..
ನೀಲಕಂಠನ ಸುತಗಭಿನಮಿಸಿ ಆದಿಬ್ರಹ್ಮನ ಸತಿಯಳ ಭಜಿಸಿ
ನೀಲವರ್ಣನು ಲಕ್ಷ್ಮೀಲೋಲನ ದಯದಿಂದ
ಪಾಲಿಸಿದರೆ ಪಾಡಿ ಪೊಗಳುವೆನು ಪ
ಜಯ ಜಯ ಭೀಮ ಭಾರತಿಗೆ
ಜಯ ಜಯ ಧರ್ಮ ಭೀಮಾರ್ಜುನರಿಗೆ
ಜಯ ದ್ರೌಪದಿ ನಕುಲ ಸಾದೇವಗೆ
.......... ........... ............ 1
ಉಕ್ಕುವೊಯೆಣ್ಣೆಯೊಳಗೆ ನೋಡಿ
ಮಚ್ಛ ಎಸೆÉಯಲು ಮಗಳ ನಾನು
ಕೊಟ್ಟೇನೆನುತ ಪರಮುತ್ಸವದಿಂದಲಿ
ಪೃಥಿವಿರಾಯರಿಗ್ವಾಲೆ ಬರೆದ ರಾಯ 2
ದಿಕ್ಕು ದಿಕ್ಕಿನ ರಾಜರು ಬರಲು
ಕೃಷ್ಣ್ಣೆಸ್ವಯಂವರ ನೋಡಬೇಕೆನುತ
ವಿಪ್ರವೇಷವÀ ಧರಿಸಿ ಹೆತ್ತಮ್ಮನ ಸಹಿತಾಗಿ
ಸತ್ಯಪಾಂಡವರು ಬಂದರು ಬ್ಯಾಗ 3
ಬಲವಂತ ರಾಯರೆಲ್ಲರು ತಾವು
ಬಲುಮೆಯಿಂದಲಿ ಧನುವೆತ್ತಿ ಬೀಳೆ
ಹಲಧರನನುಜ ತಾ ಚೆಲುವ ಪಾರ್ಥನ ನೋಡಿ
ಬಲವಕೊಟ್ಟನು ಭೀಮಾರ್ಜುನಗೆ 4
ಸಾದೇವನನುಜ ಸುಂದರ ಪಾರ್ಥ
ಆದಿಮೂರುತಿಯ ಪಾದಕ್ಕೆ ನಮಿಸಿ
ಕಾದಯೆಣ್ಣೆಯ ನೋಡಿ ಕಟ್ಟಿದ ಮೀನವ
ತಾ ಧನುವೆತ್ತಿ ಹೊಡೆದನಾಗ 5
ಚೆಲ್ಲೆಗಂಗಳ ದ್ರೌಪದಿದೇವಿ
ವಲ್ಲಭ ಪಾರ್ಥಗೊಲಿದು ಬ್ಯಾಗ
ಮಲ್ಲಮರ್ದನಸಖನಲ್ಲಿ ನಡೆದು ಬಂದು
ಮಲ್ಲಿಗೆ ಮಾಲೆ ಹಾಕಿದಳಾಗ 6
ವೀರ ಶೂರರೊ ವಿಪ್ರ ಕ್ಷತ್ರಿಯರೊ
ದಾವಕುಲವೊ ನೆಲೆ ಕಾಣದಲೆ
ಮಾಜದೆ ನಿಮ್ಮ ಮರ್ಮಗಳ್ಹೇಳಬೇಕೆಂದು
ಕೇಳುತ್ತಿದ್ದನು ಕಂಗೆಡುತ ರಾಯ 7
ಮಚ್ಛಯೆಸೆಯಲು ಮಗಳ ನಾನು
ಕೊಟ್ಟೇನೆನುತ ನಿಶ್ಚಯವ ಮಾಡಿ
ಇಷ್ಟುವಿಚಾರದಿಂದೀಗೇನು ಫಲವೆಂದು
ಸತ್ಯಧರ್ಮಜ ನುಡಿದನು ನಗುತ 8
ಕೇಳುತ ಕುಂತಿಸುತರುಯೆಂದು
ಭಾಳ ಸಂಭ್ರಮದಿ ಪಾದವ ತೊಳೆಯೆ
ಸಾಲಾಗಿ ಐವರು ಕಾಲ ನೀಡಲು ಕಂಡು
ತಾ ಜಾರಿ ಹಿಂದಕ್ಕೆ ಸರಿದ ರಾಜ9
ಸತ್ಯವತಿಯ ಸುತರ್ಹೇಳುತಿರೆ
ಮತ್ತಾಗೆರೆದನು ಮಗಳ ಧಾರೆ
ಮುತ್ತು ಮಾಣಿಕ್ಯದ ಮಂಗಳಸೂತ್ರವ ಕಟ್ಟಿ
ಕೊಟ್ಟನೈವರಿಗೆ ದ್ರೌಪದಿಯನಾಗ 10
ಲಾಜಾಹೋಮವು ಭೂಮಾನಂತರದಿ
ಮೂರ್ಜಗದೊಡೆಯ ಕೃಷ್ಣನ ಸಹಿತ
ರಾಜಾಧಿರಾಜರೈವರು ಕುಳಿತಿರೆ ಕೃಷ್ಣ
