Monday, 2 August 2021

ವೃಂದಾವನದೊಳು ನಿಂದು ಕೊಳಲನೂದಿಮಂದಗಮನೆಯರ ankita indiresha

ವೃಂದಾವನದೊಳು ನಿಂದು ಕೊಳಲನೂದಿಮಂದಗಮನೆಯರ ಮರುಳು ಮಾಡುವ ಇವನ್ಯಾರೇಪೇಳೆಲೆ ಸಖಿ ಯಾರೇ ಪ


ಯಾರೆ ಪೇಳಲೆ ಸಖಿ ಮಾರ ಸುಂದರ ಇವನ್ಯಾರೆ ಅ.ಪ.


ಮಲ್ಲಿಗೆ ಮಾಲೆಯೊಳ್ ಪುಲ್ಲನಾಭನ ಕಂಠ-ದಲ್ಲೆ ಹಾಕುವ ಬೇಗ ವಲ್ಲಭೆ ಕರಿ ಇವನ್ಯಾರೆ 1

ಎಳೆಯ ಗೋಗಳ ಮಧ್ಯೆ ಕೊಳಲ ಬಾಯೊಳಗಿಟ್ಟುನಲಿದಾಡುತಿಹ ದಿವ್ಯ ಚಲುವ ಬಾಲಕ ಇವನ್ಯಾರೆ2

....................missing......................... ಸಾಟಿಇವಗ್ಹಾಟಕಾಂಬರ ಸುಸಲಾಟ ಚತುರನಿವನ್ಯಾರೆ 3

ಇಂದು ಮೂಡಲದಂತೆ ಮಂದಹಾಸವ ಮಾಳ್ಪಇಂದಿರೇಶನು ಬಹು ಸುಂದರ ಪುರುಷನಿವನ್ಯಾರೆ 4

****


No comments:

Post a Comment