Showing posts with label ರಾಮಾ ಕೃಷ್ಣಾ ಗೋವಿಂದಾ ಗೋಪಾಲ ಕೇಶವಾ ಭವ ಪಾಶವಾ gurumahipati. Show all posts
Showing posts with label ರಾಮಾ ಕೃಷ್ಣಾ ಗೋವಿಂದಾ ಗೋಪಾಲ ಕೇಶವಾ ಭವ ಪಾಶವಾ gurumahipati. Show all posts

Wednesday, 1 September 2021

ರಾಮಾ ಕೃಷ್ಣಾ ಗೋವಿಂದಾ ಗೋಪಾಲ ಕೇಶವಾ ಭವ ಪಾಶವಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ರಾಮಾ ಕೃಷ್ಣಾ ಗೋವಿಂದಾ ಗೋಪಾಲ ಕೇಶವಾ | ಭವ ಪಾಶವಾ ಪ 


ಅಹಂಮಮತಾವೆಂಬಾ ಸಂಚಾರ ವಾಯಿತು | ಸೋಹಂವೆಂಬಾ ತಿಳಿವಾದೆಚ್ಚರ ಹೋಯಿತ್ತು | ನಾಹಂಕರ್ತಾನೆಂದು ಸುವಿಚಾರ ಸೇರಿದಾ | ಸೋಹಂ ಎಂದು ನುಡಿಯದಾ ಕುಮತಿ ಮೀರಿದಾ 1 

ಅನಾತ್ಮದಲ್ಲಿ ಆತ್ಮ ಭಾವನೆ ಮೂಡಿದೇ | ಸನಾತನ ಚೈತನ್ಯ ತಾನೆಂದು ನೋಡದೆಲ | ಮನದಿಂದ ಈ ಕ್ಷಣ ತ್ರಯವಕೂಡಿದೇ | ಕನಸಿನಂದದಿ ಸಂಸಾರ ದೊಳಾಡಿದೇ2 

ಮರಹು ಬಿಡಿಸಿ ನಿನ್ನೆಚ್ಚರ ದೋರಿಸೀ | ಚರಣದ ಭಜನೆಗೆ ಕಣ್ಣ ದೆರೆಸೀ | ಗುರುಮಹಿಪತಿ ಪ್ರಭು ದಯಬೀರಿಸೀ | ಹೊರೆವದೆನ್ನಯ ಅಪರಾಧ ಕ್ಷಮಿಸಿ 3

***