Showing posts with label ಶ್ರೀಕರ ವಿಠಲರಾಯ ಕರವ ಪಿಡಿಯೋ ಮಾ ಕಮಲಭವ shreeshapranesha vittala. Show all posts
Showing posts with label ಶ್ರೀಕರ ವಿಠಲರಾಯ ಕರವ ಪಿಡಿಯೋ ಮಾ ಕಮಲಭವ shreeshapranesha vittala. Show all posts

Sunday, 1 August 2021

ಶ್ರೀಕರ ವಿಠಲರಾಯ ಕರವ ಪಿಡಿಯೋ ಮಾ ಕಮಲಭವ ankita shreeshapranesha vittala

..

kruti by shreeshapranesha vittala dasaru

ಶ್ರೀ ವೇ. ನರಸಿಂಹಾಚಾರ್ಯ ಜೋಶಿ, ಕುಷ್ಟಗಿಯವರಿಗೆ ನೀಡಿದ ಅಂಕಿತಪದ


ಶ್ರೀಕರ ವಿಠಲರಾಯ ಕರವ ಪಿಡಿಯೋ |ಮಾ ಕಮಲಭವ ವಂದ್ಯ | ಭಕ್ತರುದ್ಧರಿಸೋ ಪ


ನಿನ್ನ ನಾಮಾಮೃತವು ಜಿಂಹ್ವೆಗೆಪೊದಗಲೀ |ನಿನ್ನ ಕಥಾಶ್ರವಣ ಕಿವಿಗಾಗಲೀ ||ನಿನ್ನ ಚಾರಿತ್ರಗಳ ನಿರುತಕೊಂಡಾಡಲಿ |ನಿನ್ನ ದಾಸರು ಕೇಳಿ ಶಿರದೊಗಲೀ 1


ತಾರತಮ್ಯ ಪಂಚಭೇದ ಜ್ಞಾನವೇ ತಿಳಿಯಲಿ |ಮಾರುತಾ ಮತವನ್ನು ಅನುಸರಿಸಲಿ ||ಆರೆರಡು ನಾಮ ಊಧ್ರ್ವಪುಂಡ್ರವನೆ ಧರಿಸಲಿ |ಧೀರ ಗುರು ಮಧ್ವರಾಯರೇ ಮುಖ್ಯರೆನಲಿ 2


ಏಸುಪರಿ ತುತಿಸಿ ವಾಣೀಶಗಸದಳವೋ ಶ್ರೀ |ವಾಸುದೇವನನು ತುತಿಸಲೊಶವೇ |ಶ್ರೀಶ ಪ್ರಾಣೇಶ ವಿಠ್ಠಲರಾಯ ದಯದಿನ್ನು |ದಾಸರ ದಾಸನೆಂದೆನಿಸಿ ಪೊರಿಯೊ 3

***