..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ವೆಂಕಟರಮಣ
ಧನ್ಯನಾದೆನು ಇಂದು ವೆಂಕಟನ ಕಂಡು
ಅನ್ಯರೊಬ್ಬರು ಇವಗೆ ಸರಿಪರರು ಇಲ್ಲ ಪ
ಅಮರರಿಗು ಮನುಜರಿಗು ಸರ್ವ ಪ್ರಾಣಿಗಳಿಗು
ಸ್ವಾಮಿ ರಕ್ಷಕ ಸರ್ವ ಪ್ರೇರಕನು ದೇವ
ಅಮರಾವತಿ ಸರಿತತೀರ ಗಿರಿಯಲಿ ನಿಂತ
ಪ್ರೇಮದಿಂದಲಿ ಭಜಿಸೆ ಅಭಯ ವರವೀವ 1
ಎನ್ನ ಕುಲದೇವನು ತಿರುಪತಿ ವೆಂಕಟನು
ತಾನೇವೆ ಭಕ್ತರಿಗೆ ಒಲಿಯೆ ಬಂದಿಹನು
ಅನಂತ ಗುಣಪರಿಪೂರ್ಣ ತನ್ನ ಸೇವಿಸುವರ
ಅನುಗಾಲ ರಕ್ಷಿಸುವ ಅನಿಮಿತ್ತಬಂಧು 2
ಮಧ್ವಮುನಿ ಹೃತ್ಸದನ ದೇವದೇವೋತ್ತಮನು
ಮಧ್ವಮುನಿ ಗುರುಸ್ವಾಮಿ ವಿಧಿತಾತ ಶ್ರೀಶ
ಶುದ್ಧಕಾರುಣ್ಯನಿಧಿ ಪ್ರಸನ್ನ ಶ್ರೀನಿವಾಸ
ಉದ್ಧರಿಪ ಸಂಸ್ಮರಿಸೆ ಇಹಪರದಿ ಎಂದೂ 3
***