by ಪ್ರಸನ್ನವೆಂಕಟದಾಸರು
ರಾಗ – : ತಾಳ –
ಕರುಣಿಸೊ ಕರುಣಾಸಾಗರ ನರಹರಿಯೆ ನಿನ್ನ
ಚರಣದಾಚರಣೆಗೆಚ್ಚರಾದರನು ll ಪ ll
ಮನ ಮಲಿನವ ತೊಳೆದನುದಿನ ದೃಢದೊಳು
ಜ್ಞಾನ ಭಕ್ತಿ ವಿರಕ್ತಿಯ ಘನಾಸಕ್ತಿಯ
ಮನಗಂಡು ಮುದವಂತರೆನಿಸಿ ನಾಮಾಮೃತ
ಉಣಬಲ್ಲ ಪೂತಾಂಗ ಮಾನಿಸರ ಸಂಗ ll ೧ ll
ಸಭ್ಯರ ದೂಷಣ ಕೇಳುಬ್ಬಸ ಶ್ರವಣಕೆ
ಇಬ್ಬರ ಕಲಹದಿ ಶಬ್ದಗುಂದಿ
ಅಬ್ಜನಾಭನ ಬಿರುದುಬ್ಬುಬ್ಬಿ ಸುಖವೇರಿ
ಕೊಬ್ಬಿ ಕುಣಿವ ಶಂಲಬ್ದರೂಳಿಗವ ll ೨ ll
ವೃಂದಾವನದಲಿ ಮುಕುಂದನಾಲಯದ
ಮುಂದಾ ದಿಗಿದಿಗಿತ ವಾದ್ಯವಂದನಿಂದ
ತಂದೆ ಪ್ರಸನ್ನವೆಂಕಟೇಂದ್ರ ನಿನ್ನ ಮುದ್ರಾಂಕ
ಹೊಂದುವ ಜನುಮವ ಆನಂದಮುನಿಮತವ ll ೩ ll
***
ಮನ ಮಲಿನವ ತೊಳೆದನುದಿನ ದೃಢದೊಳುಜ್ಞಾನ ಭಕ್ತಿ ವಿರಕ್ತಿಯ ಘನಾಸಕ್ತಿಯಮನಗಂಡು ಮುದವಂತರೆನಿಸಿ ನಾಮಾಮೃತಉಣಬಲ್ಲ ಪೂತಾಂಗ ಮಾನಿಸರ ಸಂಗ 1
ಸಭ್ಯರ ದೂಷಣ ಕೇಳುಬ್ಬಸ ಶ್ರವಣಕೆಇಬ್ಬರ ಕಲಹದಿ ಶಬ್ದಗುಂದಿಅಬ್ಜನಾಭನ ಬಿರುದುಬ್ಬುಬ್ಬಿ ಸುಖವೇರಿಕೊಬ್ಬಿ ಕುಣಿವ ಶಂಲಬ್ಧರೂಳಿಗವ 2
ವೃಂದಾವನದಲಿ ಮುಕುಂದನಾಲಯದಮುಂದಾ ದಿಗಿದಿಗಿತ ವಾದ್ಯವಂದನಿಂದತಂದೆ ಪ್ರಸನ್ನವೆಂಕಟೇಂದ್ರ ನಿನ್ನ ಮುದ್ರಾಂಕಹೊಂದುವ ಜನುಮವ ಆನಂದಮುನಿಮತವ 3
******
No comments:
Post a Comment