Showing posts with label ಆರುತಿಯೆತ್ತಿದರೆ ಕೇಶವ ನಾರಾಯಣಗೆ hayavadana AARUTIYA ETTIDARE KESHAVA NARAYANAGE. Show all posts
Showing posts with label ಆರುತಿಯೆತ್ತಿದರೆ ಕೇಶವ ನಾರಾಯಣಗೆ hayavadana AARUTIYA ETTIDARE KESHAVA NARAYANAGE. Show all posts

Thursday, 2 September 2021

ಆರುತಿಯೆತ್ತಿದರೆ ಕೇಶವ ನಾರಾಯಣಗೆ ankita hayavadana AARUTIYA ETTIDARE KESHAVA NARAYANAGE



ಆರತಿಯೆತ್ತಿದರೆ ಕೇಶವ ನಾರಾಯಣಗೆ ||ಪ||

ಶಾಶ್ವತವೀವ ಮಾಧವ
ವಾಸವವಂದ್ಯ ಗೋವಿಂದಗಾರತಿಯನೆತ್ತಿದರೆ ||ಅ.ಪ||

ದ್ವಾಪರ ರಹಿತ ಶ್ರೀವಿಷ್ಣುವಿಗೆ ಅಪಾರ ಮಧುಸೂದನಗೆ
ಪಾಪರಹಿತ ತ್ರಿವಿಕ್ರಮಗಾರತಿಯನೆತ್ತಿದರೆ||

ಸಾಧುಸೇವಿತ ವಾಮನಗೆ ಶ್ರೀಧರ ಹೃಷೀಕೇಶನಿಗೆ
ಆದಿಮೂರುತಿ ಪದ್ಮನಾಭಗಾರತಿಯನೆತ್ತಿದರೆ ||

ದÁಮೋದರ ವಾಲುಳ್ಳವಗೆ(?) ಪ್ರೇಮದಿ ಸಂಕರ್ಷಣಗೆ
ಕಾಮಿತಾರ್ಥವನೀವ ವಾಸುದೇವಗಾರತಿಯನೆತ್ತಿದರೆ ||

ಅನಿರುದ್ಧ ಪುರುಷೋತ್ತಮಗೆ
ವಿನಯದಿಂದಲಿ ಅಧೋಕ್ಷಜಗಾರತಿಯನೆತ್ತಿದರೆ ||

ನರಸಿಂಹರೂಪನಾದವಗೆ ವರದ ಮೂರುತಿ ಅಚ್ಯುತಗೆ
ಅರಿಭಯಂಕರ ಜನಾರ್ದನಗಾರತಿಯನೆತ್ತಿದರೆ ||

ಉಪೇಂದ್ರನೆಂದೆನಿಸಿಕೊಂಡವಗೆ ಅಪಾರಮಹಿಮ ಶ್ರೀಹರಿಗೆ
ಗೋಪಾಲಮೂರುತಿ ಶ್ರೀಕೃಷ್ಣಗಾರತಿಯನೆತ್ತಿದರೆ ||

ಚತುರವಿಂಶತಿಮೂರುತಿಗಳಾ ಅತಿಶಯ ಧವಳವ ಪಾಡೆ
ಸತುಪುರುಷರಿಷ್ಟಾರ್ಥವೀವನು ಸಿರಿ ಹಯವದನ ||
***

Aratiyettidare kesava narayanage ||pa||

Sasvataviva madhava
Vasavavandya govindagaratiyanettidare ||a.pa||

Dvapara rahita srivishnuvige apara madhusudanage
Paparahita trivikramagaratiyanettidare||

Sadhusevita vamanage sridhara hrushikesanige
Adimuruti padmanabagaratiyanettidare ||

Daámodara valullavage(?) Premadi sankarshanage
Kamitarthavaniva vasudevagaratiyanettidare ||

Aniruddha purushottamage
Vinayadindali adhokshajagaratiyanettidare ||

Narasimharupanadavage varada muruti acyutage
Aribayankara janardanagaratiyanettidare ||

Upendranendenisi kondavage aparamahima sriharige
Gopalamuruti srikrushnagaratiyanettidare ||

Chaturavimsatimurutigala atisaya dhavalava pade
Satupurusharishtarthavivanu siri hayavadana ||
***