ವಿಜಯಪುರದ ಒಂದು ಬಡಾವಣೆ
ಇರಬೇಕು ಇಲ್ಲದಿರಬೇಕು ||ಪ||
ಹರಿದಾಸರು ಸಂಸಾರದೊಳಗೆ ||ಅ||
ಮಕ್ಕಳು ಮತಿವಂತರಾದರೆ ಮನೆಯಲ್ಲಿ
ಅಕ್ಕರದಿಂದಲಿ ಕೂಡಿರಬೇಕು
ಚಿಕ್ಕವನ ಬುದ್ಧಿ ಭೇರುಂಡನಾದರೆ
ಘಕ್ಕನವರ ಕೂಡ ಹೊರಗಾಗಬೇಕೈ ||
ಕುಲಸತಿಯಾದರೆ ಕೂಡಿರಬೇಕು
ಸುಲಭದಿಂದಲಿ ಸ್ವರ್ಗ ಸೂರಾಡಬೇಕು
ಕಲಹಗಂಟಿ ಸತಿ ಕರ್ಕಶೆಯಾದರೆ
ಹಲವು ಪರಿಯಿಂದ ಹೊರಗಾಗಬೇಕು ||
ಹೀನನ ಕಂಡರೆ ಹಿಮ್ಮೆಟ್ಟಬೇಕು
ಜ್ಞಾನಿಗಳ ಕಂಡರೆ ಕೈಮುಗಿಯಬೇಕು
ಸ್ವಾಮಿ ಶ್ರೀಪುರಂದರವಿಟ್ಠಲರಾಯನ
ನಾನಾ ಬಗೆಯಿಂದ ಕೊಂಡಾಡಬೇಕು ||
***
ರಾಗ ನಾದನಾಮಕ್ರಿಯೆ ಛಾಪುತಾಳ (raga, taala may differ in audio)
pallavi
irabEku illadirabEku (P2: irabEku samsAradi manuja iradintarabEku)
anupallavi
haridAsaru samsAradoLage
caraNam 1
makkaLu mativantarAdare maneyalli akkaradindali kUDira bEku
cikkavana buddhi bhEruNDanAdhare khakkanavara kUDa horagAga bEkai
caraNam 2
kulasatiyAdare kUDira bEku sulabhadindali svarga sUrADa bEku
kalaha gaNDTi sati karkasheyAdare halavu pariyinda horagAga bEku
caraNam 3
hInana kaNDare himmeTTa bEku jnAnigaLa kaNDare kai mugiya bEku
svAmi shrI purandara vittalana rAyana nAnA bageyinda koNDADa bEku
3a: duSTara kaNDare dUravirabEku shiSTara kaNDare kai mugiyabEku
diTTa shrI purandara viTTalarAyana gaTTiyAgi niruta nene nambabEku
***