Showing posts with label ಲೀಲಾವತಾರನೇ ಸರ್ವ ಲೋಕಾಧಾರ kurmavatara prasannashreenivasa. Show all posts
Showing posts with label ಲೀಲಾವತಾರನೇ ಸರ್ವ ಲೋಕಾಧಾರ kurmavatara prasannashreenivasa. Show all posts

Thursday 5 August 2021

ಲೀಲಾವತಾರನೇ ಸರ್ವ ಲೋಕಾಧಾರ kurmavatara ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ಕೂರ್ಮ  - ಪ್ರಥಮ ಅಧ್ಯಾಯ - ಶ್ರೀ ಕೂರ್ಮ ಪ್ರಾದುರ್ಭಾವ

ಲೀಲಾವತಾರನೇ ಸರ್ವ ಲೋಕಾಧಾರ

ಮಾಲೋಲ ಸುಖಚಿತ್ ತನು ಕೂರ್ಮರೂಪ

ಪಾಲಾಬ್ಧಿಜಾಪತಿ ಅನಘ ಅಜಿತ ಧನ್ವಂತರಿ

ಲೀಲಾ ಮೋಹಿನಿ ಅನಘ ಶರಣು ಮಾಂಪಾಹಿ ಪ


ವೇದಾದಿ ಸಚ್ಛಾಶ್ರ(ಪ್ರ)ಮೇಯ ವೇದವತೀಶ

ಪದುಮಜಾಂಡವ ಪಡೆದ ಜಗದೇಕಭರ್ತಾ

ಅದ್ವಿತೀಯನು ಸ್ವಾಮಿ ಸಮರಧಿಕರಿಲ್ಲದವ

ವೇಧ ಮುಕ್ಕಣ್ಣಾದಿ ಸುರಸೇವ್ಯ ಪಾಹಿ 1

ಸತ್ಯ ಜÁ್ಞನಾನಂತ ಭೂಮಾದಿ ಗುಣನಿಧಿಯೇ

ಸತ್ಯಸೃಷ್ಟಿ ಮಾಳ್ಪಿ ಸತ್ಯನಾಮಾ

ಪ್ರತ್ಯಕ್ಷ ಪ್ರಮಾಣ ಸಿದ್ಧವು ಈ ಜಗತ್ತು

ತತ್ಸøಷ್ಟಿ ಪಾಲನಾದಿಗಳೆಲ್ಲ ಸತ್ಯ 2

ಸೃಷ್ಟಿ ಪ್ರವಾಹವು ಅನಾದಿಯೂ ನಿತ್ಯವೂ

ಘಟಾದಿ ಕಾರ್ಯಗಳ ಉಪಾದಾನ ಕಾರಣ

ಮೂಲ ಜಡಪ್ರಕೃತಿಯೂ ಅನಾದಿಯೂ ನಿತ್ಯವೂ

ಸೃಷ್ಟ್ಯಾದಿಕರ್ತಾ ನಿನ್ನಾಧೀನವು ಎಲ್ಲಾ 3

ಕಾರ್ಯಕಾರಣಾತ್ಮಕ ಜಗತ್ತು ಸರ್ವಕ್ಕೂ

ತೋಯಜಾಕ್ಷನೇ ನೀನು ನಿಮಿತ್ತ ಕಾರಣನು

ನಿಯಾಮಕನು ನೀನೇವೇ ಚಿದಚಿತ್ ಅಖಿಳಕ್ಕೂ

ಅನ್ಯರಿಗೆ ಸ್ವಾತಂತ್ರ್ಯ ಸಾಮಥ್ರ್ಯವಿಲ್ಲ 4

ವಿಧಿ ಶಿವಾದಿ ಸರ್ವ ಸುರಾಸುರರುಗಳಿಗೆ

