Showing posts with label ಹರಿಕಥಾಮೃತಸಾರ ಸಂಧಿ 15 ankita jagannatha vittala ಶ್ವಾಸ ಸಂಧಿ HARIKATHAMRUTASARA SANDHI 15 SHWAASA SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 15 ankita jagannatha vittala ಶ್ವಾಸ ಸಂಧಿ HARIKATHAMRUTASARA SANDHI 15 SHWAASA SANDHI. Show all posts

Wednesday 27 January 2021

ಹರಿಕಥಾಮೃತಸಾರ ಸಂಧಿ 15 ankita jagannatha vittala ಶ್ವಾಸ ಸಂಧಿ HARIKATHAMRUTASARA SANDHI 15 SHWAASA SANDHI

    

Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  


" ಭಾರತೀಶನು ಘಳಿಗೆಯೊಳು ಮುನ್ನೂರಅರವತ್ತು  " ,

ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 

 ಶ್ವಾಸ ಸಂಧಿ , ರಾಗ ವಲಚಿ


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||


ಭಾರತೀಶನು ಘಳಿಗೆಯೊಳು ಮುನ್ನೂರ ಅರವತ್ತು ಸುರ ಜಪಗಳ ತಾ ರಚಿಸುವನು

ಸರ್ವ ಜೀವರೊಳಿದ್ದು ಬೇಸರದೆ

ಕಾರುಣಿಕ ಅವರವರ ಸಾಧನ ಪೂರೈಸಿ ಭೂ ಸ್ವರ್ಗ ನರಕವ ಸೇರಿಸುವ

ಸರ್ವಜ್ಞ ಸಕಲೇಷ್ಟ ಪ್ರದಾಯಕನು||1||


ತಾಸಿಗೆ ಒಂಭೈನೂರು ಶ್ವಾಸೋಚ್ಚಾಸಗಳ ನಡೆಸುತಲಿ

ಚೇತನ ರಾಶಿಯೊಳು ಹಗಲಿರುಳು ಜಾಗೃತನಾಗಿ ನಿತ್ಯದಲಿ

ಈ ಸುಮನಸೋತ್ತಂಸ ಲೇಶ ಆಯಾಸವಿಲ್ಲದೆ ಪೋಷಿಸುತ

ಮೂಲೇಶನ ಅಂಘ್ರಿ ಸರೋಜ ಮೂಲದಲಿಪ್ಪ ಕಾಣಿಸದೆ||2||


ಅರಿವುದೊಂದು ಯಾಮದೊಳು ಶ್ವಾಸಗಳು ಎರಡು ಸಾವಿರದ ಏಳು ನೂರನು

ಶರ ಸಹಸ್ರದ ಮೇಲೆ ನಾನೂರು ಅಹವು ದ್ವಿತೀಯಕ್ಕೆ

ಮರಳಿ ಯಾಮತ್ರಯಕೆ ವಸು ಸಾವಿರದ ಮೇಲೆ ನೂರು ಎಣಿಕೆಯಲಿ

ಹನ್ನೆರೆಡು ತಾಸಿಗೆ ಹತ್ತು ಸಾವಿರದ ಎಂಟು ನೂರ ಅಹವು||3||


ಒಂದು ದಿನದೊಳಗೆ ಅನಿಳ ಇಪ್ಪ್ಪತ್ತೊಂದು ಸಾವಿರದ ಆರು ನೂರು

ಮುಕುಂದನಾಜ್ಞದಿ ಮಾಡಿ ಮಾಡಿಸಿ ಲೋಕಗಳ ಪೊರೆವನೆಂದು ಪವನನ ಪೊಗಳುತಿರು

ಎಂದೆಂದೂ ಮರೆಯದೆ ಈ ಮಹಿಮೆ ಸಂಕ್ರಂದನಾದ್ಯರಿಗುಂಟೆ

ನೋಡಲು ಸರ್ವ ಕಾಲದಲಿ||4||


ಮೂರು ಲಕ್ಷದ ಮೇಲೆ ವಿಂಶತಿ ಈರೆರೆಡು ಸಾವಿರವು ಪಕ್ಷಕೆ

ಆರು ಲಕ್ಷದ ಮೇಲೆ ನಾಲ್ವತ್ತೆಂಟು ಸಾವಿರವು ಮಾರುತನು ಮಾಸಕೆ ಜಪಿಸಿ

ಸಂಸಾರ ಸಾಗರದಿಂದ ಸುಜನರ ಪಾರುಗಾಣಿಸಿ

ಸಲಹುವನು ಬಹು ಭೋಗಗಳನಿತ್ತು||5||


ಎರಡು ತಿಂಗಳಿಗೆ ಅಹುದು ಋತು ಭೂ ಸುರರು ತಿಳಿವುದು

ಶ್ವಾಸ ಜಪ ಹನ್ನೆರಡು ಲಕ್ಷದ ಮೇಲೆ ತೊಂಭತ್ತಾರು ಸಹಸ್ರ

ಕರೆಸುವದು ಅಯನ ಅಹ್ವಯದಿ ಅರೆ ವರುಷ

ಮೂವತ್ತೆಂಟು ಲಕ್ಷ ಈ ಪರಿ ತಿಳಿವುದು ಎಂಭತ್ತೆಂಟು ಸಹಸ್ರ ಕೋವಿದರು||6||


