Showing posts with label ಎಂಥ ಕರುಣಿಯೋ ಐಕೂರು ಗುರುಗಳೆಂಥ ಸುಗುಣಿಯೋ shyamasundara ikoor narasimhacharya stutih. Show all posts
Showing posts with label ಎಂಥ ಕರುಣಿಯೋ ಐಕೂರು ಗುರುಗಳೆಂಥ ಸುಗುಣಿಯೋ shyamasundara ikoor narasimhacharya stutih. Show all posts

Wednesday, 1 September 2021

ಎಂಥ ಕರುಣಿಯೋ ಐಕೂರು ಗುರುಗಳೆಂಥ ಸುಗುಣಿಯೋ ankita shyamasundara ikoor narasimhacharya stutih

 ..

guru stutih

ಎಂಥ ಕರುಣಿಯೋ | ಐಕೂರು ಗುರುಗಳೆಂಥ ಸುಗುಣಿಯೋ


ಎಂಥ ಪರಮ ಕರುಣಿಯೋ ಇವ

ರೆಂಥ ಸುಗುಣ ಶಾಲಿಯೋ ಸು

ಸ್ವಾಂತದಿ ಏಕಾಂತದಿ ಶ್ರೀಕಾಂತನ ಪದಕ್ರಾಂತ

ಶಾಂತರಂತಃಕರುಣಿಯೋ ಅ.ಪ


ವಸುಧಿ ತಳದಲಿ ಶ್ರೀಶನಾಜ್ಞೆಯಿಂದ

ಶಶಿಯಮತದಲಿ ಬಂದು | ಸುನಿತ ಮನದಲಿ

ವಸುಮತಿ ಸುಶಾಸ್ತ್ರಧರ್ಮ | ನಿಶಿಹಗಲಾಚರಿಸಿ ಶಿಷ್ಯ

ನಿಕರುಪದೇಶಿಸಿ ಭವ | ಘಸಣೆ ಕರೆದು ಕುಶಲಗರೆದ 1


ಎಷ್ಟು ಹೇಳಲಿ ಇವರು ನಿತ್ಯ | ಕೃಷ್ಣತಟದಲಿ ಮಿಂದು

ಉತ್ಕøಷ್ಟ ಭಕುತಿಲಿ

ದೃಷ್ಟಿನಾಶಿಕಾಗ್ರದಲ್ಲಿ ಇಟ್ಟು ಬಿಂಬ ಮೂರ್ತಿಯ ಮನ

ಮುಟ್ಟಿ ಪಾಡಿ ನೋಡಿ ಕುಭವ ದಟ್ಟುಳಿಯನಿಟ್ಟವರು 2


ಜ್ಞಾನ ಶೀಲರು ದಾಸಕವನ | ಗಾನಲೋಲರು

ನೆರೆನಂಬಿದಂಥ ದೀನಪಾಲರು

ಶ್ರೀನಿಧಿವರ ಶಾಮಸುಂದರ | ಧ್ಯಾನಾಮೃತಪಾನಗೈದು

ಕ್ಷೋಣಿ ಮಂಡಲದಿ | ಮದಿಸಿದಾನೆಯೆಂತೆ ಚರಿಸಿದವರು 3

***