Showing posts with label ಕೃಷ್ಣ ನಿನ್ನಂಥ ಕೂಸೆಲ್ಲಿ ಕಾಣೆ ಜಗದಿ prasannavenkata. Show all posts
Showing posts with label ಕೃಷ್ಣ ನಿನ್ನಂಥ ಕೂಸೆಲ್ಲಿ ಕಾಣೆ ಜಗದಿ prasannavenkata. Show all posts

Monday, 11 November 2019

ಕೃಷ್ಣ ನಿನ್ನಂಥ ಕೂಸೆಲ್ಲಿ ಕಾಣೆ ಜಗದಿ ankita prasannavenkata

by ಪ್ರಸನ್ನವೆಂಕಟದಾಸರು
ಕೃಷ್ಣ ನಿನ್ನಂಥ ಕೂಸೆಲ್ಲಿ ಕಾಣೆ ಜಗದಿ ಹೊರಗೆದೃಷ್ಟಿ ತಾಕೀತು ಹೋಗಬೇಡೆಂದು ಎಷ್ಟು ಹೇಳಲಿ ಮಗನೆ ಪ.

ಗೊಲ್ಲತೀರೆಳೆ ಮಕ್ಕಳ ಗುಣವ ನೋಡಬಾರದೊಹೊಲ್ಲತನ ಬೇಡ ಮನೆ ಹೊಂದಿರೊ ಅಯ್ಯಫುಲ್ಲಲೋಚನ ನೀಯೆನ್ನ ಪ್ರಾಣದ ಪದಕವಯ್ಯಪಳ್ಳಿಯ ಗೋಪರೈದಾರೆ ಪುಟ್ಟ ನಿನ್ನ್ಯೆತ್ತ ನೋಡಲೊ 1

ತರಳರಂಗಿ ಕುಲಾಯವ ತೊಟ್ಟು ನಿಂತಿಹರು ಕಂಡ್ಯಹಿರಿಯ ಗುಮ್ಮಗಂಜುವೆ ಹೆದರಿ ಕಂಡ್ಯಬರಿಮೈಯಾ ಬಿಸಿಲೊಳು ಬಾಡಿತೊ ಮಂಗಳ ಮುಖಬರಿದೆ ಬೊವ್ವ ಕಚ್ಚದೇನೊ ಬೆಟ್ಟದ ಭಾಗ್ಯನಿಧಿಯ 2

ಕಂದ ಬರಲೆಂದುಣದೆ ಕುಳಿತಿಹನೊ ನಿಮ್ಮಯ್ಯಹೊಂದಳಿಗೆ ಪಾಯಸ ಹಸನಾಗಿದೆಅಂದದಿ ಸಕ್ಕರೆ ತುಪ್ಪ ಅನುಗೂಡಿಸುಣಿಸುವೆತಂದೆ ಪ್ರಸನ್ನವೆಂಕಟ ನಿನಗೆ ಹಸಿವೆ ಮರೆದೆಯೊ 3
********