ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಯಂ ಭಾನು ಉದಯವಾದ ನೋಡಿ ದಯಕರುಣಾನಂದದ ಕೃಪೆಮಾಡಿ ಪ
ರವಿಕೋಟಿತೇಜನೆ ಬಂದ ಮೂಡಿ ಭವಭ್ರಮದ ಕತ್ತಲ್ಹೋಯಿತೋಡಿ ದೇವದೇವೋತ್ತಮನ ಪ್ರಭೆ ಕೂಡಿ ದಿವಾರಾತ್ರಿಲ್ಲದಾಯಿತು ನೋಡಿ 1
ಜ್ಞಾನ ಗಮ್ಯವಾಗಿದ್ದ ಸುವಸ್ತ ಕಾಣಬಾವ್ಹಾಯಿತು ಮನಸ್ವಸ್ತ ಮನದಿಂದೆವೆ ಆಯಿತು ಮನಸ್ವಸ್ತ ಘನಮಯವೆ ತೋರಿತು ಸಮಸ್ತ 2
ತಾನೆ ತನ್ನಿಂದುದಯವಾದ ಪೂರ್ಣ ನಾನಾವೆಂಬುದ್ಹೋಯಿತನುಮಾನ ಆನೇಕಲಿದೋರಿತು ಇದೆ ಖೂನ ದೀನ ಮಹಿಪತಿ ಸ್ವಹಿತ ಸುಧನ 3
***