ಸತ್ತಾಪ್ರತೀತಿ ಪ್ರವೃತ್ತಿಪ್ರದ ಹರಿಯೇ

ಭೂತಭವ್ಯ ಭವತ್ಪ್ರಭುವು ವಿಷ್ಣು ನೀನೇವೇ

ಚೇತನಾ ಚೇತನಾಧಾರ ಸರ್ವತ್ರ 5

ದೂರ್ವಾಸರ ಶಾಪ ನಿಮಿತ್ತದಿ ಸ್ವರ್ಗದ

ಐಶ್ವರ್ಯವು ಕ್ಷಿಣವು ಆಗಿ ಬಹುವಿಧದಿ

ದೇವಶತೃಗಳ ಬಲ ಉನ್ನಾಹವಾಗಲು

ದೇವರಾಜನು ಬ್ರಹ್ಮನಲ್ಲಿ ಪೋದ 6

ವಾಸವ ವರುಣಾದಿ ಸುರರ ಮೊರೆ ಕೇಳಿ

ಬಿಸಜಸಂಭವ ಶಿವ ಶಕ್ರಾದಿಗಳ ಕೂಡಿ

ಶ್ರೀಶನೇ ರಕ್ಷಕನು ಎಂದು ನಿನ್ನಲ್ಲಿ ಬಂದು

ಸಂಸ್ತುತಿಸಿದನು ಪರಮ ಪೂರುಷ ನಿನ್ನನ್ನ 7

ಅವ್ಯಯನೇ ಸತ್ಯನೇ ಅನಂತನೇ ಅನಘನೇ

ಶ್ರೀವರನೇ ಪೂರ್ಣೈಶ್ವರ್ಯ ಮಹಾಪುರುಷ

ದೇವವರೇಣ್ಯ ನಿನ್ನಲ್ಲಿ ಸ್ತುತಿ ಬ್ರಹ್ಮ

ಸುವಿನಯದಿ ಮಾಡಿದ ವೇದಾರ್ಥಸಾರ 8

ಸಹಸ್ರಾರ್ಕೋದಯ ದ್ಯುತಿ ಸುಂದರರೂಪ

ಮಹಾರ್ಹ ಭಗವಂತ ಹರಿ ಈಶ್ವರನೇ ನೀನು

ಬ್ರಹ್ಮಾದಿಗಳ ಸ್ತುತಿಗೆ ಪ್ರಸನ್ನನು ಆಗಿ

ಮಹಾನುಭಾವ ನೀ ಒಲಿದಿ ಕೃಪೆಯಿಂದ 9

ಪದುಮನಾಭನೇ ನಿರ್ವಾಣ ಸುಖಾರ್ಣವನೇ

ಪದುಮಭವ ಸನ್ನಮಿಸಿ ಪೇಳಿದ್ದ ಕೇಳಿ

ಸಿಂಧುವ ಮಥನ ಮಾಡಲಿಕೆ ಬೇಕು ಎಂದಿ

ಅದರ ಬಗ್ಗೆ ಉಪಾಯವ ಅರುಹಿದಿ ವಿಭುವೇ 10

ಕ್ಷೀರಾಬ್ಧಿಯಲಿ ವೀರು ತೃಣ ಲತೌಷಧಿ ಇಟ್ಟು

ಗಿರಿಶ್ರೇಷ್ಠ ಮಂದರವ ಕಡೆಗೋಲು ಮಾಡಿ

ವರಸರ್ಪ ವಾಸುಕಿಯ ಹಗ್ಗ ಮಾಡಿ ಮಥಿಸಿ

ಅಮೃತೋತ್ಪಾದನ ಯತ್ನಿಪುದು ಎಂದಿ 11

ದೈತ್ಯ ದಾನವರೆಲ್ಲ ಶತೃಗಳು ಆದರೂ

ಸಂಧಿಯ ಅವರೊಡೆ ಮಾಡಿ ಕೂಡಿ

ಮಂದರವ ಸಿಂಧುವಲಿ ತಂದಿಟ್ಟು ಮಥಿಸುವುದು

ಸುಧೆಯ ಉತ್ಪಾದನಕೆ ಉಪಾಯ ಇದು ಎಂದಿ 12

ದೈತ್ಯರ ಸಹಕಾರ ಬಗೆ ಯುಕ್ತಿಗಳ ಪೇಳಿ

ಭೀತಿ ಪಡಬೇಡ ವಿಷ ಉಕ್ಕಿ ಬರುವಾಗ

