Showing posts with label ರಾಮ ಮಂತ್ರವ ಜಪಿಸೋ ಹೇ ಮನುಜ purandara vittala RAAMA MANTRAVA JAPISO HE MANUJA. Show all posts
Showing posts with label ರಾಮ ಮಂತ್ರವ ಜಪಿಸೋ ಹೇ ಮನುಜ purandara vittala RAAMA MANTRAVA JAPISO HE MANUJA. Show all posts

Sunday, 7 November 2021

ರಾಮ ಮಂತ್ರವ ಜಪಿಸೋ ಹೇ ಮನುಜ purandara vittala RAAMA MANTRAVA JAPISO HE MANUJA




ರಾಮ ಮಂತ್ರವ ಜಪಿಸೊ ಹೇ ಮನುಜಾ ||ಪ||
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ || ಅ ||

ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿಯೊಳು ಉಚ್ಚರಿಪ ಮಂತ್ರ
(/ಜಲಜಪಾಣಿ ನಿತ್ಯ ಜಪಿಪ ಮಂತ್ರ)
ಹಲವು ಪಾಪಂಗಳ ಹದಗೆಡಿಸುವ ಮಂತ್ರ
(/ಕಲುಷಪರ್ವತಕಿದು ಕುಲಿಶವಾಗಿಪ್ಪ ಮಂತ್ರ)
ಸುಲಭದಿಂದಲಿ ಸ್ವರ್ಗ(/ಮೋಕ್ಷ) ಸೂರೆ ಕೊಂಬುವ ಮಂತ್ರ ||

ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ಋಷಿಗಳಲ್ಲಿ ಸೇರಿದ ಮಂತ್ರ
ದುರಿತ ಕಾನನಕಿದು ದಾವಾನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟ ಕಟ್ಟಿದ ಮಂತ್ರ ||

ಜ್ಞಾನನಿಧಿ ನಮ್ಮ ಆನಂದತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರವಿಠಲನ ಮಂತ್ರ ||
***

ರಾಗ ಮಧ್ಯಮಾವತಿ ಆದಿ ತಾಳ  (raga, taala may differ in audio)
ರಾಗ: ಜೌನ್ ಪುರಿ  ತಾಳ :ಆದಿ
ರಾಗ :  ಮಧ್ಯಮವತಿ.  ಆದಿ ತಾಳ. ಪುರಂದರದಾಸರು

ರಾಮ ಮಂತ್ರವ ಜಪಿಸೋ ಹೇ ಮನುಜ
ರಾಮ ಮಂತ್ರವ ಜಪಿಸೋ
ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ
ಸೋಮಶೇಖರ ತನ್ನ ಭಾಮೆಗ್ಹೆಳಿದ ಮಂತ್ರ

ಕುಲಹೀನನಾದರು ಕೂಗಿ ಜಪಿಸೋ ಮಂತ್ರ
ಸಲೆಬೀದಿಯೊಳು ಉಚ್ಚರಿಸುವ ಮಂತ್ರ
ಹಲವು ಪಾಪಂಗಳ ಹದಗೆಡಿಸುವ ಮಂತ್ರ
ಸುಲಭದಿಂದಲಿ ಮೋಕ್ಷ ಸೂರೆಗೊoಬುವ  ಮಂತ್ರ

ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ರಿಶಿಗಳಲಿ ಸೇರಿದ ಮಂತ್ರ
ದುರಿತ ಕಾನನಕಿದು ದಾವಾನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ

ಜ್ಞಾನನಿಧಿ ನಮ್ಮ ಆನ೦ದ ತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನು ಕುಲಾ೦ಬುಧಿ ಸೋಮನೆನಿಪ ನಮ್ಮ
ದೀನ ರಕ್ಷಕ ಪುರಂದರವಿಠಲನ ಮಂತ್ರ
***

rAma mantrava japisO.  rAgA:  madhyamAvati.  Adi tALA. (raga tala may differ in audio)

P:  rAma mantrava japiso hE manujA
A:  A mantra I mantra necci nI keDabEDa sOmashEkhara tanna bhAmini gorediha

C1:  kula hInanAdarau kUgi japisuva mantra sale bIdiyoLu uccaripa mantra
halavu pApangaLa hadageDisuva mantra sulabhadindali svarga sUre kombuva mantra

2:  marutAtmaja nitya smaraNe mADuva mantra sarvarSigaLalli sErida mantra
durita kAnanakidu dAvAnala mantra poredu vibhISaNage paTTa kaTTida mantra