ವರುಷಕೆ ಇದರ ಇಮ್ಮಡಿ ಜಪಂಗಳ ಗುರುವರಿಯ ತಾ ಮಾಡಿ ಮಾಡಿಸಿ

ದುರಿತಗಳ ಪರಿಹರಿಸುವನು ಚಿಂತಿಸುವ ಸಜ್ಜನರ

ಸುರ ವಿರೋಧಿಗಳೊಳಗೆ ನೆಲೆಸಿದ್ದು ಅರವಿದೂರ

ತಮ ಅಧಿಕಾರಿಗಳ ಇರವರಿತು ಸೋಹಂ ಉಪಾಸನೆ ಮಾಳ್ಪನು ಅವರಂತೆ||7||


ಇನಿತು ಉಪಾಸನೆ ಸರ್ವ ಜೀವರೊಳು ಅನಿಲದೇವನು ಮಾಡುತಿರೆ

ಚಿಂತನೆಯ ಮಾಡದೆ ಕಂಡ ನೀರೊಳು ಮುಳುಗಿ ನಿತ್ಯದಲಿ ಮನೆಯೊಳಗೆ ಕೃಷ್ಣಾಜಿನಾದಿ

ಆಸನದಿ ಕುಳಿತು ವಿಶಿಷ್ಟ ಬಹು ಸಜ್ಜನನು ಎನಿಸಿ

ಜಪ ಮಣಿಗಳ ಎಣಿಸಿದರೇನು ಬೇಸರದೆ||8||


ಓದನೋದಕವು ಎರಡು ತೇಜದೊಳು ಐದುವವು ಲಯ

ತದಭಿಮಾನಿಗಳಾದ ಶಿವ ಪವನರು ರಮಾಧೀನತ್ವ ಐದಿಹರು

ಈ ದಿವಿಜರ ಒಡಗೂಡಿ ಶ್ರೀ ಮಧುಸೂದನನ ಐದುವಳೆಂದರಿದು

ಆದರದಲಿ ಅನ್ನೋದಕವ ಕೊಡುತ ಉಣುತ ಸುಖಿಸುತಿರು||9||

ಜಾಲಿ ತೊಪ್ಪಲ ಅಜಾವಿಗಳು ಮೆದ್ದು ಆಲಯದಿ ಸ್ವೆಚ್ಚಾನುಸಾರದಿ

ಪಾಲಗರೆವ ಅಂದದಲಿ ಲಕ್ಷ್ಮೀ ರಮಣ ತನ್ನವರ ಕೀಳು ಕರ್ಮವ ಸ್ವೀಕರಿಸಿ

ತನ್ನ ಆಲಯದೊಳಿಟ್ಟು ಅವರ ಪೊರೆವ

ಕೃಪಾಳು ಕಾಮದ ಕೈರವದಳ ಶ್ಯಾಮ ಶ್ರೀರಾಮ||10||


ಶಶಿ ದಿವಾಕರ ಪಾವಕರೊಳಿಹ ಅಸಿತಸಿತಲೋಹಿತಗಳಲಿ

ಶಿವಸ್ವಸನ ಭಾರ್ಗವಿ ಮೂವರೊಳು ಶ್ರೀ ಕೃಷ್ಣ ಹಯವದನ ವಸುಧಿಪಾರ್ದನ

ತ್ರಿವೃತುಯೆನಿಸಿ ವಸುಮತಿಯೊಳು ಅನ್ನೋದಕ ಅನಳ ಪೆಸರಿನಿಂದಲಿ

ಸರ್ವ ಜೀವರ ಸಲಹುವನು ಕರುಣಿ||11||


ದೀಪ ಕರದಲಿ ಪಿಡಿದು ಕಾಣದೆ ಕೂಪದೊಳು ಬಿದ್ದಂತೆ

ವೇದ ಮಹೋಪನಿಷದ್ ಅರ್ಥಗಳ ನಿತ್ಯದಿ ಪೇಳುವವರೆಲ್ಲ

ಶ್ರೀ ಪವನಮುಖ ವಿನುತನ ಅಮಲ ಸುರೂಪಗಳ ವ್ಯಾಪಾರ ತಿಳಿಯದೆ

ಪಾಪ ಪುಣ್ಯಕೆ ಜೀವ ಕರ್ತೃ ಆಕರ್ತೃ ಹರಿಯೆಂಬ||12||


ಅನಿಲದೇವನು ವಾಗ್ಮನಃ ಮಯನು ಎನಿಸಿ ಪಾವಕ ವರುಣ

ಸಂಕ್ರಂದನ ಮುಖಾದ್ಯರೊಳಿದ್ದು ಭಗವದ್ರೂಪ ಗುಣಗಳನು

ನೆನೆನೆನೆದು ಉಚ್ಚರಿಸುತಲಿ ನಮ್ಮನು ಸದಾ ಸಂತೈಸುವನು

ಸನ್ಮುನಿ ಗಣ ಆರಾಧಿತ ಪದಾಂಬುಜ ಗೋಜ ಸುರರಾಜ||13||


ಪಾದವು ಎನಿಪವು ವಾಗ್ಮನಃಮಯ ಪಾದರೂಪ ದ್ವಯಗಳೊಳು

ಪ್ರಹ್ಲಾದ ಪೋಷಕ ಸಂಕರುಷಣಾಹ್ವಯದಿ ನೆಲೆಸಿದ್ದು

ವೇದ ಶಾಸ್ತ್ರ ಪುರಾಣಗಳ ಸಂವಾದ ರೂಪದಿ ಮನನಗೈವುತ

ಮೋದಮಯ ಸುಖವಿತ್ತು ಸಲಹುವ ಸರ್ವ ಸಜ್ಜನರ||14||


ಗಂಧವಹ ದಶ ದಿಶಗಳೊಳಗೆ ಅರವಿಂದ ಸೌರಭ ಪಸರಿಸುತ

ಘ್ರಾಣ ಇಂದ್ರಿಯಗಳಿಗೆ ಸುಖವನೀವುತ ಸಂಚರಿಸುವಂತೆ

ಇಂದಿರೇಶನ ಸುಗುಣಗಳ ದೈನಂದಿನದಿ ತುತಿಸುತ ಅನುಮೋದಿಸುತ

ಅಂಧಬಧಿರ ಸುಮೂಕನಂತಿರು ಮಂದ ಜನರೊಡನೆ||15||


ಶ್ರೀರಮಣನ ಅರಮನೆಯ ಪೂರ್ವ ದ್ವಾರದಲಿ ಇಹ ಸಂಜ್ಞಸೂರ್ಯಗ

ಭಾರತೀಪತಿ ಪ್ರಾಣನ ಒಳಗಿಹ ಲಕುಮಿ ನಾರಾಯಣನ ಸೇರಿ ಮನುಜೋತ್ತಮರು