ಅದಿತಜರಿಗೇವೇ ಫಲ ಲಭಿಸುವುದು ಎಂದು

ದಿತಿಜರಿಗೆ ಕ್ಲೇಶ ಭವಿಸುವುದು ಎಂದಿ 13

ಪುರುಷೋತ್ತಮ ಜಗತಃಪತಿ ಅಜಿತನಾಮಾ

ಸುರರಿಗೆ ಬೋಧಿಸಿದ ರೀತಿ ಅನುಸರಿಸಿ

ಶಕ್ರಾದಿಗಳು ವೈರೋಚನಾದಿಗಳೊಡೆ

ತ್ವರಿತ ಯತ್ನಿಸಿದರು ಕಡಲ ಮಥನಕ್ಕೆ 14

ದೂರದಲ್ಲಿ ಇದ್ದ ಆ ಅತಿಭಾರ ಗಿರಿಯನ್ನ

ಸುರರು ದಾನವರೆತ್ತಿ ಸಮುದ್ರ ತಟಕೆ

ತರಲು ಬಹು ಯತ್ನಿಸಿದರು ವ್ಯರ್ಥದಿ

ಗಿರಿಯ ಭೂ ಮೇಲೆತ್ತೆ ಅಸಮರ್ಥರು 15

ಮೇರುಗಿರಿ ಬದಿ ಇದ್ದ ಮಂದರಾಚಲವು

ರುದ್ರ ರುದ್ರವರ ಬಲಯುತವು ಎತ್ತಲು ಅಶಕ್ಯ

ಸುರದಾನವರು ಬೆರಗಾಗೇ ಒಂದೇ ಕರದಿಂ

ಗಿರಿಯ ನೀ ಎತ್ತಿ ಗರುಡನ ಮೇಲೆ ಇಟ್ಟಿ 16

ಗರುಡನಿಂದ ತಮ್ಮ ಮೇಲೆ ಇರಿಸೆ ಪರಿಕ್ಷಾರ್ಥ

ಭಾರ ತಾಳದೇ ಸುರಾಸುರರು ಹತರಾಗೇ

ಕಾರುಣ್ಯ ನೋಟದಿ ಬದುಕಿಸಿದಿ ಮೃತರನ್ನ

ತೀವ್ರ ಗಾಯಗಳನ್ನ ಸೌಖ್ಯ ಮಾಡಿದಿಯೋ 17

ಲೀಲೆಯಿಂದಲಿ ಪುನಃ ಒಂದೇ ಹಸ್ತದಿ ಗಿರಿಯ

ಮೇಲೆತ್ತಿ ಗರುಡನ ಹೆಗಲಲಿಟ್ಟು ಕುಳಿತು

ಪಾಲಸಾಗರದಲ್ಲಿ ಸ್ಥಾಪಿಸಿ ಮಥನಕ್ಕೆ

ವ್ಯಾಳನ ಹಗ್ಗದಂದದಿ ಸುತ್ತಿಸಿದಿಯೋ 18

ಪುಚ್ಛಭಾಗವು ಅಮಂಗಳವು ಬೇಡವೆಂದು

ಅಸುರರ ವಾದಾ ಮುಖಭಾಗ ಹಿಡಿಯೇ

ವಾಸುಕಿಯ ಪುಚ್ಛಾಂಗ ದೇವತೆಗಳು ಹಿಡಿದು

ಶ್ರೀಶ ನೀ ಸಹಕರಿಸೆ ಮಥನವ ಮಾಡಿದರು 19

ಪರಮ ಯತ್ನದಿ ಅಮೃತಾರ್ಥ ಪಯೋನಿಧಿಯ

ಗಿರಿಯಿಂದ ಮಂಥನ ಸುರಾಸುರರು ಮಾಡೆ

ಪರಮಗುರುತರ ಅದ್ರಿ ಆಧಾರವಿಲ್ಲದೆ

ಸರಿದು ಮುಳುಗಿ ಬೇಗ ಕೆಳಗಡೆ ಹೋಯಿತು 20

ಶೈಲವು ಮುಳುಗಲು ಸುಧಾಕಾಂಕ್ಷಿಗಳ ಮನ

ವ್ಯಾಕುಲದಿ ಮುಖಕಾಂತಿ ಮ್ಲೌನವು ಆಯಿತು

ಎಲ್ಲಾ ಶ್ರಮವು ವ್ಯರ್ಥ ಎಂದು ಬೆರಗಾಗಿರೆ

