Showing posts with label ರಾಘವೇಂದ್ರ ಗುರು ಪಾವನಕಾಯ vijaya vittala. Show all posts
Showing posts with label ರಾಘವೇಂದ್ರ ಗುರು ಪಾವನಕಾಯ vijaya vittala. Show all posts

Thursday, 17 October 2019

ರಾಘವೇಂದ್ರ ಗುರು ಪಾವನಕಾಯ ankita vijaya vittala

ರಾಘವೇಂದ್ರ ಗುರು ಪಾವನಕಾಯ
ರಾಘವೇ೦ದ್ರ ಮ೦ತ್ರಾಲಯ ನಿಲಯ            || ಪ ||

ರಾಘವೇ೦ದ್ರ ದುರಿತೌಘ ಪರಿಹಾರ
ರಾಘವೇಶನ ಪಾದವನಜಾರಾಧಕ          || ೧ ||

ಶರಣು ಹೊಕ್ಕೆನು ಇ೦ದುಕಿರಣ ಪೋಲುವ ಚರಣ
ಸ್ಮರಣೆ ಕರುಣಿಸುವುದು ಕರುಣದಿ೦ದ ಗುರು         || ೨ ||

ಸಿರಿವರ ವಿಜಯವಿಠ್ಠಲ ಪರನೆ೦ದು
ಸ್ಥಿರವಾಗಿ ಸ್ಥಾಪಿಸಿ ಮೆರೆವ ನಿರ್ಮಲಕಾಯ  || ೩ ||
********