೆ ಉನ್ಮತ್ತ
ಳಾಗಿರುವಳ ಎಳೆದು ತನ್ನಿರೆಂದು 5

ಗಂಡ ನಿರ್ಧನಿಕನೆಂದಪಮಾನ ಮಾಳ್ಪಳ
ಉಂಡ ಶೇಷಾನ್ನುವನುಣಿಸುವಳಾ
ಕೊಂಡೆ ಮಾತುಗಳಾಡಿ ಕಳವಳಗೊಳಿಪಳ
ಮಂಡೆಗೊದಲು ಹಿಡಿದು ಎಳೆದು ತನ್ನಿರಿ ಎಂದು6

ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ
ಸುಡಲಿಗಂಡನ ಒಗೆತನವೆನ್ನುತಾ
ಹಡೆದವರನು ನುಡಿನುಡಿಗೆ ಬಯ್ಯುತಿಪ್ಪಂಥ
ಕಡು ಪಾಪಿಗಳ ಹೆಡ ಮುಡಿಗಟ್ಟಿ ತನ್ನಿರಿ ಎಂದು7

ಸಾಲೆಡೆಯಲಿ ಭೇದ ಮಾಡಿ ಬಡಿಸುವಳ
ನೀಲಾಂಬರವನುಟ್ಟು ಮಡಿಯೆಂಬಳ
ಬಾಲಕರ ಬಡಿದಳಿಸುತಿಪ್ಪಳ ಹಿಂ
ಗಾಲ ತೊಳೆಯದವಳ ಎಳೆದು ತನ್ನಿರೋ ಎಂದು8

ಪತಿಗೆ ಬೇಕಾದವರ ಅಪಮಾನ ಮಾಳ್ಪಳ
ಮೃತವತ್ಸ ಗೋವಿನ ಪಾಲುಂಬಳಾ
ಹುತವಾದ ಅಗ್ನಿ ತೊಳೆದು ನಂದಿಸುವಳ
ಮತಿಗೇಡಿಯ ಬಿಡದೆಳೆದು ತನ್ನಿರೋ ಎಂದು 9
ಒಲಿವ ಔಷಧ ಮಾಡಿ ಪತಿಯ ಬಳಲಿಸುವಳ
ಮಲಮಕ್ಕಳೊಳು ಮತ್ಸರಿಸುತಿಪ್ಪಳಾ
ಕಳವಿಲಿ ಕಾಂತನ ಧನವ ವಂಚಿಸುವಳ
ಗಳಕೆ ಪಾಶವ ಕಟ್ಟ ಎಳೆದು ತನ್ನಿರೋ ಎಂದು 10
ಮಿಥ್ಯಾವಾದಿಯ ಕೂಡ ಸ್ನೇಹ ಮಾಳ್ಪಳಾ
ವೃತ್ತಿಲಿ ಬದುಕುವಳೆಳೆದು ತನ್ನಿರೋ ಎಂದು 11
ಲಶನು ವೃಂತಕಾದಿಗಳನು ಭಕ್ಷಿಸುವಳಾ
ಸೊಸೆಯರೊಡನೆ ಮತ್ಸರಿಸುತಿಪ್ಪಳಾ
ಹಸಿದು ಬಂದವರಿಗೆ ಅಶನವಿಲ್ಲೆಂಬಳಾ
ಉಸಿರು ಬಿಡದಂತೆ ಎಳೆದು ತನ್ನಿರೊ ಎಂದು 12
ತುಲಸಿ ವೃಂದಾವನಕಭಿನಮಿಸದವಳ
ಜಲವ ಸೋಸದೆ ಪಾನವ ಮಾಳ್ಪಳಾ
ಫಲ ಧಾನ್ಯಾದಿಗಳ ನೋಡದೆ ಪಾಕ ಮಾಳ್ಪಳ
ಮಳೆ ಗಾಳಿ ನಿಂದಿಪಳ ಎಳೆದು ತನ್ನಿರೋ ಎಂದ 13
ಮೀಸಲು ಮಡಿ ಎನ್ನದೆ ಭಕ್ಷಿಸುವಳ
ಕೇಶಿಯೊಡನೆ ಗೆಳೆತನ ಮಾಳ್ಪಳ
ದಾಸೆರಿಂದಲಿ ಪಾಕ ಪಾತ್ರೆ ಮುಟ್ಟಿಸುವಳ
ನಾಸಿಕ ಬಂಧಿಸಿ ಎಳೆ ತನ್ನಿರೋ 14
ಬಾಲಕರನು ತೊಟ್ಟ್ಟಿಲೊಳಿಟ್ಟು ತೂಗುತ
ಪಾಲೆರೆವುತ ಬೀಸುತ ಕಟ್ಟುತಾ
ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮೀ
ಲೋಲನ ಗುಣವ ಪಾಡುವರ ಮುಟ್ಟದಿರೆಂದು15
ಅರಿಷಣ ಕುಂಕುಮ ಪುಷ್ಟಾಂಜನ ವಸ್ತ್ರಾ
ಸರಸವಾಡುತ ಸುಖ ಹರಿಗೆ ಅರ್ಪಿತವೆಂಬ
ಹರಿದ್ದೇರಿದೆಡೆಗೆ ಕೈಮುಗಿದು ಬನ್ನಿರಿ ಎಂದು16
ಅಗಣಿತ ಮಹಿಮ ಶ್ರೀ ಜಗನ್ನಾಥ ವಿಠಲನ್ನ
ಬಗೆಬಗೆಯಿಂದ ಪಾಡುತಲೀ
ಹೊಗಳುವ ದಾಸರ ಬಗೆಯ ನೇಮಿಸಿ ಕಾಯ್ವ
ಸುಗುಣೇರಿದ್ದೆಡೆಗೆ ಕೈಮುಗಿದು ಬನ್ನಿರೆಂದು 17
**********