Showing posts with label ಶುಭವು ಶ್ರೀಹರಿಯ ನಾಮವು kamalanabha vittala. Show all posts
Showing posts with label ಶುಭವು ಶ್ರೀಹರಿಯ ನಾಮವು kamalanabha vittala. Show all posts

Friday, 27 December 2019

ಶುಭವು ಶ್ರೀಹರಿಯ ನಾಮವು ankita kamalanabha vittala

by ನಿಡಗುರುಕಿ ಜೀವೂಬಾಯಿ
ಶುಭವು ಶ್ರೀಹರಿಯ ನಾಮವು ಸುಜನರಿಗೆಲ್ಲಶುಭವು ಶ್ರೀಹರಿಯ ನಾಮವು ಪ

ಶುಭವು ಶ್ರೀಹರಿಯ ನಾಮವಿಭವದಿಂ ಪೊಗಳಲುಶುಭಕೃತು ನಾಮ ಸಂವತ್ಸರದಲಿಶುಭಶುಭವೆನ್ನುತ ಪಾಡುವರನು ಸಲಹುವಅ.ಪ

ಸಿಂಧುಶಯನ ಹರಿಯಇಂದಿರೆಸಹಿತಚಂದದಿ ಭಜಿಸುವರಮಂದರಧರಅರವಿಂದನಯನ ಶ್ರೀಮು-ಕುಂದಭಕ್ತರ ಭವಬಂಧನ ಬಿಡಿಸುವಪೊಂದಿ ಭಜಿಸುವರಾನಂದದಿ ಸಲಹುವಸುಂದರವದನಶುಭಾಂಗನು ಮುದದಲಿಇಂದ್ರಾದಿಗಳು ಆನಂದದಿ ಪೊಗಳೆ ಗೋ-ವಿಂದ ಆನಂದ ಹೃನ್ಮಂದಿರ ವಾಸನು 1

ಶುಭವು ಭಕ್ತರಕಾರ್ಯಕೆ ಶ್ರೀಹರಿಯನಾಮಶುಭವು ಮುಕ್ತಿಸಾಧನಕೆಶುಭವು ಬಂಧುಗಳಿಂದ ಸದನದಿ ವೆÀುರೆಯಲುಶುಭವು ಭಕ್ತರ ವೃಂದ ಕೂಡಿ ನಲಿದಾಡಲುಶುಭಗುಣ ಶೀಲನ ಶುಭಗುಣಗಳು ಸ-ನ್ಮುದದಲಿ ಪಾಡಲು ಶುಭಕೊಡುವನುಶುಭಶುಭಶುಭವೆನ್ನುತ ನಲಿದಾಡೆ ಅ-ಶುಭಗಳನೋಡಿಸಿ ಶುಭವೀವನುಹರಿ2

ಶುಭವು ಶೋಭನ ಶ್ರೀಶಗೆ ಶ್ರೀ ಸಹಿತದಿವೆÀುರೆವ ಮಹಾನುಭಾವಗೇಶುಭವೆಂದು ಪಾಡಲುಅಗಣಿತಮಹಿಮನಬಗೆಬಗೆಯಿಂದವರಘ ಪರಿಹರಿಸುವಖಗವಾಹನಶ್ರೀ ಕಮಲನಾಭ ವಿಠ್ಠಲನನು ಪಾಡುವ ಸುಜನರ ಸಲಹುವಹಗಲಿರುಳೆನ್ನದೆ ಭಜಿಸುತ ಪಾಡಿರೊಕಡಲೊಡೆಯನಪಾದಧೃಡ ಭಕುತಿಯಲಿ3
*******