Showing posts with label ಕರುಣಿಸೋ ಕರುಣಾಸಾಗರ ನರಹರಿಯೆ prasannavenkata. Show all posts
Showing posts with label ಕರುಣಿಸೋ ಕರುಣಾಸಾಗರ ನರಹರಿಯೆ prasannavenkata. Show all posts

Monday, 11 November 2019

ಕರುಣಿಸೋ ಕರುಣಾಸಾಗರ ನರಹರಿಯೆ ankita prasannavenkata

by ಪ್ರಸನ್ನವೆಂಕಟದಾಸರು
ಕರುಣಿಸೊ ಕರುಣಾಸಾಗರ ನರಹರಿಯೆ ನಿನ್ನಚರಣದಾಚರಣೆಗೆಚ್ಚರಾದರನು ಪ.

ಮನ ಮಲಿನವ ತೊಳೆದನುದಿನ ದೃಢದೊಳುಜ್ಞಾನ ಭಕ್ತಿ ವಿರಕ್ತಿಯ ಘನಾಸಕ್ತಿಯಮನಗಂಡು ಮುದವಂತರೆನಿಸಿ ನಾಮಾಮೃತಉಣಬಲ್ಲ ಪೂತಾಂಗ ಮಾನಿಸರ ಸಂಗ 1

ಸಭ್ಯರ ದೂಷಣ ಕೇಳುಬ್ಬಸ ಶ್ರವಣಕೆಇಬ್ಬರ ಕಲಹದಿ ಶಬ್ದಗುಂದಿಅಬ್ಜನಾಭನ ಬಿರುದುಬ್ಬುಬ್ಬಿ ಸುಖವೇರಿಕೊಬ್ಬಿ ಕುಣಿವ ಶಂಲಬ್ಧರೂಳಿಗವ 2

ವೃಂದಾವನದಲಿ ಮುಕುಂದನಾಲಯದಮುಂದಾ ದಿಗಿದಿಗಿತ ವಾದ್ಯವಂದನಿಂದತಂದೆ ಪ್ರಸನ್ನವೆಂಕಟೇಂದ್ರ ನಿನ್ನ ಮುದ್ರಾಂಕಹೊಂದುವ ಜನುಮವ ಆನಂದಮುನಿಮತವ 3
******