Sunday, 7 November 2021

ಸಕಲವೆನಗೆ ನೀನೆ ಶ್ರೀಹರಿಯೆ ತಂದೆ ತಾಯಿ ಸ್ವಹಿತಾ ankita mahipati SAKALAVENAGE NEENE SRI HARIYE TANDE TAAYI SWAHITA




ಸಕಲವೆನಗೆ ನೀನೆ ಶ್ರೀಹರಿಯೆ ||ಧ್ರುವ||

ತಂದೆತಾಯಿ ಸ್ವಹಿತಾತ್ಮನು ನೀನೆ
ಬಂಧುಬಳಗ ಸರ್ವಾತ್ಮನು ನೀನೆ ||೧||

ದೈವಗುರು ಕುಲಗೋತ್ರನು ನೀನೆ
ಕಾವ ಕರುಣ ಸೂತ್ರಾಂತ್ರನು ನೀನೆ ||೨||

ದ್ರವ್ಯಧನವು ಸಕಲಾಶ್ರಯ ನೀನೆ
ದಿವ್ಯಾಲಂಕೃತ ಭೂಷಣ ನೀನೆ ||೩||

ಭಾಸುತ ಬಾಹ್ಯಾಂತರದೊಳಿಹ ನೀನೆ
ಭಾಸ್ಕರ ಕೋಟಿ ಸುತೇಜರೂಪನು ನೀನೆ ||೪||

ಮಹಿಪತಿ ಮನೋಹರಮೂರ್ತಿಯು ನೀನೆ
ಸಾಹ್ಯ ಸಕಲಕೆ ಸಾರಥಿಯು ನೀನೆ ||೫||
****

ಜೋಗಿ ರಾಗ ದಾದರಾ ತಾಳ (raga, taala may differ in audio)

ಸಕಲವೆನಗೆ ನೀನೆ ಶ್ರೀಹರಿಯೆ ಪ  

ತಂದೆತಾಯಿ ಸ್ವಹಿತಾತ್ಮನು ನೀನೆ ಬಂಧು ಬಳಗ ಸರ್ವಾತ್ಮನು ನೀನೆ 1 
ದೈವಗುರು ಕುಲಗೋತ್ರನು ನೀನೆ ಕಾವ ಕರುಣ ಸೂತಾಂತ್ರನು ನೀನೆ 2 
ದ್ರವ್ಯ ಧನವು ಸಕಲಾಶ್ರಯ ನೀನೆ ದಿವ್ಯಾಲಂಕೃತ ಭೂಷಣ ನೀನೆ 3 
ಭಾಸ್ಕರಕೋಟಿ ಸುತೇಜರೂಪನು ನೀನೆ 4 
ಮಹಿಪತಿ ಮನೋಹರ ಮೂರ್ತಿಯ ನೀನೆ ಸಾಹ್ಯ ಸಕಲ ಸಾರ್ಥಿಯು ನೀನೆ 5
****


No comments:

Post a Comment