Showing posts with label ನಾರದಪ್ರೀಯ ಕೃಷ್ಣನರಾಕಾರ jagannatha vittala. Show all posts
Showing posts with label ನಾರದಪ್ರೀಯ ಕೃಷ್ಣನರಾಕಾರ jagannatha vittala. Show all posts

Friday, 19 February 2021

ನಾರದಪ್ರೀಯ ಕೃಷ್ಣನರಾಕಾರ ankita jagannatha vittala

ನಾರದಪ್ರೀಯ ಕೃಷ್ಣನರಾಕಾರ l

ಜಾರ ಚೋರ ಶೂರ ಧೀರನಾ ll ಪ ll


ಘೋರತರವಾದ ಸಂಸಾರ ಸುಖದುಃಖಗಳ l

ಮೀರಿ ಪೊರೆವಂಥ ಬಲು ಭಾರ ಕರ್ತನೆ l

ಧಾರುಣಿಯ ಮೇಲಿರುವ ಸೂರಿ ಜನರನು ಸದಾ l

ಸಾರಸಾಕ್ಷ ಬಿಡದಲೆ ಪಾರುಗಾಣಿಸುವ ದೇವಾ ll 1 ll


ಮಂದಮತಿಯನಳದು ಚಂದದಿ ಸುಮಾರ್ಗವನ್ನು l

ನಂದದಿಂದ ತೋರ್ಪ ಮುಚುಕುಂದ ವಂದ್ಯನೆ l

ಎಂದಿಗೆಮ್ಮ ಗತಿಯೆಂದು ಹೊಂದಿ ಬೇಡ್ವ ಭಕುತರ l

ನಂದಿಸುವರ ಭವಬಂಧನ ಬಿಡಿಸುವ ದೇವ ll 2 ll


ದಾಶರಥೆ ಎನ್ನ ಕ್ಲೇಶ ನಾಶ ಮಾಡು ದಯದಿ ದಿ l

ನೇಶ ಶತಕೋಟಿ ಭಾಸ ಸಂಕಾಶಾ ಶ್ರೀಶ l

ವಾಸವಾದಿವಂದ್ಯ ಜಗನ್ನಾಥವಿಠಲನೆ ಪ್ರೀಯ l

ದಾಸರಭಿಲಾಷೆಗಳ ಲೇಸುಗೈಯ್ಯಾ ವಾಸುದೇವ ll 3 ll

*******