3: snAna maunangaLige sAdhanada mantra mAnvaru manadi dhyAnipa mantra
hIna guNangaLa hisukutiha mantra Enembe vibhISaNage sAravinibha mantra

4:  sakala vEdagaLige sAravenipa mantra mukuti mArgake idE mUla mantra
bhakuti rasake ommebaTTe tOruva mantra sukhanidhi purandara viTTalana mahA mantra

5:  jnAnanidhi namma Ananda tIrttaru sAnurAgadi nitya sEvipa mantra
bhAnu kulAmbudhi sOmanenipa namma dInarakSaka purandara viTTalana mantra
***
 

Rama mantrava jabiso hey manuja|

A mantra I mantra necci ni kedabeda somashekhara tanna bhamini korediha||

Kula hinanadarau kugi japisuva mantra sale bidiyolu uccaripa mantra
halavu papangala hadagedisuva mantra sulabhadindali svarga sure kombuva mantra||

Marutatmaja nitya smarane maduva mantra sarva rsigalalli serida mantra
durita kananakidu davanala mantra poredu vibhisanage patta kattida mantra||

Jnananidhi namma Ananda tirttaru sanuragadi nitya sevipa mantra
bhanu kulambudhi somanenipa namma dinaraksaka purandara vittalana mantra||
***

pallavi

rAma mantrava japiso hE manujA

anupallavi

A mantra I mantra necci nI keDabEDa sOmashEkhara tanna bhAmini korediha

caraNam 1

kula hInanAdarau kUgi japisuva mantra sale bidiyoLu uccaripa mantra
halavu pApangaLa hadageDisuva mantra sulabhadindali svarga sUre kombuva mantra

caraNam 2

marutAtmaja nitya smaraNe mADuva mantra sarva rSigaLalli sErida mantra
durita kAnanakidu dAvAnala mantra poredu vibhISaNage paTTa kaTTida mantra

caraNam 3

jnAnanidhi namma Ananda tIrttaru sAnurAgadi nitya sEvipa mantra
bhAnu kulAmbudhi sOmanenipa namma dInarakSaka purandara viTTalana mantra
***

version ೨
pallavi

rAma mantrava japiso hE manuja

anupallavi

A mantra I mantra necci nI keDabEDa sOmashEkhara tanna bhAmini korediha

caraNam 1

snAna maunangaLige sdhanada mantra mAnvaru manadi dhyAniya mantra
hIna guNangaLa hiskisutiha mantra Enembe vibhISaNage sAravinibha mantra

caraNam 2

sakala vEdagaLige sAravinibha mantra mukuti mArgakke idE mUla mantra
bhakuti rasage ommebaTTe tOruva mantra sukhanidhi purandara viTTalana mahA mantra
***


pallavi

Raama mantrava japiso e maanuja

anupallavi

aa mantra ee mantra meccini geDa bEDa
sOmasEkhara tanna baamini gorE deega
(raama)

caraNam

sakala vEda gaLigE saaramE iva mantra
mukti maargakE eevE moola mantra
bhakti rasa kEdaari ummE toruvamantra
sukhanidhi purandara viTThalana mahaa mantra
(raama)

missing ?
***

Meaning:
pallavi: Say the mantra (chant, name) of Rama, oh man.

anupallavi: Avoid this mantra and that mantra, and say Somasekhara's (sOman = moon, Sikhara = head; thus "one who has the moon on his head", Siva) mantra to be happy.

caraNam: This mantra, Rama, is the essence (saaram) of all (sakala) the Vedas, and it is the best mantra for reaching salvation (mukti). For those with bhakti, this is the ultimate mantra. This is Purandara ViTThala's (Vishnu's) great mantra.
***

ಪಲ್ಲವಿ
ರಾಮ ಮಂತ್ರವ ಜಪಿಸೋ ಹೇ ಮನುಜ 

ಅನುಪಲ್ಲವಿ
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ

ಚರಣ
ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆ ಕೊಂಬುವ ಮಂತ್ರ ೧

ಜ್ಞಾನನಿಧಿ ನಮ್ಮ ಆನಂದತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರವಿಠಲನ ಮಂತ್ರ ೨
***

.ದಾಸರ ದೃಷ್ಟಿಯಲ್ಲಿ ರಾಮ ಕೃಷ್ಣ.  2.9.2021
ಲೇಖನ ಮಧುಸೂದನ ಕಲಿಭಟ್. ಧಾರವಾಡ.

