ಕಟ್ಟಿ ಪೋದಳು ಮಗನಾ ಚೆನ್ನಾಗಿ ತಾ ।। ಪಲ್ಲವಿ ।।
ಕಟ್ಟಿ ಪೋದಳತಿ ಸಿಟ್ಟಿಲಿ ಒರಳಿಗೆ ।
ಪುಟ್ಟನಿವನಿಗೆ ಇಷ್ಟೆ ಸಾಕೆನುತಲಿ ।। ಅ. ಪ ।।
ಪಟ್ಟದರಸಿ ಪರಮೇಷ್ಠಿ ಪ್ರಮುಖರಿಗೆ ।
ಥಟ್ಟನೆ ದೊರೆಯದ ಕೃಷ್ಣನ ಈ ಪರಿ ।। ಚರಣ ।।
ಜ್ಞಾನಿ ಜನರ ವರ ಧ್ಯಾನಕೆ ನಿಲುಕದ । ಮ ।
ಹಾನುಭಾವನ ತಾ ಸಾನುರಾಗದಲಿ ।। ಚರಣ ।।
ಮಾತೆಯು ನಾನಿವ ಪೋತನು ಯೆಂದೂ ।
ದಾತ ಗುರು ಜಗನ್ನಾಥ ವಿಠ್ಠಲನಾ ।। ಚರಣ ।।
***
" ಶ್ರೀ ಕೃಷ್ಣ ಲೀಲೆ - ನಲಕೂಬರ - ಮಣಿಗ್ರೀವರ ಶಾಪ ವಿಮುಕ್ತಿ "
ಒಮ್ಮೆ ಶ್ರೀ ಕೃಷ್ಣನು ಮೊಸರನ್ನು ಯಶೋದೆಯು ಕಡೆಯುತ್ತಿದ್ದಾಗ ಸ್ತನ್ಯವನ್ನು ಕೊಡೆಂದು ಕಡಗೋಲನ್ನು ಹಿಡಿದು ನಿಲ್ಲಿಸಿಬಿಟ್ಟನು.
ಶ್ರೀ ಕೃಷ್ಣನು ಯಶೋದೆಯ ತೊಡೆಯ ಮೇಲೆ ಮಲಗಿ ಸ್ತನ್ಯ ಪಾನ ಮಾಡುತ್ತಿದ್ದನು.
ಯಶೋದೆಯು ಹಾಲು ಉಕ್ಕಿದುದನ್ನು ನೋಡಿ ಅದರ ಪಾತ್ರೆಯನ್ನು ಕೆಳಗಿಳಿಸಬೇಕೆಂದು ತೊಡೆಯ ಮೇಲಿದ್ದ ಕೃಷ್ಣನನ್ನು ಎತ್ತಿ ನೆಲದ ಮೇಲೆ ಕುಕ್ಕಿ ಓಡಿ ಹೋದಳು.
ಶ್ರೀ ಕೃಷ್ಣನು ತನ್ನ ಸ್ತನ್ಯ ಪಾನ ರೂಪ ಸೇವೆಗಿಂತ ಹಾಲಿನ ರಕ್ಷಣೆ ಲಾಭದಾಕಯವೆಂದು ತಿಳಿದ ಯಶೋದೆಗೆ ಬುದ್ಧಿ ಕಲಿಸಬೇಕೆಂದು ಮೊಸರಿನ ಗಡಿಗೆಯನ್ನು ಒಡೆದು ಬೆಣ್ಣೆಯನ್ನು ತೆಗೆದುಕೊಂಡು ಓಡಿ ಹೋಗಿ ಅಂಗಳದಲ್ಲಿದ್ದ ಒರಳಕಲ್ಲಿನ ಮೇಲೆ ಕುಳಿತು ಬೆಣ್ಣೆಯನ್ನು ಬೆಕ್ಕಿಗೂ ಕೊಟ್ಟು ತಾನೂ ತಿನ್ನುತ್ತಿದ್ದನು.
ಯಶೋದೆಗೆ ಕೋಪ ಬಂದಿತು.
ಹಗ್ಗದಿಂದ ಅವನನ್ನು ಕಟ್ಟಿ ಹಾಕಿದಳು.
ಶ್ರೀ ಕೃಷ್ಣನು ಹಗ್ಗದಿಂದ ಕಟ್ಟಲ್ಪಟ್ಟ ಒರಳನ್ನು ಎಳೆದುಕೊಂಡು ಹೋಗಿ ಊರ ಮುಂದಿದ್ದ ಎರಡು ಮತ್ತಿ ಮರಗಳ ಸಂದಿನಲ್ಲಿ ನುಗ್ಗಿ ಹಗ್ಗವನ್ನು ಜಗ್ಗಿ ಆ ಎರಡು ಮರಗಳನ್ನೂ ಬುಡ ಸಹಿತ ಉರುಳಿಸಿದನು ಹಾಗೂ ನಲಕೂಬರ ಮತ್ತು ಮಣಿಗ್ರೀವವರ ಶಾಪವನ್ನು ಕಳೆದನು.
ಈ ಕಥೆಯು ಶ್ರೀ ಮದ್ಭಾಗವತದ ದಶಮ ಸ್ಕಂದದ ಹತ್ತನೇ ಅಧ್ಯಾಯದಲ್ಲಿ ಉಲ್ಲೇಖಿತವಾಗಿದೆ.
ಈ ವಿಷಯವನ್ನು ಶ್ರೀ ಆಹ್ಲಾದಾಂಶ ಶ್ರೀ ಗುರು ಜಗನ್ನಾಥದಾಸರು...
***