ವೃಂದಾವನದೊಳು ನಿಂದು ಕೊಳಲನೂದಿಮಂದಗಮನೆಯರ ಮರುಳು ಮಾಡುವ ಇವನ್ಯಾರೇಪೇಳೆಲೆ ಸಖಿ ಯಾರೇ ಪ
ಯಾರೆ ಪೇಳಲೆ ಸಖಿ ಮಾರ ಸುಂದರ ಇವನ್ಯಾರೆ ಅ.ಪ.
ಮಲ್ಲಿಗೆ ಮಾಲೆಯೊಳ್ ಪುಲ್ಲನಾಭನ ಕಂಠ-ದಲ್ಲೆ ಹಾಕುವ ಬೇಗ ವಲ್ಲಭೆ ಕರಿ ಇವನ್ಯಾರೆ 1
ಎಳೆಯ ಗೋಗಳ ಮಧ್ಯೆ ಕೊಳಲ ಬಾಯೊಳಗಿಟ್ಟುನಲಿದಾಡುತಿಹ ದಿವ್ಯ ಚಲುವ ಬಾಲಕ ಇವನ್ಯಾರೆ2
....................missing......................... ಸಾಟಿಇವಗ್ಹಾಟಕಾಂಬರ ಸುಸಲಾಟ ಚತುರನಿವನ್ಯಾರೆ 3
ಇಂದು ಮೂಡಲದಂತೆ ಮಂದಹಾಸವ ಮಾಳ್ಪಇಂದಿರೇಶನು ಬಹು ಸುಂದರ ಪುರುಷನಿವನ್ಯಾರೆ 4
****