ದಾಸರು ರಾಮನಾಮದ ಮಹತ್ವ ಎಷ್ಟೋ ಪದ್ಯಗಳಲ್ಲಿ ಹೇಳಿ ನಮ್ಮನು ಎಚ್ಚರಿಸಿದ್ದಾರೆ.
ರಾಮ ಮಂತ್ರವ ಜಪಿಸೋ ಹೇ ಮನುಜ.
ರಾಮ ಮಂತ್ರವ ಜಪಿಸೋ.

ಮನುಜರಿಗೆ ರಾಮ ಮಂತ್ರವನ್ನು ಜಾಫಿಸಿರಿ ಎಂದು ಹೇಳಿ ಮುಂದೆ ಆದರ ಮಹತ್ವ, ಯಾರೂ ಜಪಿಸಿದರು ಆದರ ಪರಿಣಾಮ ಹೇಳಿದ್ದಾರೆ.

ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ
ಸೋಮಶೇಖರ ತನ್ನಭಾಮೆಗ್ಹೇಳಿದ ಮಂತ್ರ    ಆ. ಪ.

ಕಲಿಯುಗದಲ್ಲಿ. ಜೀವರು ತಮ್ಮ ಲೌಕಿಕ ಆಶೆ ಈಡೇರಿಸಲು ಅದೆಷ್ಟೋ ದೇವತೆಗಳಿಗೆ ಮೊರೆ ಹೋಗುತ್ತಾರೆ. ಆದರೆ. ಮೋಕ್ಷವನ್ನು ದಯಪಾಲಿಸುವ ಶ್ರೀಹರಿಯನ್ನು ಸ್ಮರಿಸುವದಿಲ್ಲ. ದುಷ್ಟ ದೇವತೆ, ಪ್ರೇತ, ಭೂತಗಳ ಆರಾಧನೆ ಮಾಡುವರು. ದರ್ಶನ ದೇವತೆಗಳು ಜೀವರಿಗೆ, ತಾತ್ಪೂರ್ತಿಕ ಪರಿಹಾರ ನೀಡುವರು ಮತ್ತು ಈ ಲೌಕಿಕದಲ್ಲೇ ಮನಸ್ಸು ಹಾಕಿಸುತ್ತಾರೆ. ಇದು ಅವರಿಗೆ ಶ್ರೀಹರಿಯ ಆಜ್ಞೆಯಾಗಿರುತ್ತದೆ. ಮೋಕ್ಷಕ್ಕೆ ಸಾಧನೆ ಆಗುವದಿಲ್ಲ. ಆದ್ದರಿಂದ ದಾಸರು. ಮಾನವರಿಗೆ ಆಮಂತ್ರ ಈ. ಮಂತ್ರ ಜಪಿಸಬೇಡ ಎಂದು ತಿಳಿಸಿ ಹೇಳಿದ್ದಾರೆ.

ಇದಲ್ಲದೆ ಜಗತ್ತಿಗೆ ಪರಮ ವೈಷ್ಣವನಾದ ರುದ್ರ ದೇವರು ರಾಮ ಮಂತ್ರವನ್ನು ಸತತ ಜಾಪಿಸುವರು. ತಮ್ಮ ಪತ್ನಿ ಪಾರ್ವತಿಗೂ ರಾಮ ಮಂತ್ರದ ಮಹಿಮೆಹೇಳಿದ್ದಾರೆ. ವಿಷ್ಣು ಸಹಸ್ರ ನಾಮದಲ್ಲಿ ರಾಮನಾಮ ಒಂದೇ ಸಾವಿರ ನಾಮಕ್ಕೆ ಸರಿಯಾಗಿದೆ ಎಂದುಹೇಳಿದ್ದಾರೆ.

ಕುಲಹೀನ ನಾದರೂ ಕೂಗಿ ಜಪಿಸೋಮಂತ್ರ
ಸಲೆ ಬಿಡಿಯೋಳು ಉಚರಿಸುವ ಮಂತ್ರ
ಹಲವು ಪಾಪಂಗಳ ಹದಗೆಡಿಸುವ ಮಂತ್ರ
ಸುಲಭದಿಂದಲಿ ಮೋಕ್ಷ ಸೂರೆಗೊಂಬುವ ಮಂತ್ರ 1.

