ಸಕಲವೆನಗೆ ನೀನೆ ಶ್ರೀಹರಿಯೆ ||ಧ್ರುವ||
ತಂದೆತಾಯಿ ಸ್ವಹಿತಾತ್ಮನು ನೀನೆ
ಬಂಧುಬಳಗ ಸರ್ವಾತ್ಮನು ನೀನೆ ||೧||
ದೈವಗುರು ಕುಲಗೋತ್ರನು ನೀನೆ
ಕಾವ ಕರುಣ ಸೂತ್ರಾಂತ್ರನು ನೀನೆ ||೨||
ದ್ರವ್ಯಧನವು ಸಕಲಾಶ್ರಯ ನೀನೆ
ದಿವ್ಯಾಲಂಕೃತ ಭೂಷಣ ನೀನೆ ||೩||
ಭಾಸುತ ಬಾಹ್ಯಾಂತರದೊಳಿಹ ನೀನೆ
ಭಾಸ್ಕರ ಕೋಟಿ ಸುತೇಜರೂಪನು ನೀನೆ ||೪||
ಮಹಿಪತಿ ಮನೋಹರಮೂರ್ತಿಯು ನೀನೆ
ಸಾಹ್ಯ ಸಕಲಕೆ ಸಾರಥಿಯು ನೀನೆ ||೫||
****
ಜೋಗಿ ರಾಗ ದಾದರಾ ತಾಳ (raga, taala may differ in audio)
ಸಕಲವೆನಗೆ ನೀನೆ ಶ್ರೀಹರಿಯೆ ಪ
ತಂದೆತಾಯಿ ಸ್ವಹಿತಾತ್ಮನು ನೀನೆ ಬಂಧು ಬಳಗ ಸರ್ವಾತ್ಮನು ನೀನೆ 1
ದೈವಗುರು ಕುಲಗೋತ್ರನು ನೀನೆ ಕಾವ ಕರುಣ ಸೂತಾಂತ್ರನು ನೀನೆ 2
ದ್ರವ್ಯ ಧನವು ಸಕಲಾಶ್ರಯ ನೀನೆ ದಿವ್ಯಾಲಂಕೃತ ಭೂಷಣ ನೀನೆ 3
ಭಾಸ್ಕರಕೋಟಿ ಸುತೇಜರೂಪನು ನೀನೆ 4
ಮಹಿಪತಿ ಮನೋಹರ ಮೂರ್ತಿಯ ನೀನೆ ಸಾಹ್ಯ ಸಕಲ ಸಾರ್ಥಿಯು ನೀನೆ 5
****