ಏಳಯ್ಯ ಕಾರುಣ್ಯನಿಧಿ ಕಮಲದಳ ನೇತ್ರ
ಏಳಯ್ಯ ಪರಮ ಪಾವನ ಮುನಿಜನ ಸ್ತೋತ್ರ ಪ
ಏಳಯ್ಯ ಕರಿರಾಜವರದ ವಿಜಯಮಿತ್ರ
ಏಳು ದೇವಕಿಯ ಪುತ್ರ ಅ.ಪ
ಏಳು ಹರಿರಥ ಶತಕೋಟಿ ಪ್ರಕಾಶನೇ
ಏಳೆರಡು ಲೋಕಗಳು ಉದರದಲಿ ಧರಿಸಿದನೇ
ಏಳು ಗೂಳಿಯಕಟ್ಟಿ ಕಾಂತೆಯನು ವರಿಸಿದನೇ
ಏಳು ಮುನಿನುತ ವಂದ್ಯನೇ ಸ್ವಾಮಿ 1
ಏಳು...(?)ಗಳೊಳು ಗಂಗೆಯನು ಪಾದದಲಿ ಪಡೆದೇ
ಏಳು ಪೆಡೆಯವನ ಮಡುಹಿನಲಿ ದೊತ್ತಳದುಳಿದೇ
ಏಳುತ್ತ ನಿಮ್ಮ ನಾಮವನೊಮ್ಮಗೆ ನಡದೇ
ಏಳು ಜನ್ಮದ ಭವಹರಾ ಸ್ವಾಮಿ 2
ಏಳು ಜಿಹ್ವೆಯನುಳ್ಳವನ ಮುಖವಾದೆ ಮ
ತ್ತೇಳ್ಮೂರು ಸೂಳಿನಲಿ ಕ್ಷತ್ರಿಯರ ಮರ್ದಿಸಿದೇ
ಏಳು ತಾಳೆಗಳನೊಂದಂಬಿನಲಿ ಛೇದಿಸಿದೇ
ಏಳು ಸಮರನ ಕೊಲಿಸಿದೇ ಸ್ವಾಮಿ 3
ಏಳು ಶರಧಿಯಲಿ ಪಾಲ್ಗಡಲಲ್ಲಿ ಪವಡಿಸಿದೆ
ಏಳು ವ್ಯೂಹದಲಿ ಪಾರ್ಥನ ನುಡಿಯ ಪಾಲಿಸಿದೆ
ಏಳು ದಿಕ್ಪಾಲಕರು ನಿನ್ನ ಪೊಗಳುತಲಿಹರೇ
ಏಳು ದ್ವೀಪಕ್ಕೊಡೆಯನೇ ಸ್ವಾಮಿ 4
ಏಳು ಶಕ್ತಿದೇವತೆಯರೂಳಿಗವ ಕೇಳಿ ಹರಿ
ದೇಳೆರಡು ಲೋಕ ಹರಿ ತಾನಲ್ಲದಿಲ್ಲೆಂಬ
ಏಳಿಗೆಯ ಹಮ್ಮಿನೊಳಿದ್ದ ದಶಕಂಧರನ
ಏಳಿಸಿದೆ ಸುರಲೋಕಕೇ ಸ್ವಾಮಿ 5
ಏಳು ಸ್ವರ ಮುಟ್ಟಿ ತುಂಬುರುನಾರದರು ಬಳಿ
ಕೇಳು ತಾಳಂಗಳಲಿ ನಿನ್ನ ಪೊಗಳುತಲಿಹರೇ
ಏಳುನಗರಕ್ಕಧಿಪವೆನಿಪ ಸುರಪುರವಾಸ
ಏಳು ಲಕ್ಷ್ಮೀನಿವಾಸ ಸ್ವಾಮಿ 6
****
No comments:
Post a Comment