Showing posts with label ಉದಕಜಕಾರ್ಕನು ಉದಯಿಸಿದಂತೆ ಮಧುರಿಪು sirigovinda vittala. Show all posts
Showing posts with label ಉದಕಜಕಾರ್ಕನು ಉದಯಿಸಿದಂತೆ ಮಧುರಿಪು sirigovinda vittala. Show all posts

Monday, 2 August 2021

ಉದಕಜಕಾರ್ಕನು ಉದಯಿಸಿದಂತೆ ಮಧುರಿಪು ankita sirigovinda vittala

ಉದಕಜಕಾರ್ಕನು ಉದಯಿಸಿದಂತೆ

ಮಧುರಿಪು ನೀ ಬಂದೊದಗಿದೆ ಸಲಹೈ ಪ


ಗಾದೇಯ ನಾಮಕ ಗಾದೆ ಪ್ರಭುವೆ ಖಳಾ

ಭಾದೆ ಬಿಡಿಸೊ ಖಲ | ಪರಮಾದರದಿ ಪ್ರಹ್ಲಾದನ ಪೋಷಿಪ 1


ಮನೆ ಧನ ಬಿಟ್ಟು ನಿಮ್ಮನು ಭಜಿಸುವ ನಮ್ಮನು

ಬಾಧಿಪ ಖಳನನು ಶಿಕ್ಷಿಸು ಹೇ ವನಜನಯನ ಹರಿ 2


ಆವನು ನಿನ್ನುಳಿದೀ ವಸುಧರೆಯೋಳು

ಜೀವರ ಸಲಹುವ ದೇವದೇವ ಶಿರಿಗೋವಿಂದ ವಿಠಲ 3

****