Monday, 2 August 2021

ಸಚ್ಚಿದಾನಂದಾತ್ಮ ಪರಿಪಾಹಿ ಪಾಹಿ ಪರಮಾತ್ಮ ankita uragadrivasa vittala

ಸಚ್ಚಿದಾನಂದಾತ್ಮ ಪರಿಪಾಹಿ ಪಾಹಿ ಪರಮಾತ್ಮ ಪ


ಸಚ್ಚಿದಾನಂದಾತ್ಮ ಮುಕುಂದ

ಅಚ್ಯುತಾನಂತ ಗೋವಿಂದ ಆನಂದಾ ಅ.ಪ


ಧೀರಾ ಧೀರಾ ಧೀರಾ ಧೀರಾ ದೀನ

ಜನರುದ್ಧಾರ ನೀರಜಾಂಡ-

ಚರ ಬಾಹಿರಾಂತರ ನಿರುತ ಚರಾಚರದೊಳಗೆ ಸಂಚಾರಾ

ತತ್ತದಾಕಾರದಿಂದ ಸುವಿಹಾರ ಗಂಭೀರ

ಗಂಭೀರ ಗಂಭೀರ ಗಂಭೀರ

ವಾರಿವಿಹಾರ ಮಂದರೋದ್ಧಾರಾ

ಧರಣಿಸೂಕರ ನರಮೃಗಾಕಾರ ಯಾಚಕ ಧೀರ

ನರಪರ ಶಿರತರಿದೆತ್ತಿ ಬಿಲ್ಲನು ದಶಕತ್ತನು ಕ್ಷಣದೊಳು ಕ-

ತ್ತರಿಸಿ ತುರುಗಳ ಕಾಯ್ದ ಬತ್ತಲೆ ನಿಂದ

ತುರಗವ ಹತ್ತಿ ಮೆರೆದ ಆನಂದ ನಿಜಧಾಮ

ತೊರೆಯುತ ಬಂದ ಗೋವಿಂದಾ ಈ ಭೂ-

ಧರದೊಳು ನಲವಿಂದ ಕ್ರೀಡಿಪ ಪರಿಪರಿಯಿಂದ

ಸುರಮುನಿಗಣ ಸಂಸ್ತುತಿಯಿಂದ ಗೋವಿಂದ ಗೋವಿಂದ 1


ಕಾಂತಾ ಕಾಂತಾ ಕಾಂತಾ ಕಾಂತಾ ಜಗದಾ-

ದ್ಯಂತ ನಿರುತ ನಿಶ್ಚಿಂತ ಗುಣಗಣಭರಿತ

ಸಂತತ ನಿನ್ನ ವಾಕ್ ತಂತಿನಾಮ ಧಾಮದಿ ಈ ಜಗ

ಬಂಧಿಸಿಹುದು ಆದ್ಯಂತ ಶ್ರೀಕಾಂತ ಶ್ರೀಕಾಂತ

ಶ್ರೀಕಾಂತ ಶ್ರೀಕಾಂತ

ಶ್ರೀಕಾಂತಾ ಶ್ರೀಕರಾರ್ಚಿತತ್ರಿಗುಣವರ್ಜಿತ

ಅನುಪಮಚರಿತ ಆದ್ಯಂತರಹಿತ

ಸ್ವರಸಸುಭೋಕ್ತ ಸ್ವಗತಭೇದವಿವರ್ಜಿತ

ಅಚ್ಯುತ ಮಚ್ಛಕಚ್ಛಪಾದ್ಯಜಿತಾದಿರೂಪನಿ-

ನ್ನಿಚ್ಚೆಯಂತೆ ಸಿರಿಮೆಚ್ಚಿಸಿ ನಿನ್ನ ವಿಚಿತ್ರಕರ್ಮಗಳ

ನಿಚ್ಚದಿ ನೋಡಿ ನಲವಿಂದ ಈ ಸೃಷ್ಟಿಲೀಲೆ-

ಯ ಚಂದಾ ಚತುಷ್ಟಾತು ನಿನ್ನಯ ದಯದಿಂದ

ಈ ಜಗಬಂಧಕ ಶಕುತಿ ನಿನ್ನಿಂದ ಗೋವಿಂದ 2


ದೇವ ದೇವ ದೇವ ದೇವಾದಿವಿಜಯವಂದ್ಯಸ್ವಭಾವ

ದೇವ ನಿಜಸದ್ಭಾವ ಭಜಕರ ಕಾವ ಅಭಯವ-

ನೀವ ವಿಶ್ವಾದಿ ರೂಪದಿಂದ ಜೀವರ ಭೋ-

ಗಾವಸ್ಥಾತ್ರಯದಲಿ ನಡೆಸುತ್ತಿರುವ ಭೂ ದೇವ ಶ್ರೀ-

ದೇವ ಭೂದೇವ ದುರ್ಗಾಧವ-ದುರ್ಗಾಧವಾ

ನೀವ್ಯಾಪ್ತನು ಸರ್ವ-ತತುವರ ಕ್ರಿ-

ಯವಾ ಪ್ರೇರಿಸಿ ನಡೆವ ದೇವ ವ್ಯಾಪಾ

ರವ ಮಾಡಿ ಮಾಡಿಸಿ ಎತ್ತಲು ಚೇತನಚಿ-

ತ್ತವಿತ್ತು ಪ್ರವೃತ್ತಿಗೈಸಿ ಫಲವಿತ್ತು ಜನು-

ಮವ ಸುತ್ತಿಸುತ್ತಿಸಿತಂದಿತ್ತಪೆ ಶ್ರೀಪುರುಷೋತ್ತಮ

ನೀನಿರ್ಲಿಪ್ತ ನೀನಂಚಿತ್ಯ ಅನಂತ ಶ್ರೀ ವೇಂಕಟೇಶ

ನಿನ್ನಂಥ ಪೊರೆವರಕಾಣೆ ಉನ್ನಂತ ಉರಗಾದ್ರಿವಾಸವಿಠಲ

ಶಾಂತ ಮಹಂತ3

****


No comments:

Post a Comment