Showing posts with label ಭಕುತಿ ಪಾಲಿಸೊ ವಿರಕ್ತಿ karpara narahari satyabodha teertha stutih. Show all posts
Showing posts with label ಭಕುತಿ ಪಾಲಿಸೊ ವಿರಕ್ತಿ karpara narahari satyabodha teertha stutih. Show all posts

Friday, 27 December 2019

ಭಕುತಿ ಪಾಲಿಸೊ ವಿರಕ್ತಿ ankita karpara narahari satyabodha teertha stutih

ಭಕುತಿ ಪಾಲಿಸೊ ವಿರಕ್ತಿ ಕರುಣಿಸೊ ||pa||

ಸತ್ಯಪ್ರೀಯಾ ತೀರ್ಥಕರಜ ಸತ್ಯಬೋಧ ಗುರುವರೇಣ್ಯ||a.pa||

ಪೃಥ್ವಿಜಾವಲ್ಲಭನ ಪಾದ ನಿತ್ಯ ಪೂಜಿಸುತಲಿ ಜಗದಿ
ಮತ್ತಮಾಯಿ ಗಜಕುಲ ಪಂಚ ವಕ್ತ್ರರೆನಿಸಿ ಮೆರೆದ ಗುರುವೆ||1||

ನಂದತೀರ್ಥಮತ ಪಯೋಬ್ಧಿ ಚಂದ್ರ ಸದೃಶರೆನಿಸಿ ಸತತ
ನಂದ ಶಾಸ್ತ್ರ ಬೋಧಿಸಿ ಬುಧ ವೃಂದಕೆ ಆನಂದಗರೆದಿ ||2||

ಇರುಳುಕಾಲದಲ್ಲಿ ನಭದಿ ತರಣಿಬಿಂಬ ತೋರಿದಂಥ
ಪರಮ ಮಹಿಮ ನಿಮ್ಮಯ ಶುಭ ಚರಣ ಸ್ಮರಣೆ ಕರುಣಿಸೆನಗೆ ||3||

ಕೋನೇರಿಯಾಚಾರ್ಯರು ನಿಮ್ಮ ಕಾಣುತ ತೀರ್ಥವನು ಕೊಂಡು
ವಾನರ ದೇಹವನು ತ್ಯಜಿಸಿಸುಸ್ಥಾನ ಗತಿಯ ಪಡೆದರು ಜವ ||4||

ಶರಣು ಜನರ ಪೊರಿವ ‘ ಕಾರ್ಪರ ನರಹರಿ’ ಪದದಿಂದ ಜನಿತ
ಸುರನದಿ ನಿಮ್ಮಯ ಬಳಿಗೆ ಬಂದಿರುವ ಮಹಿಮೆ ತುತಿಸಲೆಂತು ||5||
*******