ಬಲು ಕೃಪೆಯಲಿ ನೀನು ಒದಗಿದಿ ಆಗ 21

ಅದ್ಭುತ್ ಮಹತ್ ಕಚ್ಛಪ ರೂಪದಲಿ ನೀ

ಅಬ್ಧಿಯಲಿ ಬೇಗನೇ ಬಂದು ಮೇಲೆ

ಎಬ್ಬಿಸಿದಿ ಆ ಮಂದರಾಚಲಗಿರಿಯ

ಸುಬಲ ಪೂರುಷ ನಮೋ ಚಿನ್ಮೋದಗಾತ್ರ 22

ಚನ್ಮೋದಮಯ ಮಹಾ ಕೂರ್ಮ ರೂಪನೇ ನಿನ್ನ

ಅಮಿತ ಸುಬಲ ಲಕ್ಷ ಯೋಜನ ವಿಸ್ತಾರ

ಸುಮಹಾ ದ್ವೀಪದಂದಿರುವ ಪೃಷ್ಠದ ಮೇಲೆ

ಆ ಮಹಾದ್ರಿಯ ಹೊತ್ತಿ ಪುನರ್ ಮಥಿಸಲೊದಗಿದಿ 23

ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧೀಶ

ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ

ವನಜಭವಪಿತ ಶ್ರೀಪ್ರಸನ್ನ ಶ್ರೀನಿವಾಸ

ಧನ್ವಂತರೀ ಶರಣು ಅಜಿತ ಸ್ತ್ರೀ ಕೂರ್ಮ 24

-ಇತಿ ಪ್ರಥಮಾಧ್ಯಾಯ ಸಂಪೂರ್ಣಂ-

***

ದ್ವಿತೀಯ ಅಧ್ಯಾಯ - ನೀಲಕಂಠ ವೃತ್ತಾಂತ

ಲೀಲಾವತಾರನೇ ಸರ್ವಲೋಕಾಧಾರ

ಮಾಲೋಲ ಸುಖಚಿತ್ ಕೂರ್ಮರೂಪ

ಪಾಲಾಬ್ಧಿಜಾಪತಿ ಅಜಿತ ಧನ್ವಂತರೀ

ಲೀಲಾ ಮೋಹಿನಿ ಅನಘ ಶರಣು ಮಾಂಪಾಹಿ ಪ


ಸಿರಿವರ ಹರಿ ಕೂರ್ಮನ ಪೃಷ್ಠೋಪರಿನಿಂತ

ಗಿರಿಯಿಂದ ಅಸುರರು ಸುರರು ಪುನರ್ಮಥಿಸೆ

ಗಿರ್ಗಿರಿ ಗಿರಿ ಗಿರಿ ಎಂದು ಭ್ರಮಿಸಿತು ಗಿರಿಯು

ಪರಿಮಳ ಪೂ ಸುರಿಸಿದರು ಬ್ರಹ್ಮಾದಿಗಳು 1

ವಾಸುಕಿ ತಾಳದೇ ಬುಸು ಬುಸು ಎಂದು ಮೇಲ್

ಶ್ವಾಸದಿ ವಿಷಜ್ವಾಲೆ ಹೊರಗೆ ಬಿಡಲು

ಅಸುರ ಬಲಿ ಇಲ್ವಾದಿಗಳು ಬಿಸಿ ಸಹಿಸದೇ

ಘಾಸಿ ಹೊಂದಿದರು ದಾವಾಗ್ನಿ ಪೀಡಿತರ ಪÉೂೀಲ್ 2

ದಿತಿಜರು ಅದಿತಿಜರು ಎಷ್ಟೇ ಯತ್ನಿಸಿದರೂ

ಸುಧಾ ಇನ್ನೂ ಪುಟ್ಟದೇ ಇರುವುದ ಕಂಡು

ದಂತ ಶೂಕವ ಆಗ ಸ್ವಯಂ ನೀನೇ ಹಿಡಿದು