ಸರ್ವ ಶರೀರಗತ ನಾರಾಯಣನ ಅವತಾರ ಗುಣಗಳ ತುತಿಸುತಲಿ

ಮೋದಿಪರು ಮುಕ್ತಿಯಲಿ||16||


ಪ್ರಣವ ಪ್ರತಿಪಾದ್ಯನ ಪುರದ ದಕ್ಷಿಣ ಕವಾಟದಲಿಪ್ಪ

ಶಶಿ ರೋಹಿಣಿಗತ ವ್ಯಾನಸ್ಥ ಕೃತಿ ಪ್ರದ್ಯುಮ್ನ ರೂಪವನು

ಗುಣಗಳನು ಸಂಸ್ತುತಿಸುತಲಿ ಪಿತೃ ಗಣ ಗಧಾಧರನ ಅತಿವಿಮಲ ಪಟ್ಟಣದ ಒಳಗೆ

ಸ್ವೇಚ್ಚಾನುಸಾರದಿ ಸಂಚರಿಸುತಿಹರು||17||


ಅಮಿತ ವಿಕ್ರಮನ ಆಲಯದ ಪಶ್ಚಿಮ ಕವಾಟದಿ ಸತಿಸಹಿತ ಸಂಭ್ರಮದಿ

ಭಗವದ್ಗುಣಗಳನೆ ಪೊಗಳುತಲೇ ಮೋದಿಸುವ

ಸುಮನಸಾಸ್ಯನೊಳಿಪ್ಪ ಅಪಾನಗ ದಮನ ಸಂಕರುಷಣನ

ನಿಹ ಹೃತ್ಕಮಲದೊಳು ಧೇನಿಸುವ ಋಷಿಗಣವ ಐದಿ ಸುಖಿಸುವರು||18||


ಸ್ವರಮಣನ ಗುಣ ರೂಪ ಸಪ್ತಸ್ವರಗಳಿಂದಲಿ ಪಾಡುತಿಹ

ತುಂಬುರನೆ ಮೊದಲಾದ ಅಖಿಳ ಗಂಧರ್ವರು

ರಮಾಪತಿಯ ಪುರದ ಉತ್ತರ ಬಾಗಿಲಧಿಪ ಸುರಪ ಶಚಿಗ ಸಮಾನ ವಾಯುಗ

ಹರಿನ್ಮಣಿನಿಭ ಶಾಂತಿಪತಿ ಅನಿರುದ್ಧನ ಐದುವರು||19||

ಗರುಡ ಶೇಷ ಅಮರ ಇಂದ್ರಮುಖ ಪುಷ್ಕರನೆ ಕಡೆಯಾಗಿಪ್ಪ ಅಖಿಳ ನಿರ್ಜನರು

ಊರ್ಧ್ವ ದ್ವಾರಗತ ಭಾರತಿ ಉದಾನದೊಳು ಮೆರೆವ ಮಾಯಾ ವಾಸುದೇವನ

ಪರಮ ಮಂಗಳ ಅವಯವಗಳ ಮಂದಿರವನು ಐದಿ

ಸದಾ ಮುಕುಂದನ ನೋಡಿ ಸುಖಿಸುವರು||20||


ದ್ವಾರ ಪಂಚಕ ಪಾಲರೊಳಗಿಹ ಭಾರತೀ ಪ್ರಾಣಾಂತರಾತ್ಮಕ

ಮಾರಮಣನ ಐ ರೂಪ ತತ್ತತ್ದ್ವಾರದಲಿ ಬಪ್ಪ

ಮೂರೆರೆಡು ವಿಧ ಮುಕ್ತಿ ಯೋಗ್ಯರ ತಾರತಮ್ಯವನರಿತು ಅವರ

ಕಂಸಾರಿ ಸಂಸಾರಾಬ್ಧಿ ದಾಟಿಸಿ ಮುಕ್ತರಣ ಮಾಳ್ಪ||21||


ಬೆಳಗಿದ ಹೂಜಿಯು ನೋಳ್ಪರಿಗೆ ಥಳಥಳಿಸುತಲಿ ಕಂಗೊಳಿಸುವ ಅಂದದಿ

ತೊಳೆದು ದೇಹವ ನಾಮ ಮುದ್ರೆಗಳಿಂದ ಅಲಂಕರಿಸಿ ಒಲಿಸಿ

ನಿತ್ಯ ಕುತರ್ಕ ಯುಕ್ತಿಗಳ ಅಲವಬೋಧರ ಶಾಸ್ತ್ರ ಮರ್ಮವ ತಿಳಿಯದಿಹ ನರ

ಬರಿದೆ ಇದರೊಳು ಶಂಕಿಸಿದರೇನು||22||


ಉದಧಿಯೊಳು ಊರ್ವಿಗಳು ತೋರ್ಪಂದದಲಿ ಹಂಸೋದ್ಗೀಥ ಹರಿ

ಹಯವದನ ಕೃಷ್ಣಾದಿ ಅಮಿತ ಅವತಾರಗಳು ನಿತ್ಯದಲಿ

ಪದುಮನಾಭನೊಳು ಇರುತಿಹವು ಸರ್ವದ ಸಮಸ್ತ ಪ್ರಾಣಿಗಳ ಚಿತ್ಹೃದಯಗತ ರೂಪಗಳು

ಅವ್ಯವಧಾನದಲಿ ಬಿಡದೆ||23||


ಶರಧಿಯೊಳು ಮಕರಾದಿ ಜೀವರು ಇರುಳು ಹಗಲು ಏಕ ಪ್ರಕಾರದಿ

ಚರಿಸುತ ಅನುಮೋದಿಸುತ ಇಪ್ಪಂದದಿ

ಜಗತ್ರಯವು ಇರುತಿಹುದು ಜಗದೀಶನುದರದಿ

ಕರೆಸುವುದು ಪ್ರತಿಬಿಂಬ ನಾಮದಿ ಧರಿಸಿಹುದು ಹರಿ ನಾಮ ರೂಪಂಗಳನು ಅನವರತ||24||


ಜನನಿ ಸೌಷ್ಠ ಪದಾರ್ಥಗಳು ಭೋಜನವ ಮಾಡಲು ಗರ್ಭಗತ ಶಿಶು ದಿನದಿನದಿ

ಅಭಿವೃದ್ಧಿಯೈದುವ ತೆರದಿ

ಜೀವರಿಗೆ ಪದುಮನಾಭನು ಸರ್ವ ರಸ ಉಂಡುಣಿಸಿ ಸಂರಕ್ಷಿಸುವ

ಜಾಹ್ನವಿ ಜನಕ ಜನ್ಮಾದಿ ಅಖಿಳ ದೋಷ ವಿದೂರ ಗಂಭೀರ||25||


ಆಶೆಗೆ ಒಳಗಾದವನು ಜನರಿಗೆ ದಾಸನೆನಿಸುವ

ಆಶೆಯನು ನಿಜ ದಾಸಗೆ ಐದಿಹ ಪುಂಸಗೆ ಎಲ್ಲರು ದಾಸರೆನಿಸುವರು

