Showing posts with label ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ others YUKTIYINDA BHAKTI MAADALIKKE SHAKTANALLA NAA. Show all posts
Showing posts with label ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ others YUKTIYINDA BHAKTI MAADALIKKE SHAKTANALLA NAA. Show all posts

Sunday, 5 December 2021

ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ others YUKTIYINDA BHAKTI MAADALIKKE SHAKTANALLA NAA



ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ
ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ||ಧ್ರುವ||

ಧ್ಯಾನ ಮೌನ ಸ್ನಾನ ಸಂಧ್ಯಾ ಖೂನ ಗುರುತು ಅರಿಯೆ ನಾ
ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ ||೧||

ಹೀನದೀನ ಜ್ಞಾನಶೂನ್ಯ ದಾನಧರ್ಮ ಅರಿಯೆ ನಾ
ನೀನೆ ಕಾಯಬೇಕು ಎನ್ನ ಕರುಣದಿ ಕೃಪಾನಿಧೆ ||೨||

ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ
ತರಣೋಪಾಯ ತೋರಿಸೆನ್ನ ಹೊರೆಯೊ ದಯಾನಿಧೆ ||೩||

ಅರುಹುಕುರುಹುನರಿಯದಿಹ ಮರುಳ ಮಂಕ ತರಳ ನಾ
ಕರವ ಪಿಡಿದು ಧರೆಯೊಳಿನ್ನು ತಾರಿಸೊ ದಯಾನಿಧೆ ||೪||

ಆಶಪಾಶದಲ್ಲಿ ವಾಸವಾದ ದೋಷರಾಶಿ ನಾ
ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ ||೫||

ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ
ದಾಸರೊಡನೆ ಕೂಡಿಸೊ ಭಾಸ್ಕರ ದಯಾನಿಧೆ ||೬||
***

ಭೈರವಿ ರಾಗ ದಾದರಾ ತಾಳ (raga tala may differ in audio)