ವಿಷ್ಣುವು ತನ್ನ ನಾಮಸ್ಮರಣೆಗೆ. ಯಾರಿಗೂ ಯಾವದೇ ರೀತಿಯ ನಿರ್ಬಂಧ ವಹಿಸಿಲ್ಲ. ಅವನು ನೋಡುವದು ಜೀವನಿಂದ ತನ್ನಲ್ಲಿ ಮಾಡಿದ ಭಕ್ತಿ. ಜಾತಿ ಧರ್ಮ ಪಂಥ ಯಾವದನ್ನು ನೋಡುವದಿಲ್ಲ.
ಚಾತುರ್ವರ್ಣ ಗಳಲ್ಲಿ ಯಾರಿದ್ದರು ಸರಿ ಭಕ್ತಿ. ಮುಖ್ಯ.ಯಾರಾದರೂ ಜಪಿಸುವದನ್ನು ಕಂಡು ಹೀಯಾಳಿಸುವರು ಎಂದು ಕದ್ದು ಮುಚ್ಚಿ ಅನ್ನುವ ಮಂತ್ರ ಈ ರಾಮ ಮಂತ್ರ ಅಲ್ಲ. ಕೂಗಿ ಎಲ್ಲರಿಗೂ ಕೇಳಿಸುವಂತೆ ಅನ್ನುವ ಜಪ. ಅರ್ಥಾತ್ ರಾಮ ನಾಮವನ್ನು ಜಪಿಸದೆ, ಕೇವಲ ಕೇಳಿದರು ಸಹ ಪಾಪನಾಶವಾಗುತ್ತವೆ. ಇದನ್ನೇ ದಾಸರು ಓಣಿಯಲ್ಲಿ ಒದರಿ ಹೇಳುವ ಮಂತ್ರ. ಅಂದರೆ ಓಣಿಯ ಜನರೆಲ್ಲರೂ ಜಪಿಸುವ  ಮಂತ್ರ ಎಂದೂ ಅರ್ಥ ಆಗುವದು.
ಕಲಿಯುಗದಲ್ಲಿ ಜೀವನು ಲೌಕಿಕ ದಲ್ಲಿ ಮುಳುಗಿ ಅದೆಷ್ಟೋ ಜನ್ಮ ಬರುವಷ್ಟು ಪಾಪಗಳನ್ನು ತಿಳಿಯದೇ ಮಾಡುವನು. ಇದು ಪುರಾಣ ಗಳಲ್ಲಿ ಹೇಳಿದ ಮಾತು. ಇಂತಹ ಪಾಪಗಳು ಬೆಳೆಯುತ್ತ ಹೋಗುತ್ತವೆ. ಅದನ್ನೇ ದಾಸರು ಹದ ಶಬ್ದ ಪ್ರಯೋಗ ಮಾಡಿದ್ದಾರೆ. ಪಾಪಗಳು ಪಕ್ವ ಆಗುತ್ತವೆ. ಆಗ ಪಾಪದ ಫಲ  ನಾಶವಾಗಲೂ ಈ ರಾಮ ಮಂತ್ರವು ಬಹು ಉಪಯೋಗ. ಪಾಪ ಪಕ್ವ ಆಗಲು ಬಿಡುವದಿಲ್ಲ. ಮೊದಲೇ ನಾಶ ಮಾಡುತ್ತದೆ. ಇದರ ಪರಿಣಾಮದಿಂದ ಮೋಕ್ಷ ಸಾಧನೆ ಆಗಿ. ರಾಮನಾಮ ಜಪಿಸುವ ಎಲ್ಲ ಭಕ್ತರಿಗೂ ಶ್ರೀ ಹರಿ ಮೋಕ್ಷ ವನ್ನು. ಕೊಡುವನು ಎಂದೂ ದಾಸರು. ವರ್ಣಿಸಿ. ಮಾನವಜೀವಿಗೆ ತಿಳಿ ಹೇಳಿದ್ದಾರೆ.

ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ಋಷಿಗಳಲಿ ಸೇರಿದ ಮಂತ್ರ
ದುರಿತ ಕಾನನಕಿದು ದಾವಾನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ. 2.

