..
ಗಡಾನೆ ವರ ಪಾಲಿಸೋ ಕೋಶಿಗಿಯೊಡೆಯ ಹನುಮನೆ ಪ
ತಡೆಯಾದೆ ತವ ಪಾದಯುಗಳ, ಜಡಜ ನಂಬಿದೆ ಅ.ಪ
ಕಡಲ ಲಂಘಿಸಿ ರಾಮನ ಮಡದಿಗುಂಗುರವನ್ನೆ ಇತ್ತು
ಸಡಗರದಿಂದವನ ನಗರ ಬಡಬಗೆ ನೀಡಿ ಬಂದೆ ನೀ 1
ದುರುಳ ದುಶ್ಯಾಸನುದರ ಕರುಳುಗಳಿಂದ ದುೃಪದ
ತರಳೆಯಳಾ ಮನಪೂರ್ತಿಸಿ ಹಿಂಗುರುಳು ಕಟ್ಟಿದ ಧೀರನೆ 2
ದಿಟ್ಟ ಮೋದತೀರ್ಥರೆÉನಿಸಿ ದುಷ್ಟ ಮಾಯಾವಾದ ಮತ
ಸುಟ್ಟ ಶ್ರೀ ಗುರುಜಗನ್ನಾಥ ವಿಠಲ ಪದ ಭಜಕನೆ 3
***