ರಾಗ ಸಾವೇರಿ. ತ್ರಿಪುಟ ತಾಳ
ಹರಿ ದರುಶನಕಾಗಿ ನಾರದರು ಬರಲು
ಸಿರಿದೇವಿ ಹೊರಗಿನ ಬಾಗಿಲಲ್ಲಿದ್ದಳು ||ಪ||
ಕರಕಮಲ ಮುಗಿದು ದೊರೆ ಸಮಯವೇನೆನಲು
ನಾರೀಮಣಿ ಲಕುಮಿ ಅರುಹುವಳಾಗ ||ಅ||
ವರ ದೇವತಾರ್ಚನೆ ಅರಮನೆಯೊಳಗೆ
ಭರದಿಂದ ಕುಳಿತಿಪ್ಪ ಪರಮಾತ್ಮನು
ಸರಸಿಜೋದ್ಭವನಾಗಿ ಸುರರಿಗೆ ದೊರೆಯೀತ
ಪರಮ ಆಶ್ಚರ್ಯವ ಅರಿಯಬೇಕೆಂದು ||
ಕಳವಳಿಸುತ ಮನದೊಳಗೆ ತೋರುತಲಿರೆ
ಥಳಥಳಿಸುವ ರತ್ನಸಂಪುಟದಿ
ಕಲುಷದೂರನನ್ನು ಪ್ರಹ್ಲಾದ ವರಧ್ರುವನು
ಬಲಿ ಅಂಬರೀಷ ಮುಖ್ಯರು ಪೂಜೆಗೆಯ್ವ ||
ಹರಿದಾಸರ ಚರಣರಜಗಳ ತುಂಬಿಟ್ಟು
ತೆಗೆದು ತೋರಿದ ಮುನಿಗೆ ಪರಮಾತ್ಮನು
ಪರಮಾನಂದಭರಿತನಾದ ವಿರಿಂಚಿಸುತ
ಸಿರಿಪತಿ ಪುರಂದರವಿಠಲನ್ನ ಸ್ತುತಿಸುತ ||
***
ಹರಿ ದರುಶನಕಾಗಿ ನಾರದರು ಬರಲು
ಸಿರಿದೇವಿ ಹೊರಗಿನ ಬಾಗಿಲಲ್ಲಿದ್ದಳು ||ಪ||
ಕರಕಮಲ ಮುಗಿದು ದೊರೆ ಸಮಯವೇನೆನಲು
ನಾರೀಮಣಿ ಲಕುಮಿ ಅರುಹುವಳಾಗ ||ಅ||
ವರ ದೇವತಾರ್ಚನೆ ಅರಮನೆಯೊಳಗೆ
ಭರದಿಂದ ಕುಳಿತಿಪ್ಪ ಪರಮಾತ್ಮನು
ಸರಸಿಜೋದ್ಭವನಾಗಿ ಸುರರಿಗೆ ದೊರೆಯೀತ
ಪರಮ ಆಶ್ಚರ್ಯವ ಅರಿಯಬೇಕೆಂದು ||
ಕಳವಳಿಸುತ ಮನದೊಳಗೆ ತೋರುತಲಿರೆ
ಥಳಥಳಿಸುವ ರತ್ನಸಂಪುಟದಿ
ಕಲುಷದೂರನನ್ನು ಪ್ರಹ್ಲಾದ ವರಧ್ರುವನು
ಬಲಿ ಅಂಬರೀಷ ಮುಖ್ಯರು ಪೂಜೆಗೆಯ್ವ ||
ಹರಿದಾಸರ ಚರಣರಜಗಳ ತುಂಬಿಟ್ಟು
ತೆಗೆದು ತೋರಿದ ಮುನಿಗೆ ಪರಮಾತ್ಮನು
ಪರಮಾನಂದಭರಿತನಾದ ವಿರಿಂಚಿಸುತ
ಸಿರಿಪತಿ ಪುರಂದರವಿಠಲನ್ನ ಸ್ತುತಿಸುತ ||
***
pallavi
hari darushanakAgi nAradaru baralu siridEvi horagina bAgilalliddaLu
anupallavi
kara kamala mugidu dhore samayavEnenalu nArImaNi lakumi aruhuvaLAga
caraNam 1
vara dEvrcane aramaneyoLage bharadind kuLitippa paramAtmanu
sarasijOdbhavanAgi surarige dhoreyIta parama Ascaryada ariya bEkendu
caraNam 2
kaLavaLisuta manadoLage tOrutalire thaLa thaLisuva ratna sampuTadi
kaluSadUranannu prahlAda vara dhruvanu bali ambarISa mukhyaru pUje geiva
caraNam 3
haridAsara caraNa rajagaLa tumbiTTu tegedu tOrida munige paramAtmanu
paramAnanda bharitanAda virincisuta siripati purandara viTTalanna stutisuta
***