ಕಾಖಂಡಕಿ ಶ್ರೀ ಕೃಷ್ಣದಾಸರು
ಮಾನವ ಮೂಢಾ | ಕೇಳದೆ ನೀ ಕೆಡಬ್ಯಾಡಾ | ಶೀಲವರಿತುಕೋ ದೃಢಾ | ಹೇಳುವೆ ನಿಜ ಹಿತ ನೋಡಾ ಪ
ಹಾದ್ಯರಿಯದೆ ಪ್ರಚಂಡಾ ಓದಿಕೆ ಯಾಕ ಉದಂಡಾ | ಸಾಧಿಸೋ ಸಾಧನ ಕಾಂಡದ ಬೋಧಿಪ ಮಾರ್ತಾಂಡ | ವಾದ ವಿತ್ತಂಡ ಬಿಡು ಪಾಷಂಡಾ 1
ಹರಿಗುಣ ಕೊಂಡಾಡು ನೀ ಅಖಂಡಾ ಕೇಳು ಕೇಳು ಪ್ರಾಣಿ | ಕರಣ ತ್ರಯಂಗಳ ಬೆರಿಸಿ ಮೊರೆಹೋಗಾಭಾವನೆ ಬಲಿಸಿ | ಗುರುವಿಗೆ ಭಾರೊಪ್ಪಿಸಿ ಇರು ಸಂಶಯವಾ ತ್ಯಜಿಸಿ | ನೆರೆ ಜೌಭಾಗಿಸಿ ತನ ಬಿಡು ಹೇಸಿ ಕುಜನ ದುರಾಶೀ ನದಿಯೊಳು ಸೋಸಿ 2
ಗರುವ ಮುರಿದು ನಿದ್ರ್ವಂದಾ ಚರಿಸಿ ಹಿರಿಯರ ವೃಂದಾ | ಪರಿಯಲಿ ನಡಿನೀ ನೆಂದಾ ಗುರುವರ ಮಹಿಪತಿ ಕಂದಾ | ಪಡದರ ಬಂದಾ | ಜನ್ಮಕ ಛಂದಾ ನೋಡಿದರಿಂದಾ ಕೇಳು ಪ್ರಾಣಿ 3
***