Showing posts with label ಜೋಗಿಯ ಕಂಡೆಪರಮಯೋಗಿಯ ಕಂಡೆ prasannavenkata. Show all posts
Showing posts with label ಜೋಗಿಯ ಕಂಡೆಪರಮಯೋಗಿಯ ಕಂಡೆ prasannavenkata. Show all posts

Monday, 11 November 2019

ಜೋಗಿಯ ಕಂಡೆಪರಮಯೋಗಿಯ ಕಂಡೆ ankita prasannavenkata

by ಪ್ರಸನ್ನವೆಂಕಟದಾಸರು
ಜೋಗಿಯ ಕಂಡೆಪರಮಯೋಗಿಯ ಕಂಡೆ ಭೋಗಿಶಯನಗಂಬೂರ ಚರ್ಚಿತಾಂಗ ವೆಂಕಟೇಶಪ.

ವೇದವ ಕದ್ದೊಯ್ದವನ ಕೊಂದ ಜೋಗಿಯ ಕಂಡೆಭೂಧರಧರನಾದ ಜೋಗಿಯ ಕಂಡೆಭೇದಿಸಿ ಪಾತಾಳ ಪೊಕ್ಕು ಗರ್ಜಿಪ ಜೋಗಿಯ ಕಂಡೆಆದರದಿ ಕಂದನ ನುಡಿಯನಾಲಿಸಿ ಬಂದ 1

ಅಂಗುಟದಿ ಬೊಮ್ಮಾಂಡವ ಸೀಳಿದ ಜೋಗಿಯ ಕಂಡೆಹೆಂಗಳ ತಲೆಯನರಿದ ಜೋಗಿಯ ಕಂಡೆಅಂಗನೆಗೋಸುಗಾರಣ್ಯ ಸಂಚಾರಿ ಜೋಗಿಯ ಕಂಡೆಪೊಂಗೊಳಲನೂದಿ ಮೂಜಗವನು ಮೋಹಿಸುವ 2

ಕನ್ಯೇರ ವ್ರತಗೇಡಿ ದಿಗಂಬರ ಜೋಗಿಯ ಕಂಡೆಉನ್ನತ ವಾಜಿಯೇರಿದ್ದ ಜೋಗಿಯ ಕಂಡೆಪನ್ನಗಾದ್ರಿವರದ ಪ್ರಸನ್ನವೆಂಕಟೇಶನೆಂಬತನ್ನ ನಂಬಿದವರನು ಬಿಡದೆ ಪಾಲಿಸುವ 3
*******