ಶ್ರೀಶನ ಅಂಘ್ರಿ ಸರೋಜಯುಗಳ ನಿರಾಶೆಯಿಂದಲಿ ಭಜಿಸೆ ಒಲಿದು

ರಮಾ ಸಹಿತ ತನ್ನನೆ ಕೊಡುವ ಕರುಣಾ ಸಮುದ್ರ ಹರಿ||26||


ದ್ಯುನದಿ ಆದ್ಯಂತವನು ಕಾಣದೆ ಮನುಜನು ಏಕತ್ರದಲಿ ತಾ ಮಜ್ಜನವ ಗೈಯೆ

ಸಮಸ್ತ ದೋಷದಿ ಮುಕ್ತನಹ ತೆರದಿ

ಅನಘನ ಅಮಲಾನಂತನಂತ ಸುಗುಣಗಳೊಳಗೆ ಒಂದೇ ಗುಣ

ಉಪಾಸನೆಯಗೈವ ಮಹಾತ್ಮ ಧನ್ಯ ಕೃತಾರ್ಥನು ಎನಿಸುವನು||27||


ವಾಸುದೇವನು ಕರೆಸುವನು ಕಾರ್ಪಾಸ ನಾಮದಿ ಸಂಕರುಷಣನು ವಾಸವಾಗಿಹ ತೂಲದೊಳು

ತಂತುಗನು ಪ್ರದ್ಯುಮ್ನ

ವಾಸ ರೂಪ ಅನಿರುದ್ಧ ದೇವನು

ಭೂಷಣನು ತಾನಾಗಿ ತೋರ್ಪ ಪರೇಶ ನಾರಾಯಣನು ಸರ್ವದ ಮಾನ್ಯ ಮಾನದನು||28||


ಲಲನೆಯಿಂದೊಡಗೂಡಿ ಚೈಲಗಳೊಳಗೆ ಓತಪ್ರೋತ ರೂಪದಿ

ನೆಲೆಸಿಹನು ಚತುರಾತ್ಮಕ ಜಗನ್ನಾಥ ವಿಠಲನು

ಛಳಿ ಬಿಸಿಲು ಮಳೆ ಗಾಳಿಯಿಂದ ಅರ ಘಳಿಗೆ ಬಿಡದಲೇ ಕಾವನು ಎಂದರಿದು

ಇಳೆಯೊಳು ಅರ್ಚಿಸುತಿರು ಸದಾ ಸರ್ವಾಂತರಾತ್ಮಕನ||29||

********


harikathAmRutasAra gurugaLa karuNadindApanitu kELuve

parama BagavadBaktaru idanAdaradi kELuvudu||


BAratISanu GaLigeyoLu munnUra aravattu sura japagaLa tA racisuvanu

sarva jIvaroLiddu bEsarade

kAruNika avaravara sAdhana pUraisi BU svarga narakava sErisuva

sarvaj~ja sakalEShTa pradAyakanu||1||


tAsige oMBainUru SvAsOccAsagaLa naDesutali

cEtana rASiyoLu hagaliruLu jAgRutanAgi nityadali

I sumanasOttaMsa lESa AyAsavillade pOShisuta

mUlESana anGri sarOja mUladalippa kANisade||2||


arivudondu yAmadoLu SvAsagaLu eraDu sAvirada ELu nUranu

Sara sahasrada mEle nAnUru ahavu dvitIyakke

maraLi yAmatrayake vasu sAvirada mEle nUru eNikeyali

hannereDu tAsige hattu sAvirada enTu nUra ahavu||3||


ondu dinadoLage aniLa ipppattoMdu sAvirada Aru nUru

mukundanAj~jadi mADi mADisi lOkagaLa porevanendu pavanana pogaLutiru

endendU mareyade I mahime sankrandanAdyarigunTe

nODalu sarva kAladali||4||


mUru lakShada mEle viMSati IrereDu sAviravu pakShake

Aru lakShada mEle nAlvattenTu sAviravu mArutanu mAsake japisi

saMsAra sAgaradinda sujanara pArugANisi

