Showing posts with label ವಿಠಲನ ಮಂತ್ರ ಜಪಿಸೋ ಕುಟಿಲವನು vijaya vittala. Show all posts
Showing posts with label ವಿಠಲನ ಮಂತ್ರ ಜಪಿಸೋ ಕುಟಿಲವನು vijaya vittala. Show all posts

Thursday, 17 October 2019

ವಿಠಲನ ಮಂತ್ರ ಜಪಿಸೋ ಕುಟಿಲವನು ankita vijaya vittala

ವಿಜಯದಾಸ
ವಿಠ್ಠಲನ ಮಂತ್ರ ಜಪಿಸೋ ಎಲೆ ಮನವೆ
ಕುಟಿಲವನು ಕಳೆದು ಬಲು ಕುಶಲತನವೀವದು ಪ

ಆಗಮ ಸಿದ್ಧಾಂತದಲ್ಲಿ ಪೊಳೆವ ಮಂತ್ರ
ಯೋಗಿಗಳ ಮನಕೆ ಬಲು ಸೌಮ್ಯ ಮಂತ್ರ
ಸಾಗರವು ಮಥಿಸಲು ಉದಿಸಿ ಪೊರೆದ ಮಂತ್ರ
ಯೋಗಿಗಳು ನೆನೆದರೆ ಸವಿಯಾದ ಮಂತ್ರ 1

ಸುಧಾಮಗೆ ವೊಲಿದು ಸೌಭಾಗ್ಯವಿತ್ತ ಮಂತ್ರ
ಕದನದೊಳು ಫಲ್ಗುಣನ ಕಾಯಿದ ಮಂತ್ರ
ಮಧುರಾಮೃತವಾಗಿ ಜಿಹ್ವೆಗೆ ಒಪ್ಪುವ ಮಂತ್ರ
ಯದುಕುಲಾಗ್ರಣಿಯಾದ ವಿಶ್ವಮಂತ್ರ 2

ಹಾರೈಸಿದವರಿಗೆ ವರವನೀವ ಮಂತ್ರ
ಕಾರುಣ್ಯನಿಧಿ ವಿಜಯವಿಠ್ಠಲರೇಯನ್ನ ಮಂತ್ರ
ಸೇರಿದವರನ್ನ ಬಿಡದೆ ಪೊರೆವ ಮಂತ್ರ 3
***********