ಶುಂಠನಿಗೆ ಉಂಟೆ ವೈಕುಂಠ
ಶುಂಠನಿಗೆ ಉಂಟೆ ವೈಕುಂಠಾ | ಬಂಟನಿಗೆ ಉಂಟೆ ಒಡತನವು ಪ
ಕಳ್ಳನಿಗೆ ಉಂಟೆ ಪರರು ಒಡವೆ ಗಳಿಸಿದ ಕಷ್ಟ | ಸುಳ್ಳನಿಗೆ ಉಂಟೆ ಮಿತಿಯಾದ ಭಾಷೆ|| ಕೊಲ್ಲುವನಿಗೆ ಉಂಟೆ ದಯಾದಾಕ್ಷಿಣ್ಯದ ಮಾತು | ಕ್ಷುಲ್ಲಕನಿಗೆ ಉಂಟೆ ಗುಣ ಭಾರಿ ಬುದ್ಧಿಗಳು 1
ಉಪವಾಸಿಗೆ ಉಂಟೆ ಅನ್ನ ಆಹಾರದ ಚಿಂತೆ | ತಪಸಿಗೆ ಉಂಟೆ ಇಹದ ವ್ಯಾಕುಲ || ಕೃಪಣನಿಗೆ ಉಂಟೆ ದಾನ-ಧರ್ಮದ ಚಿಂತೆ | ಚಪಳನಾರಿಗೆ ಉಂಟೆ ತನ್ನ ಮನೆವಾರ್ತೆ 2
ರುಚಿ | ಹಾದಿ ಬಿಟ್ಟವಗುಂಟೆ ಮನದ ಧೈರ್ಯ || ವೇದನೆಬಡುವಗುಂಟೆ ಅನ್ನಿಗರ ಸಂಧಾನ | ಕ್ರೋಧದವಗುಂಟೆ ಬಲು ಶಾಂತ ನೀತಿ 3
ಕಾಮಾತುರಗೆ ಉಂಟೆ ಭವಕುರಿತ ಲಜ್ಜೆಗಳು | ನೇಮ ನಿತ್ಯಗೆ ಉಂಟೆ ಮನದರೋಗ || ಹೇಮಾತುರಗೆ ಉಂಟೆ ಗುರು ಬಾಂಧವ ಸ್ನೇಹ | ತಾಮಸಿಗೆ ಉಂಟೆ ಶುಭಕರ್ಮ ಸದ್ಭಕ್ತಿ 4
ದಾನಿಗೆ ಉಂಟೆ ಇಂದಿಗೆ ನಾಳಿಗೆಂಬೋದು | ಜ್ಞಾನಿಗೆ ಹತ್ಯಾದಿ ದೋಷ ಉಂಟೆ | ಸಿರಿ ವಿಜಯವಿಠ್ಠಲ ಸ್ವಾಮಿಯ ಧೇನಿಸುವಗುಂಟೆ ದಾರಿದ್ರ್ಯ ದುಷ್ಕರ್ಮ5
***
pallavi
shuNTHanige uNTE vaikuNThA baNTanige uNTE paDatanavu
caraNam 1
kaLLanige uNTe pararu oDave gaLisida kaSTa suLLanige uNTe mitiyAda bhASe
kolluvavanige uNTe datA dAkSiNyada mAtu kSullakanige uNTE guNabhAri buddhigaLu
caraNam 2
upavAsige uNTE anna AhArada cintE tapasige uNTE ihada vyAkula
krapaNanigE uNTE dAna dharmada cintE capaLa nArige uNTE tanna manavArte
caraNam 3
kSudhAturage uNTE pAkAdi palaruci hAdi biTTavaguNTe mana dhairya
vEdane baDuvaguNTe annigara sandhAna kROdhadavaguNTE balu shAntanIti
caraNam 4
kAmAturage uNTe bhavaturita lajjegaLu nEma nityage uNTe manada rOga
hEmAturage uNTe guru bAndhava snEha tAmasige uNTe shubaha karma sadbhakti
caraNam 5
dAnige uNTe indige nALigembOdu jnAnige hatyAdi dOSage uNTe
AnandAnandi siri vijayaviThala svAmiya dhEnisuvaguNTe dAridriya duSkarma
***