Showing posts with label ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ vasudeva vittala. Show all posts
Showing posts with label ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ vasudeva vittala. Show all posts

Friday, 27 December 2019

ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ ankita vasudeva vittala

ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ
ವ್ಯಾಳಿಗೆ ಒದಗಿಸೋ ಹರಿಯೆ ಮರಿಯೆ
|| ಪ. ||

ಕಾಲನ ದೂತರು ಕಠಿಣರೆ ಸರಿ |
ವ್ಯಾಳಿಯು ಹೇಳಿ ಕೇಳಿ ಬರುವದಲ್ಲ ||
ಆಲಯದವರ ಶಕ್ತಿಯಲ್ಲೇನೋ |
ಲಾಲಿಸಬೇಕೇಲೋ ಎನ್ನ ಬಿನ್ನಪ 
|| ೧ ||

ಕಾಲನ ಸ್ಥಿತಿಯೆಂತು ಮೇಷದ ಗುಂಪಿಗೆ |
ತೋಳದ ಪರಿಯೆಂದು ನಾ ಕೇಳಿ ಬಲ್ಲೆ ||
ಕಾಳು ಕಪಟೆ ತಿಂಬ ಮೂಷಕಗಳಿನ್ನು |
ಕಾಲ ಭುಜಂಗದಂತೆ ಕಂಡು ಬಲ್ಲೆನೊ
|| ೨ ||

ಹೇಸಿ ವಿಷಯವೆಂಬಾ ಮಡಿವಿನೊಳಗೆ ವೈದು |
ಮೋಸಗೊಳಿಸುವ ಸ್ಥಿತಿಯು ಮನಸಿನ ||
ವಾಸುದೇವ ವಿಠಲ ಈ ಪರಿ ತಿಳಿದಿನ್ನು |
ಈ ಸಮಯಕ್ಕೆ ನಾಮ ಒದಗಿಸಯ್ಯ 
|| ೩ ||

      ಶ್ರೀ ವ್ಯಾಸತತ್ವಜ್ಞ ತೀರ್ಥರ ಕೃತಿ
***********