Showing posts with label ಪತ್ಯಂತರ್ಗತ ನಾರಸಿಂಹ ಎನುತಾ tandemuddumohana vittala. Show all posts
Showing posts with label ಪತ್ಯಂತರ್ಗತ ನಾರಸಿಂಹ ಎನುತಾ tandemuddumohana vittala. Show all posts

Friday, 27 December 2019

ಪತ್ಯಂತರ್ಗತ ನಾರಸಿಂಹ ಎನುತಾ ankita tandemuddumohana vittala

by ತಂದೆ ಮುದ್ದುಮೋಹನ ವಿಠಲರು
ಪತ್ಯಂತರ್ಗತ ನಾರಸಿಂಹ ಎನುತಾ
ಸಕ್ತಿಯಿಂ ಜಪಿಸಬೇಕಮ್ಮ ಪ

ಬತ್ತಿಯ ಮಾಳ್ಪಾಗ ಬಾಲರಾಡಿಸುವಾಗ
ಪ್ರತ್ಯಾಹದಲಿ ಗೃಹ ಕೃತ್ಯವಾಚರಿಸುವಾಗಅ.ಪ
ಪೊಡವಿಯೊಳ್ ನರಜನ್ಮಪಡೆದೂ ಕೆಟ್ಟ
ನಡತೆಯವರ ಕೂಟ ಮರೆದೂ
ದೃಢ ಭಕ್ತಿಯಿಂ ಲಜ್ಜೆ ತೊರೆದೂ
ನುಡಿನುಡಿಗ್ಹರಿ ಎಂದು ಬಾಯ್ದೆರೆದು
ಅಡುಗೆಯ ಮಾಡಿ ಕಾರೊಡೆಯಗರ್ಪಿಸುವಾಗ
ಒಡೆಯಾದಿಗಳಿಗನ್ನ ಬಡಿಸುವಾಗಲು ನಿತ್ಯ 1

ಪತಿದೈವವೆಂದು ಭಾವಿಸುವ ಸತಿ
ಗತಿಶಯ ಗತಿಸಲ್ಲಿಸುವ
ಪತಿತರ ಪಾವನ ಗೈವ ಲಕ್ಷ್ಮೀ
ಪತಿಯೆ ಸದ್ಭಕ್ತರ ಕಾವ
ಅತಿಹಿತದಿಂದ ಸಂತತ ಹರಿದಾಸರಿ
ಗತಿಸೇವಾರತಿಯಿಂದ ಕೃತಕೃತ್ಯಳಾಗುತ 2

ಪದ್ಮಸಂಭವೆ ಪದ್ಮಜಾತ ವಾತ
ಪದ್ಮಜ ವಲ್ಲಭ ಎನುತ
ಕದ್ರುಜ ರುದ್ರಾದಿ ವಿನುತ ತಂದೆ
ಮುದ್ದುಮೋಹನ ವಿಠಲ ನೀತಾ
ಅದ್ವಿತೀಯನು ಎಂದು ಬುದ್ಯಾದಿಂದ್ರಿಯದಲ್ಲಿ
ನಿದ್ರೆಯೊಳÁದರು ನೀ ಮರೆಯ ಬ್ಯಾಡ 3
****

ಪತ್ಯಂತರ್ಗತ ನಾರಸಿಂಹ ಎನುತಾಸಕ್ತಿಯಿಂ ಜಪಿಸಬೇಕಮ್ಮ ಪ

ಬತ್ತಿಯ ಮಾಳ್ಪಾಗ ಬಾಲರಾಡಿಸುವಾಗಪ್ರತ್ಯಾಹದಲಿಗೃಹಕೃತ್ಯವಾಚರಿಸುವಾಗಅ.ಪ

ಪೊಡವಿಯೊಳ್ ನರಜನ್ಮಪಡೆದೂ ಕೆಟ್ಟನಡತೆಯವರ ಕೂಟ ಮರೆದೂದೃಢ ಭಕ್ತಿಯಿಂ ಲಜ್ಜೆ ತೊರೆದೂನುಡಿನುಡಿಗ್ಹರಿ ಎಂದು ಬಾಯ್ದೆರೆದುಅಡುಗೆಯ ಮಾಡಿ ಕಾರೊಡೆಯಗರ್ಪಿಸುವಾಗಒಡೆಯಾದಿಗಳಿಗನ್ನ ಬಡಿಸುವಾಗಲುನಿತ್ಯ1

ಪತಿದೈವವೆಂದು ಭಾವಿಸುವಸತಿಗತಿಶಯ ಗತಿಸಲ್ಲಿಸುವಪತಿತರ ಪಾವನ ಗೈವ ಲಕ್ಷ್ಮೀಪತಿಯೆ ಸದ್ಭಕ್ತರಕಾವಅತಿಹಿತದಿಂದ ಸಂತತ ಹರಿದಾಸರಿಗತಿಸೇವಾರತಿಯಿಂದ ಕೃತಕೃತ್ಯಳಾಗುತ 2

ಪದ್ಮಸಂಭವೆ ಪದ್ಮಜಾತವಾತಪದ್ಮಜವಲ್ಲಭಎನುತಕದ್ರುಜರುದ್ರಾದಿವಿನುತತಂದೆಮುದ್ದುಮೋಹನ ವಿಠಲ ನೀತಾಅದ್ವಿತೀಯನು ಎಂದು ಬುದ್ಯಾದಿಂದ್ರಿಯದಲ್ಲಿನಿದ್ರೆಯೊಳ್ಞದರು ನೀ ಮರೆಯ ಬ್ಯಾಡ 3
********