ಮಥನ ಮಾಡಿದಿ ಸ್ವಾಮಿ ಕಾರುಣ್ಯದಿಂದ 3

ಪೀತಾಂಬರಿ ಸುಖ ಚಿನ್ಮಾತ್ರ ಚಾರ್ವಾಂಗ

ಸದಾ ನಮೋ ಶರಣಾದೆ ಲೋಹಿತಾಕ್ಷ

ದಿತಿಜಾ ಅದಿತಿಜಾರೊಡೆ ನೀನು ಸಹಮಥಿಸಲು

ಲತಾ ಓಷಧಿ ಕಲುಕಿ ಉಕ್ಕಿತು ಸಿಂಧು 4

ಹಾಹಾ ಭಯಂಕರವು ಇದೇನು ಲೋಕಗಳ

ದಹಿಸುವಂದದಿ ಫೇಣ ಉಕ್ಕಿ ಬರುತಿದೆಯು

ಮಹಾ ವೀರ್ಯತರ ಹಾಲಾಹಲವೆಂಬ ವಿಷ ಇದು

ಮಹೀಭರ್ತಾ ಮಹಾದೇವ ಮಹಾದ್ರಿದೃತ್ ಪಾಹಿ 5

ಅಸಮ ಸ್ವಾತಂತ್ರ್ಯ ನಿಜಶಕ್ತಿ ಪರಿಪೂರ್ಣ

ವಿಶ್ವರಕ್ಷಕ ನೀ ವಿಷಭಯ ನಿವಾರಿಸೆ

ಸ್ವಸಮರ್ಥನಾದರೂ ಭೃತ್ಯರ ಕೀರ್ತಿಯ

ಪ್ರಸರಿಸೆ ಒದಗಿದಿ ಮಹಾದೇವ ಶಾಸ್ತ 6

ಮಹತ್ ಎಂಬ ಬ್ರಹ್ಮನ ಸ್ವಾಮಿ ಆದುದರಿಂದ

ಮಹಾದೇವ ಎಂಬುವ ನಾಮ ನಿನ್ನದೇವೇ

ಮಹಾದೇವ ಶಿವ ಈಶ ರುದ್ರಾದಿ ಶಬ್ದಗಳು

ಮಹಾಮುಖ್ಯ ವೃತ್ತಿಯಲಿ ನಿನಗೇವೇ ವಾಚಕವು 7

ಭಸ್ಮಧರ ದೇವನಿಗೆ ಮಹಾದೇವ ಎಂಬುವ

ನಾಮ ಔಪಚಾರಿಕದಲ್ಲೇವೇ ರೂಢ

ಬ್ರಹ್ಮನಾಮನು ನೀನೇ ಬ್ರಹ್ಮಾಂತರ್ಯಾಮಿಯು

ಬ್ರಹ್ಮನೊಳು ಇದ್ದು ನೀ ಭುವನಂಗಳ ಪಡೆವಿ 8

ರುದ್ರ ನಾಮನು ನೀನೇ ರುದ್ರಾಂತರ್ಯಾಮಿಯು

ರುದ್ರನೊಳು ಇದ್ದು ನೀ ಸಂಹಾರವ ಮಾಡುವಿ

ತತ್‍ತತ್ರಸ್ಥಿತೋ ವಿಷ್ಣುಃ ತತ್‍ಚ್ಛಕ್ತಿ ಪ್ರಬೋಧÀಯನ್

ರುದ್ರನಿಂ ವಿಷಪಾನ ನಿನ್ನ ನಿಯಮನವೇ 9

ಶಕ್ರಾದಿ ಸರ್ವರಿಗೂ ಗುರು ಆಶ್ರಯನು ಶಂಕರನು

ಶಂಕರನಿಗೆ ಆಶ್ರಯನು ಗುರುಮುಖ್ಯವಾಯು

ಮುಖ್ಯವಾಯುಗಾಶ್ರಯ ಶ್ರೀಕಾಂತ ನೀನು

ಶ್ರೀಕಾಂತ ನೀನೇವೇ ಸರ್ವಾಶ್ರಯ ಅನೀಶ 10

ಯಾವ ಮಹಾದೇವನೊಲಿಯದೇ ವಾಯು ಒಲಿಯ

ಆ ವಾಯು ಒಲಿಯದೇ ಹರಿ ತಾನೂ ಒಲಿಯ

ಆ ವಾಯು ಹರಿಒಲಿಯದಿರೆ ಬೇರೆ ಗತಿಇಲ್ಲ

