Showing posts with label ಇವಗೇಕೆ ಪರಿಮಳ ಇವಗೇಕೆ ಶೃಂಗಾರ purandara vittala. Show all posts
Showing posts with label ಇವಗೇಕೆ ಪರಿಮಳ ಇವಗೇಕೆ ಶೃಂಗಾರ purandara vittala. Show all posts

Tuesday, 3 December 2019

ಇವಗೇಕೆ ಪರಿಮಳ ಇವಗೇಕೆ ಶೃಂಗಾರ purandara vittala

ರಾಗ:  ಯದುಕುಲಕಾಂಭೋಜಿ.  ತ್ರಿಪುಟ ತಾಳ.

ಇವಗೇಕೆ ಪರಿಮಳ ಇವಗೇಕೆ ಶೃಂಗಾರ ? ಪಲ್ಲವಿ:

ನವನೀತ ಚೋರ ನಾರುವ ಗೊಲ್ಲಗೆ ? ಅನುಪಲ್ಲವಿ:

ಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ವಾಟ?
ತಲೆದೋರುವವಗೇಕೆ ದಟ್ಟ ಪುನುಗು ?
ಬಲು ಕೇಶದವಗೇಕೆ ಬಾವನ್ನದಾ ಲೇಪ ?
ಸಲೆಕುರೂಪಿನವಗೇಕೆ ಮಂಡೆಸಾದು* ? 

ತುಲಸಿ ಮಾಲೆಯ ಧರಿಸಿದವಗೇಕೆ ಜವ್ವಾಜಿ ?
ಕೊಲೆಗಡುಕಗೇಕೆ ಕುಂಕುಮದ ತಿಲಕ ?
ಅಲೆದಾಡುವವಗೇಕೆ  ಅಂಗರಾಗದ ಸುಖ ?
ಕಳವು ಮಾಡುವವಗೇಕನಂಗ  ಸೊಬಗು ?

ಪರಸತಿಯ ಬಯಸುವಗೆ ಪನ್ನಗ ಶಯನವೇಕೆ?
ಹರಿದಾಡುವನಿಗೇಕೆ ಆದ ಪಗಡಿ** ?
ಸಿರಿದೇವಿ ಶೃಂಗಾರಗೈದು ವರಿಸಿದ ಬಳಿಕ
ಧರೆಗಧಿಕನಾದನೀ ಪುರಂದರ ವಿಟ್ಠಲ
* ನೊಸಲಸಾದು ಎಂಬ ಪಾಠವೂ ಇದೆ
***

pallavi

ivagEke parimaLa ivagEke shrngAra navanIta cOra nAruva gollage

caraNam 1

holasu maiyavagEke hosa kastUri vATa taladOruvavagEke daTTa punugu
balu kEshadavagEke bAvannadA lEpa salekurupinavagEka maNDesAdu

caraNam 2

tulasi mAleya dharisidavage javvAji kolegaDukagEke kumkumada tilaka
aletiuvagEke araNyada angada sukha aLiya ambuvage kananga sobagu

caraNam 3

parasatiya bayasuvage pannaga shayanavEke haridADuvanigEke Ada pagaDi
siridEvi shrngAra kaidu varisida baLika dharegadhikanAdani purandara viTTala
***