salahuvanu bahu BOgagaLanittu||5||


eraDu tingaLige ahudu Rutu BU suraru tiLivudu

SvAsa japa hanneraDu lakShada mEle toMBattAru sahasra

karesuvadu ayana ahvayadi are varuSha

mUvattenTu lakSha I pari tiLivudu eMBattenTu sahasra kOvidaru||6||


varuShake idara immaDi japangaLa guruvariya tA mADi mADisi

duritagaLa pariharisuvanu cintisuva sajjanara

sura virOdhigaLoLage nelesiddu aravidUra

tama adhikArigaLa iravaritu sOhaM upAsane mALpanu avarante||7||


initu upAsane sarva jIvaroLu aniladEvanu mADutire

cintaneya mADade kanDa nIroLu muLugi nityadali maneyoLage kRuShNAjinAdi

Asanadi kuLitu viSiShTa bahu sajjananu enisi

japa maNigaLa eNisidarEnu bEsarade||8||


OdanOdakavu eraDu tEjadoLu aiduvavu laya

tadaBimAnigaLAda Siva pavanaru ramAdhInatva aidiharu

I divijara oDagUDi SrI madhusUdanana aiduvaLendaridu

Adaradali annOdakava koDuta uNuta suKisutiru||9||


jAli toppala ajAvigaLu meddu Alayadi sveccAnusAradi

pAlagareva andadali lakShmI ramaNa tannavara kILu karmava svIkarisi

tanna AlayadoLiTTu avara poreva

kRupALu kAmada kairavadaLa SyAma SrIrAma||10||


SaSi divAkara pAvakaroLiha asitasitalOhitagaLali

Sivasvasana BArgavi mUvaroLu SrI kRuShNa hayavadana vasudhipArdana

trivRutuyenisi vasumatiyoLu annOdaka anaLa pesarinindali

sarva jIvara salahuvanu karuNi||11||


dIpa karadali piDidu kANade kUpadoLu biddante

vEda mahOpaniShad arthagaLa nityadi pELuvavarella

SrI pavanamuKa vinutana amala surUpagaLa vyApAra tiLiyade

pApa puNyake jIva kartRu AkartRu hariyeMba||12||


aniladEvanu vAgmanaH mayanu enisi pAvaka varuNa

sankrandana muKAdyaroLiddu BagavadrUpa guNagaLanu

nenenenedu uccarisutali nammanu sadA santaisuvanu

sanmuni gaNa ArAdhita padAMbuja gOja surarAja||13||


