Showing posts with label ಅಂಗಳದೊಳಗಾಡಬಾರಯ್ಯ ಮುದ್ದು ರಂಗ bheemesha krishna ANGALADOLAGAADABAARAYYA MUDDU RANGA. Show all posts
Showing posts with label ಅಂಗಳದೊಳಗಾಡಬಾರಯ್ಯ ಮುದ್ದು ರಂಗ bheemesha krishna ANGALADOLAGAADABAARAYYA MUDDU RANGA. Show all posts

Tuesday, 5 October 2021

ಅಂಗಳದೊಳಗಾಡಬಾರಯ್ಯ ಮುದ್ದು ರಂಗ ankita bheemesha krishna ANGALADOLAGAADABAARAYYA MUDDU RANGA

---ಹರಪನಹಳ್ಳಿ ಭೀಮವ್ವ
ಅಂಗಳದೊಳ ಗಾಡಬಾರಯ್ಯ ಮುದ್ದು
ರಂಗ ನಿನ್ನಯ ಮುಖದೋರಯ್ಯ ||ಪ||

ಅರ್ಧರಾತ್ರಿಯಲ್ಲವತರಿಸಿದ್ಯೊ , ಹೋಗಿ
ಮುದ್ದು ಗೋಪಿಯ ಸುತನೆನಿಸಿದ್ಯೊ
ಭದ್ರದೇವಿಯರ ನೀ ಕಳಿಸಿದ್ಯೊ , ಬಂ-
ದಿದ್ದ  ಪೂತನಿಯ ಸಂಹರಿಸಿದ್ಯೊ    ||೧||

ವತ್ಸಕಾಯುತಲ್ಹೋಗಿ ವನದೊಳು ಬಂದ
ಕಿಚ್ಚು ನುಂಗಿದೆ ನಿನ್ವದನದೊಳು
ಸ್ವಚ್ಛಮಾಡಿದಿ ಕಾಳಿಜಲಗಳು ತೋರೆ
ಕುಕ್ಷಿಯೊಳಗೆ ತ್ರಿಜಗಂಗಳು     ||೨||

ದೇವಕ್ಕಿದೇವಿ ಯಶೋದಾನೆ ವಸು-
ದೇವ ನಂದ ಬಲರಾಮಗೆ ಎದುರು
ಬಾರೋ ಭೂದೇವಿರಮಣನೆ
ಭೀಮೇಶ ಕೃಷ್ಣನೆ ಶ್ಯಾಮವರಣನೆ ||೩||
*********