ಆ ವಾಯು ಹರಿಧಾಮ ಮಹಾದೇವ ಸ್ತುತ್ಯ 11

ಸರ್ವಾಂತರ್ಯಾಮಿ ಯಾವನಲಿ ಪ್ರಸನ್ನನು ಆಗಿ

ಯಾವನ ಮೂಲಕ ಶಕ್ರಾದಿಗಳ ಕಷ್ಟ

ತೀವ್ರದಿ ಪೋಗುವುದೋ ಆ ಮಹಾದೇವನ ಸ್ತುತಿಸಿದರು ಸುರರು

ಶಿವಾಂತರ್ಯಾಮಿ ಶ್ರೀಹರಿ ಮಹಿಮೆಗಳ ಕೂಡಿ 12

ಕರತಲೀಕೃತ್ಯ ಹಾಲಾಹಲ ವಿಷವ

ಶಕ್ರಾದಿ ಜನರಲ್ಲಿ ಕೃಪೆ ಮಾಡಿ ಉಂಡು

ಕರುಣಾಳು ಮಹಾದೇವ ಭೂತದಯಾಪರನು ಈ

ಹರಿಭಕ್ತಾಗ್ರಣಿ ಶಿವ ಉಮೇಶನಿಗೆ ಶರಣು 13

ಹರಿ ಬ್ರಹ್ಮ ಪಾರ್ವತಿ ಪ್ರಜೇಶ್ವರರು

ಹರನ ಈ ಮಹತ್ಸೇವೆ ಬಹು ಶ್ಲಾಘಿಸಿದರು

ಕರದಿಂದ ಕೆಳಗೆ ಪ್ರಸ್ಕನ್ನ ಗರವಾದ್ದು

ಸರೀಸೃಪ ವೃಶ್ಚಿಕಾದಿಗಳೊಳು ಸೇರಿತು 14

ಗರವು ಭೂಷಣವಾಯಿತು ವೈರಾಗ್ಯಾಧಿಪ ಶಿವಗೆ

ಸುಪ್ರಸಿದ್ಧನು ಆದ ನೀಲಕಂಠನೆಂದು

ಧೀರ ಕರುಣಾಂಬುನಿಧಿ ನಂಜುಂಡೇಶ್ವರನು ಈ

ಗಿರಿಜೇಶನಿಗೆ ನಾ ನಮಿಪೆ ಶರಣೆಂದು 15

ಈ ಕೃಪಾಕರ ನೀಲಕಂಠ ಕರತಲೀಕೃತ್ಯ

ಆ ಕಾಲಕೂಟವಿಷ ಉಂಡ ಮಹತ್ಕಾರ್ಯ

ಸಂಕೀರ್ತಿ ಪೇಳಿರುವುದು ಶ್ರೀ ಭಾಗವತದಿ

ಬಾಕಿ ಬಹು ಮಹೋಲ್ಪಣ ವಿಷ ವಿಷಯ ಶೃತಿ ವೇದ್ಯ 16

ಉರಗಭೂಷಣ ವಿಪ ಉರಗಪರುಗಳಿಗಿಂತ

ನೂರುಗುಣ ಎಂಬುದಕೆ ಅತ್ಯಧಿಕ ಬಲಿಯು

ವರಮುಖ್ಯ ಪ್ರಾಣ ಜಗತ್ ಪ್ರಾಣಗೆ ಸಮರಿಲ್ಲ

ನೀರಜಜಾಂಡದಿ ಎಲ್ಲೂ ಶರಣೆಂಬೆ ಇವಗೆ 17

ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧಾರ

ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ

ವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸ

ಧನ್ವಂತರಿ ಶರಣು ಅಜಿತ ಸ್ತ್ರೀ ಕೂರ್ಮ

***