pAdavu enipavu vAgmanaHmaya pAdarUpa dvayagaLoLu

prahlAda pOShaka sankaruShaNAhvayadi nelesiddu

vEda SAstra purANagaLa saMvAda rUpadi mananagaivuta

mOdamaya suKavittu salahuva sarva sajjanara||14||


gandhavaha daSa diSagaLoLage aravinda sauraBa pasarisuta

GrANa indriyagaLige suKavanIvuta sancarisuvante

indirESana suguNagaLa dainandinadi tutisuta anumOdisuta

andhabadhira sumUkanantiru manda janaroDane||15||


SrIramaNana aramaneya pUrva dvAradali iha saMj~jasUryaga

BAratIpati prANana oLagiha lakumi nArAyaNana sEri manujOttamaru

sarva SarIragata nArAyaNana avatAra guNagaLa tutisutali

mOdiparu muktiyali||16||


praNava pratipAdyana purada dakShiNa kavATadalippa

SaSi rOhiNigata vyAnastha kRuti pradyumna rUpavanu

guNagaLanu saMstutisutali pitRu gaNa gadhAdharana ativimala paTTaNada oLage

svEccAnusAradi sancarisutiharu||17||


amita vikramana Alayada paScima kavATadi satisahita saMBramadi

BagavadguNagaLane pogaLutalE mOdisuva

sumanasAsyanoLippa apAnaga damana sankaruShaNana

niha hRutkamaladoLu dhEnisuva RuShigaNava aidi suKisuvaru||18||


svaramaNana guNa rUpa saptasvaragaLindali pADutiha

tuMburane modalAda aKiLa gaMdharvaru

ramApatiya purada uttara bAgiladhipa surapa Saciga samAna vAyuga

harinmaNiniBa SAntipati aniruddhana aiduvaru||19||


garuDa SESha amara indramuKa puShkarane kaDeyAgippa aKiLa nirjanaru

Urdhva dvAragata BArati udAnadoLu mereva mAyA vAsudEvana

parama mangaLa avayavagaLa mandiravanu aidi

sadA mukundana nODi suKisuvaru||20||


dvAra pancaka pAlaroLagiha BAratI prANAntarAtmaka

mAramaNana ai rUpa tattatdvAradali bappa

mUrereDu vidha mukti yOgyara tAratamyavanaritu avara

kaMsAri saMsArAbdhi dATisi muktaraNa mALpa||21||


