Showing posts with label ಈತನೀಗ ವಿಜಯ ವಿಟ್ಠಲಾ manohara vittala. Show all posts
Showing posts with label ಈತನೀಗ ವಿಜಯ ವಿಟ್ಠಲಾ manohara vittala. Show all posts

Monday, 1 November 2021

ಈತನೀಗ ವಿಜಯ ವಿಟ್ಠಲಾ ankita manohara vittala

 ಈತನೀಗ ವಿಜಯ ವಿಟ್ಠಲಾ l ಈತನೀಗ ವಿಜಯ ವಿಟ್ಠಲಾ l

ಮಾತು ಮಾತಿಗೆ ನೆನೆಸಿದವರ ಪಾತಕಗಳ ಪರಿದು 

ಯಮನ ಯಾತನೆಯನ್ನು ಕಳೆದು ಪೊರೆವಾ ll ಪ ll


ಕರೆದರೊಂದೆ ನುಡಿಗೆ ಬಂದು l ಕರುಣದಿಂದ ಮುಂದೆನಿಂದು l

ಕರವಪಿಡಿದು ಅಂದು ಅಭಯ l ಕರವ ಪಾಲಿಸಿದ ದಯಾ ಸಿಂಧು l

ಪರಿಪರಿಯಿಂದಲಿ ಹಿಂದು ಮುಂದು l ದುರಿತದಿಂದ ನೊಂದು ಬಂದು l

ಇರಲು ದಾಸರದಾಸನೆಂದು ಮೊರೆ ವಿಚಾರಿಸಿ ಸಾಕಿದನಿಂದು ll 1 ll


ಅಚ್ಯುತಾನಂತನೆಂಬ ನಾಮಾ l ಅಚ್ಚು ಸುಧೆ ಯೆನಗೆ ನೇಮ l

ನಿಚ್ಚ ಉಣಲಿಕಿತ್ತ ಪ್ರೇಮಾ l ಚಚ್ಚಲದಲಿ ಪೂರ್ಣಕಾಮಾ l

ಹೆಚ್ಚಿ ಬಪ ಮದದಾಸ್ತೋಮ l ನುಚ್ಚು ಮಾಡಿ ಬಿಡುವ ಭೀಮಾ l

ನಿಚ್ಚ ಮನದ ಕುಮುದ ಸೋಮ l ಸುಚ್ಚರಿತ ಸಾರ್ವಭೌಮಾ ll 2 ll


ಮೊದಲೆ ಗುರು ಪುರಂದರದಾಸರ l ಹೃದಯದೊಳಗೆ ನಿಂದಾ ಶೃಂಗಾರಾ l

ಉದಧಿಯೋ ಇದು ಬಣ್ಣಿಸಬಲ್ಲರಾ l ತ್ರಿದಶರೊಳಗೆ ಕಾಣೆ ಜ್ಞಾನರ l

ಸದಮಲಾನಂದ ಪೂರ್ಣ ಇಂದಿರಾ l ಸದನಾ ಪ್ರತಾಪಗುಣ ಪಾರಾವಾರಾ l

ಚದುರ ವಿಜಯವಿಟ್ಠಲ ಗಂಭೀರಾ l ಪದೋಪದಿಗೆ ಎನ್ನಯ ಮನೋಹರ ll 3 ll

***