ದಾಸರು ಈ ಪದ್ಯದಲ್ಲಿ ರಾಮನಾಮವನ್ನು ಜಪಿಸಿ ಜಗತ್ತಿನಲ್ಲಿ ಪ್ರಸಿದ್ಧರಾದರು. ಅದರಿಂದ ಅವರಿಗೆ ಸಿಕ್ಕ ಫಲ ಏನೂ ಎಂಬುದನ್ನು ಹೇಳಿದ್ದಾರೆ.
ವಾಯು ಪುತ್ರ ಹನುಮನು ದಿನನಿತ್ಯ ಜಪಿಸುವ ರಾಮ ಮಂತ್ರ. ರಾಮನಾಮದ ಮಹಿಮೆಯನ್ನು ಕೇವಲ ಕಪಿಗಳಿಗೆ ಅಲ್ಲದೇ ಜಗತ್ತಿಗೆ ಪ್ರಚಾರ ಮಾಡಿದವನು. ಇದರಿಂದ ಜಗತ್ತಿನಲ್ಲಿ ರಾಮಭಕ್ತ ಎನಿಸಿಕೊಂಡನು.
ಋಷಿಮುನಿಗಳು ತಮ್ಮ ತಪಸ್ಸಿನಲ್ಲಿ ಜಪಿಸುವದೇ ಶ್ರೀ ರಾಮ ಮಂತ್ರ ಅದೆ. ಅದರಿಂದ ಅವರಿಗೆ ಮೋಕ್ಷ. ಅವರ ಭಕ್ತಿಗೆ ಮೆಚ್ಚಿ ರಾಮನೇ ಅವರಲ್ಲಿ ಕುಳಿತಿರುವನು. ಋಷಿ ಮುನಿಗಳಿಗೆ ಕೂತರೆ ನಿಂತರೆ ಯಾವಾಗಲೂ ರಾಮನಾಮ ಮುಖಗತ, ಮನೋಗತ ಆಗಿದ್ದರಿಂದ ರಾಮ ಮಂತ್ರ ಋಷಿಗಳನ್ನು ಸೇರಿದೆ ಎಂದೂ ದಾಸರು ವರ್ಣಿಸಿದ್ದಾರೆ.

ಕಲಿಯುಗದಲ್ಲಿ ಮಾನವರು ಮಾಡಿದ ಪಾಪಕ್ಕೆ ಲೆಕ್ಕವಿಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುವದು. ಇದನ್ನೇ ದಾಸರು ಪಾಪದ ಅಡವಿ ಎಂದೂ ಕರೆದಿರುವರು. ಆದರೆ ರಾಮನಾಮ ಇಂಥ ಪಾಪದ ಅಡವಿಗೆ ಅಗ್ನಿಗೆ ಸಮಾನ ವಾಗಿ ಮಾಡಿದ ಪಾಪಗಳೆಲ್ಲ ಸುಟ್ಟು ಹೋಗುತ್ತವೆ. ಇದಕ್ಕೆ ಸಂಶಯವೇ ಇಲ್ಲ.

ಇದಲ್ಲದೆ ತ್ರೇತೆಯಲಿ ರಾವಣ, ಕುಂಭಕರ್ಣ ರ ತಮ್ಮ ನಾದ ವಿಭೀಷಣ ಪರಮ ವೈಷ್ಣವ. ದುಷ್ಟ ಕ್ರೂರನಾದ ರಾವಣನಿಗೂ ಧರ್ಮ ಹೇಳಲು ಕಾರಣ ಅವನಲ್ಲಿ ಇದ್ದ  ರಾಮ  ಭಕ್ತಿ. ಈ ರಾಮನಾಮ ಜಪವೇ ಅವನನ್ನು ರಾವಣನ ವಧೆಯಾದ ನಂತರದಲ್ಲಿ ಲಂಕೆಯ ರಾಜಾನನ್ನಾಗಿ ಮಾಡಿತು.

ಜ್ಞಾನ ನಿಧಿ ನಮ್ಮ ಆನಂದ ತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದಿನ ರಕ್ಷಕ ಪುರಂದರವಿಠಲನ ಮಂತ್ರ           3.

ವಾಯುದೇವರ ಅವತಾರಿಗಳಾದ ಶ್ರೀ ಆನಂದತೀರ್ಥರು ಪ್ರೀತಿ, ಪ್ರೇಮ, ಭಕ್ತಿ, ಜ್ಞಾನ ಗಳಿಂದ ಕೂಡಿ ಪರಮಾತ್ಮನನ್ನು ಶ್ರೀ ರಾಮ ಮಂತ್ರದಿಂದ  ನಿತ್ಯ ಪೂಜಿಸುವರು. ಭಕ್ತ ಜನರ ಬಡವರ ರಕ್ಷಕ ಎನಿಸಿದ ಸೂರ್ಯವಂಶ ಎಂಬ ಸಮುದ್ರದಲ್ಲಿಯ ಚಂದ್ರನಂತಿರುವ ಪುರಂದರವಿಠಲನ ನಾಮವೆ ಶ್ರೀ ರಾಮ ಮಂತ್ರ ಆಗಿದೆ ಎಂದೂ ಮನುಜಕುಲಕ್ಕೆ ಸಾರಿ ಸಾರಿ ಹೇಳಿದ್ದಾರೆ.
***