beLagida hUjiyu nOLparige thaLathaLisutali kangoLisuva andadi

toLedu dEhava nAma mudregaLinda alankarisi olisi

nitya kutarka yuktigaLa alavabOdhara SAstra marmava tiLiyadiha nara

baride idaroLu SankisidarEnu||22||


udadhiyoLu UrvigaLu tOrpandadali haMsOdgItha hari

hayavadana kRuShNAdi amita avatAragaLu nityadali

padumanABanoLu irutihavu sarvada samasta prANigaLa cit~hRudayagata rUpagaLu

avyavadhAnadali biDade||23||


SaradhiyoLu makarAdi jIvaru iruLu hagalu Eka prakAradi

carisuta anumOdisuta ippandadi

jagatrayavu irutihudu jagadISanudaradi

karesuvudu pratibiMba nAmadi dharisihudu hari nAma rUpangaLanu anavarata||24||


janani sauShTha padArthagaLu BOjanava mADalu garBagata SiSu dinadinadi

aBivRuddhiyaiduva teradi

jIvarige padumanABanu sarva rasa unDuNisi sanrakShisuva

jAhnavi janaka janmAdi aKiLa dOSha vidUra gaMBIra||25||


ASege oLagAdavanu janarige dAsanenisuva

ASeyanu nija dAsage aidiha puMsage ellaru dAsarenisuvaru

SrISana aMGri sarOjayugaLa nirASeyindali Bajise olidu

ramA sahita tannane koDuva karuNA samudra hari||26||


dyunadi Adyantavanu kANade manujanu Ekatradali tA majjanava gaiye

samasta dOShadi muktanaha teradi

anaGana amalAnantananta suguNagaLoLage ondE guNa

upAsaneyagaiva mahAtma dhanya kRutArthanu enisuvanu||27||


vAsudEvanu karesuvanu kArpAsa nAmadi sankaruShaNanu vAsavAgiha tUladoLu

taMtuganu pradyumna

vAsa rUpa aniruddha dEvanu

BUShaNanu tAnAgi tOrpa parESa nArAyaNanu sarvada mAnya mAnadanu||28||


lalaneyindoDagUDi cailagaLoLage OtaprOta rUpadi

nelesihanu caturAtmaka jagannAtha viThalanu

CaLi bisilu maLe gALiyinda ara GaLige biDadalE kAvanu endaridu

iLeyoLu arcisutiru sadA sarvAntarAtmakana||29||

********* *