ಶ್ರೀ ಶ್ರೀನಿವಾಸ ಭಕುತರ ಪೋಷ
ಮಾಂ ಪಾಹಿ ಸುರೇಶ ಪ
ಆರಾಧಕ ಪರಿವಾರವ ಪೊರೆಯಲು
ಧಾರುಣಿಯೊಳು ಶಿರಿವಾರನಿವಾಸ ಅ.ಪ
ವಾರಿಜೋದ್ಭವ ಮುಖಸುರ ಸಂಶೇವ್ಯಫಣಿ
ರಾಜ ಸುಶಯ್ಯಾ ಸೇರಿಸೇವಿಪರಘ ತಿಮಿರಕೆ
ಸೂರ್ಯ ನೀರದ ನಿಭಕಾಯ ಧಾರುಣಿ ಸುರಪರಿ
ವಾರ ಸುಪೂಜಿತ ಮಾ ರಮಣನೆ
ಗುರುಮೂರುತಿ ಪ್ರಿಯ 1
ಕಂದರ್ಪನಯ್ಯ ಕವಿಜನಗೇಯ ಬಂಧುರ ಶುಭನಿಲಯ
ನಂದನಂದನ ಮಾಮುದ್ಧರ ಕೃಪಯಾನಾಮುಗಿವೆನು ಕೈಯ್ಯಾ
ಇಂದಿಗೂ ಬುಧ ಜನರಿಂದ ವೈಭವದಿ ಸ್ಯಂದನವೇರಿದ
ಸುಂದರಕಾಯಾ 2
ಇಳಿದೇವಾರ್ಪಿತ ಶ್ರೀ ತುಳಸಿಯ ಹಾರ ಪೀತಾಂಬರಧಾರ
ಪೊಳೆವಾ ಕುಂಡಲ ಮುಕುಟಾಲಂಕಾರ ಭೂಷಿತ ಶರೀರಾ
ಜಲಧಿ ಶಯನ ಮಂಗಳ ರೂಪನೆಭವ
ಜಲಧಿಯ ದಾಟಿಸೊ ಕಲುಷ ವಿದೂರ 3
ಕೃಷ್ಣರಾಯಾನೆಂಬುವ ಸದ್ಭಕ್ತ ಇರುತಿರಲು ವಿರಕ್ತ
ಸಾಷ್ಟಾಂಗ ನಮಸ್ಕøತಿ ಸೇವಾಸಕ್ತ ಗ್ರಾಮವ ರಕ್ಷಿಸುತ
ನಿಷ್ಠೆಯಿಂದ ಮನಮುಟ್ಟಿ ಭಜಿಸುತಿರೆ ಥಟ್ಟನೆ ವಲಿದಖಿ
ಲೇಷ್ಟ ಪ್ರದಾತಾ 4
ದೇಶಾದಾಗತ ಭಕುತರ ಅಭಿಲಾಷಾ ಪೂರೈಸಲು ಅನಿಶಾ
ವಾಸಾ ಮಾಡಿದಿ ಗಿರಿಯೊಳು ಸರ್ವೇಶ ಕೊಡು ಸತ್ಸಹವಾಸ
ದೇಶದಿ ಕಾರ್ಪರವಾಸ ಲಕ್ಷ್ಮಿನರಕೇಸರಿ ರೂಪನೆ
ಶೇಷಗಿರೀಶ5
****