Showing posts with label ಛೀ ಛೀ ಛೀ ಛೀ ಬಿಟ್ಟು ಕೊಡೋ ನೀ gurumahipati CHEE CHEE CHEE CHEE BITTU KODO NEE. Show all posts
Showing posts with label ಛೀ ಛೀ ಛೀ ಛೀ ಬಿಟ್ಟು ಕೊಡೋ ನೀ gurumahipati CHEE CHEE CHEE CHEE BITTU KODO NEE. Show all posts

Thursday, 2 December 2021

ಛೀ ಛೀ ಛೀ ಛೀ ಬಿಟ್ಟು ಕೊಡೋ ನೀ ankita gurumahipati CHEE CHEE CHEE CHEE BITTU KODO NEE

 


ಕಾಖಂಡಕಿ ಶ್ರೀ ಕೃಷ್ಣದಾಸರು


ಛೀ ಛೀ ಛೀ ಛೀ ಪ 


ಬಿಟ್ಟು ಕೊಡೋ ನೀ ಸಂಸಾರ ಭ್ರಾಂತಿ | ಎಷ್ಟು ಸೋಸುವಿ ದುಃಖದ ಪಂಥಿ | ಅಷ್ಟು ಪಾಶದೀ ಬಿಗಿದಿಹ ಗ್ರಂಥಿ | ಕಷ್ಟ ಪಟ್ಟಿನ್ನು ಮಾಡುವಿ ಚಿಂತಿ 1 


ಸತಿ ಸುತರೆಲ್ಲಾ | ಘನ್ನಸ್ನೇಹವ ಮಾಡುವರಲ್ಲಾ | ಧನ ಯೌವನ ಕೊರತ್ಯಾಗಿ ಸೊಲ್ಲಾ | ತೃಣ ಸಮಮಾಡಿ ಬಗೆವರು ಖುಳ್ಳಾ 2 


ಹಳೆದಾಯಿತು ತಾಳಿದ ಕಂಥೀ | ಬಲವಿಂದ್ರಿಯ-ವಾದವು ಶಾಂತಿ | ಬಲು ನೆರೆಯಿತು ರೋಗದ ಸಂತಿ | ಕೆಳಗಾಯಿತು ಪೌರುಷ ಖಂತಿ 3 


ಹಿರಿಕಿರಿಯರು ಸರಿಕರು ನಿನ್ನಾ | ಸರಿದ್ಹೋಗುದು ಕಾಣಲಿಲ್ಲÁ ಕಣ್ಣÁ | ಅರಿತು ವಿವೇಕವ ಪಡಿಯದೆ ಘನ್ನಾ | ಮರೆದಾಗುರೆ ನೀ ಮಸಿಮಣ್ಣಾ 4 


ಒಂದಾಗಲು ಮತ್ತೊಂದಾಶೆ | ಸಂಧಿಸುವದು ವಾಸನೆ ಸೂಶಿ | ತಂದೆ ಮಹಿಪತಿ ನಂದನು ಹೇಸಿ | ಇಂದು ಸಾರಿದಾ ಹರಿನಾಮ ಸ್ಮರಿಸಿ 5

***