..
ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ
ಇನಿತು ಶ್ರಮ ಕಳೆಯದಿರೆ
ಘನತಿಲ್ಲ ನಿಮದಲ್ಲ ಪ
ಹಿಂದೆ ನಿನ್ನ ಅಜ್ಞಾನಾ ಒಂದು ಮೀರಿದಕೆ ನೀ
ಇಂದು ಭವಭವಣೆ ಬಹುಪರಿಯಿಂದಲೀ
ತಂದು ನೋಯಿಸಿ ಮನಸುನಿಂದದಲೆ ಪರರಿಗೆ
ಇಂದು ಮೊರೆಯನು ಹೋಗಿಸುವುದು ಥರವೇ ಹರಿಯೇ 1
ಒಂದು ತಿಳಿಯದಲೆ ನಾನು ಅಂದ ಮಾತಿಗೆ ಮನಸು
ನೊಂದು ಈ ತೆರದಿ ಮಾಡುವುದು ರೀತೇ
ಕಂದನಪರಾಧಗಳ ಒಂದು ನೋಡದ ಜನನಿ
ಯಂದದಲಿ ನೀ ಪಾಲಿಸುವುದು ಸ್ವಾಮೀ ಪ್ರೇಮೀ 2
ಜಾತಮಗನನು ನಿಜತಾತ ಪರರಿಗೆ ತಾನು
ಆತುರಾದಿಂದಲಿ ಮಾರಿದಂತೆ
ದೂತರನು ಜಗದೇಕÀನಾಥ ನೀ ಪರಿಪರಿ
ಫಾತಿಸಲು ಇನ್ನಾರು ಪೊರೆªರೈಯ್ಯಾ ಜೀಯಾ 3
ನಂಬಿದವರನ್ನು ನೀ ಅಂಬಿನಲಿ ಹೊಡೆವರೆ
ಕಂಬು ಅರಿ ಪದುಮ ಗದಧರಪಾಣಿಯೆ
ತುಂಬಿದ್ಹರಿಗೋಲಲ್ಲಿ ಇಂಬುಗೊಂಡಿರುವಾಗ
ಅಂಬುಧಿಮುಣುಗಿಸುವದು ಥರವೇನೋ 4
ಯಾತಕೀಸೊ ಮಾತು ಸೋತೆ ನಾ ನಿನಗೀಗ
ವಾತದೇವನ ತಾತ ಸೀತಾನಾಥಾ
ನೀತ ಶ್ರೀಗುರುಜಗನ್ನಾಥ ವಿಠ್ಠಲರೇಯ
ಮಾತು ಲಾಲಿಸಿ ಪಾಲಿಸುವದು ಇನ್ನಾ ಚೆನ್ನಾ 5
***