ರಾಜ ಧರ್ಮರ ವಾಮಭಾಗದಲಿ 11
ರುಕ್ಮಿಣಿದೇವಿ ಪಾರ್ವತಿ ಗಂಗಾ
ಸತ್ಯಭಾಮೇರ ಸಹಿತಾಗಿ ಬಂದು
ಸತ್ಯ ಪಾಂಡವರಿಗೂಟಣಿ (ಉರುಟಣೆ?) ಮಾಡಬೇಕೆಂದು
ಕೃಷ್ಣೆ ನೀಯೇಳೆಯೇಳೆನುತಿದ್ದರು 12
ಕಂಜನೈಯ್ಯನು ಕಡೆನೋಟದಲಿ
ತಂಗಿ ಕೃಷ್ಣೆಯ ಮುಖವನು ನೋಡಿ
ಅಂಜದಲ್ಹೇಳುತಲೈವರ ಗುಣಗಳ
ಹಂಗೀಸೂಟಾಣಿ ಮಾಡಬೇಕೆಂದನು 13
ಕನ್ನೆ ದ್ರೌಪದಿ ಅರಿಷಿಣ ಪಿಡಿದು
ತನ್ನ ಪತಿಗೆ ಎದುರಾಗಿ ನಿಂತು
ಸುಮ್ಮನೆ ರಾಜ್ಯವ ಬಿಟ್ಟು ವನವನಾ ತಿರುಗೋ
ಧsÀರ್ಮರೇ ನಿಮ್ಮ ಮುಖ ತೋರಿರೆಂದಳು 14
ಕಂಕಭಟ್ಟೆನಿಸುವೊ ದೊರೆಗಳಿಗೆ
ಕುಂಕುಮ ಹಚ್ಚುವೆ ಕುಶಲದಿಂದ
ಪಂಚಾಂಗ ಪಠಿಸುವ ಪಾಣಿಯ ಪಿಡಿದು ನಾ
ಮುಂಚೆ ಗಂಧವ ಹಚ್ಚುವೆನೆಂದಳು 15
ಅಷ್ಟಪದವಿ ಲೆತ್ತದ ಪಣಕೆ-
ಯಿಟ್ಟಸತಿಯ ಅನುಜರನೆಲ್ಲ
ಗಟ್ಟಿ ಹೃದಯಕ್ಕೆ ಬುಕ್ಕಿ ್ಹಟ್ಟು ಪರಿಮಳ ಹಚ್ಚಿ
ಅಚ್ಚ ಮಲ್ಲಿಗೆ ಹಾರ ಹಾಕುವೆನೆಂದಳು 16
ಶಾಂತಧರ್ಮರ ಚರಣಕ್ಕೆ ಎರಗಿ
ಮಂತ್ರಿಭೀಮನ ಮುಂಭಾಗದಲಿ
ನಿಂತು ಅರಿಷಿಣ ಕುಂಕುಮವ ಹಿಡಿಂಬಿಯ
ಕಾಂತರ ಮುಖಕ್ಕೆ ಹಚ್ಚುವೆನೆಂದಳು 17
ಬಂದೇಕಚಕ್ರನಗರದಲ್ಲಿ
ಬಂಡಿಲನ್ನವನುಂಡು ¨ಕಾಸುರನ
ತುಂಡು ಮಾಡ್ಯವನ ತೋರಣ ಕಟ್ಟಿದ ತೋಳಿಗೆ
ಗಂಧವ ಹಚ್ಚೇನೆಂದಳು ನಗುತ 18
ಇಟ್ಟ ವಿಷದ ಲಡ್ಡಿಗೆಯ ಮೆದ್ದು
ಭಿಕ್ಷÀದನ್ನವು ಬರಿಯಾಗದಲೆ
ಹುಟ್ಟುಹಿಡಿದು ಅಟ್ಟುಂಬೋ ಪುರುಷರಿಗೆ ಬು-
ಕ್ಕಿ ್ಹಟ್ಟು ಪರಿಮಳ ಹಾಕುವೆನೆಂದಳು 19
ಕಪಿಗಳೊಳಗೆ ಶ್ರೇಷ್ಠರುಯೆನಿಸಿ
ಅತಿ ಬ್ಯಾಗದಿಂದ ಕೌರವರ ಕುಲ
ಹತವ ಮಾಡ್ಯತಿಯಾಗೋ ಪತಿಗೆ ಮಾಲೆಯ ಹಾಕಿ
ಅತಿ ಭಕ್ತಿಲಿಂದೆರಗಿದಳಾಗ 20
ಸರಸಿಜಮುಖಿ ದ್ರೌಪದಿದೇವಿ
ಅರಸು ಅರ್ಜುನಗೆದುರಾಗಿ ನಿಂತು
ಅರಿಷಿಣ ಕುಂಕುಮ ಪಿಡಿದು ಸ್ತ್ರೀರೂಪವ
ಧರಿಸುವ ನಿಮ್ಮ ಮುಖ ತೋ(ರಿ)ರೆಂದಳು 21
ಗಾಂಧಾರಿ ಗೌರಿಪೂಜಿಸೆ ಛಲದಿ
ತಂದು ಗಜವ ತೋ (sorry incomplete?)
***