ಉದಕಜಕಾರ್ಕನು ಉದಯಿಸಿದಂತೆ
ಮಧುರಿಪು ನೀ ಬಂದೊದಗಿದೆ ಸಲಹೈ ಪ
ಗಾದೇಯ ನಾಮಕ ಗಾದೆ ಪ್ರಭುವೆ ಖಳಾ
ಭಾದೆ ಬಿಡಿಸೊ ಖಲ | ಪರಮಾದರದಿ ಪ್ರಹ್ಲಾದನ ಪೋಷಿಪ 1
ಮನೆ ಧನ ಬಿಟ್ಟು ನಿಮ್ಮನು ಭಜಿಸುವ ನಮ್ಮನು
ಬಾಧಿಪ ಖಳನನು ಶಿಕ್ಷಿಸು ಹೇ ವನಜನಯನ ಹರಿ 2
ಆವನು ನಿನ್ನುಳಿದೀ ವಸುಧರೆಯೋಳು
ಜೀವರ ಸಲಹುವ ದೇವದೇವ ಶಿರಿಗೋವಿಂದ ವಿಠಲ 3
****
No comments:
Post a Comment