Showing posts with label ಭೂತರಾಜ ಭೂತರಾಜ ಭೂತರಾಜ ಜೈ ಜೈ ಜೈ krishnavittala. Show all posts
Showing posts with label ಭೂತರಾಜ ಭೂತರಾಜ ಭೂತರಾಜ ಜೈ ಜೈ ಜೈ krishnavittala. Show all posts

Monday, 2 August 2021

ಭೂತರಾಜ ಭೂತರಾಜ ಭೂತರಾಜ ಜೈ ಜೈ ಜೈ ankita krishnavittala

ಭೂತರಾಜ ಭೂತರಾಜ ಭೂತರಾಜ ಜೈ ಜೈ ಜೈ ಪ


ಖ್ಯಾತ ವಾದಿರಾಜ, ಗುರುವ | ಪ್ರೀತಿಪಾತ್ರ

ಭಾವಿರುದ್ರ ಜೈ ಜೈ ಜೈ ಅ.ಪ.


ಮೂಲ ಹರಿಯ ನಾಮ ಧರಸಿ | ವ್ಯಾಳ ವಿನುತ ಗುರುವಿನಲ್ಲಿ

ಶೂಲಿ ಯಂತೆ ವಿದ್ಯೆ ಘಳಿಸಿ | ಕಾಳ ಮನದಿ ಮೆರೆದ

ಮುನಿಗೆ ಜೈ ಜೈ ಜೈ 1

ಹರಿಯ ಮುಖಜರನ್ನು ಬಹಳ, ಜರಿದು ಜರಿದು ಗರ್ವ ದಿಂದ |

ಗುರುಗಳನ್ನು ಬಿಡದೆ ಬೆದಕಿ, ಪುರದಲಾದೆ

ಬೊಮ್ಮರಕ್ಕಸ ಜೈ ಜೈ ಜೈ 2

ಘೋರ ಅಡವಿ ಸೇರಿ ಭರದಿ, ದಾರಿಯಲ್ಲಿ ಬಂದ ಜನರ |

ಸೊರೆಕೊಂಡು ಮಾನಧನವ, ಕ್ರೂರನೆಂದು ಕರಸಿ ಕೊಂಡೆ3

ಏನು ನಿನ್ನ e್ಞÁನ ಮಾನ, ಹೀನ ಜನ್ಮ ಬಂದರೂನು |

e್ಞÁನ ಪೂರ್ಣ ಗುರುವಿನೊಡನೆ, ಮಾನವಾದ ಪಕ್ಷಗೈದೆ4

ಕರುಣ ಶರಧಿ ವಾದಿರಾಜ, ಭರದಿ ಹರಿಸಿ ಕೀಳು ಜನ್ಮ |

ಚರಣ ಭಜಿಪ ಭಾಗ್ಯಕೊಡಲು, ಮೆರದೆ ಭೂತರಾಜ ನೆನಿಸಿ |5

ಕ್ಷಮಿಸನೇನು ಸುತನಪಿತನು, ನಮಿಸಿ ನಿಂತ ನಿನಗೆ ನುಡಿದ |

ಅಮರನಾಥ ಗುರುವು ನೀನು, ನಮಗೆ ಮಗನು

ಸುಖದಿ ಬಾಳೆಂದು6

ನಾರಸಿಂಹ ನಿನ್ನ ಬಿಂಬ, ಭಾರಿ ಗಾತ್ರ ಕೆಂಪು ನೇತ್ರ |

ಚಾರು ವಡವೆ ಗಣವ ಧರಿಸಿ, ವೀರ ರೂಪದಿಂದ ಮೆರೆವೆ 7

ಹಾರಿ ಹೋಗಿ ಧನಪನೆಡೆಗೆ, ತೋರಿ ನಿನ್ನಶೌರ್ಯ ಪಡದು |

ಭಾರಿ ರತ್ನ ಮಕುಟ ನುತಿಸಿ, ನೇರ ಶಿರದಲಿಟ್ಟೆ ಗುರುವಿಗೆ 8

ಪಥದಿ ಖಳನ ಕೊಂದು ಬೇಗ ರಥ ಸಮೇತ ಬದರಿಯಿಂದ

ಪೃಥಿವಿ ಅಳೆದೆ ದೊರೆಯತಂದು, ವಿತತ ಮಹಿಮ ದುಷ್ಠದಮನ 9

ಕ್ಷೇತ್ರಪಾಲ ಶರಣು ಭಾವಿಸೂತ್ರ ವಲಿಯ ಬಿಡಲು ನಿನ್ನ

ಗಾತ್ರಕೆಡಹಿ ಬೇಡಿ ಕೊಂಬೆ, ನೇತ್ರ ನೀಡೊ ಹರಿಯ ಕಾಂಬ ಜೈ10

ಕಳೆದು ಬೇಗ ಹೊಲಸು ಮನವ, ಬೆಳಿಸಿ ಹರಿಯ ದೃಢಸುಭಕ್ತಿ

ಕಲಿಯ ತುಳಿವ ಶಕ್ತಿ ನೀಡಿ, ಕಲಸೊ ಸಾಧುಸಂಗ ಜೀಯ, ಜೈ11

ಶೃಂಗ ಪುರದಿ ಖಳರ ಸೊಕ್ಕು ಭಂಗ ಗೈದು ನಿಂತೆ ಅಲ್ಲ

ಲಿಂಗ ತಂದೆ ಕದರಿಯಿಂದ, ತುಂಗ ಮಹಿಮ ಮಂಗಳಾಂಗ ಜೈ12

ಗುರುವು ಕೊಟ್ಟ ನೂಪೂರಾವ, ಧರಿಸಿ

ಕುಣಿದು ಮುದದಿ ಭಜಿಪೆ

ಗರಳ ಕಂಠ ಭಾವಿ ಶರಣು, ಚರಣ ಪಿಡಿವೆ ಸ್ತೋತ್ರಪ್ರೀಯ ಜೈ13

ಸ್ವಾದಿ ಕ್ಷೇತ್ರದಲ್ಲಿ ನೆಲಸಿ | ವಾದಿರಾಜ ವೈರಿ ವೃಂದ

ಬೂದಿಗೈದು ಭಕ್ತಿಗಣಕೆ, ಮೋದ ಕೊಡಿಸು ತಿರ್ಪೆಭೂಪ |ಜೈ14

ರಾಜ ಬಿರುದು ಸಹಿತ ಭಾರಿ | ವಾಜಿ ಏರಿ ನಡೆಯೆ ವಾದಿ

ರಾಜ ದಯದಿ ಮೆರೆವ ನಿನ್ನ | ನೈಜ ಮಹಿಮೆ

ಅಳಿಯೆ ಸಿಗದು ಜೈ 15

ವಂದು ಕಮ್ಮಿ ನಾಲ್ಕು ಹತ್ತು, ತಂದೆ ವಿಧಿಯ ಕಲ್ಪಗಳಲಿ |

ಕುಂದು ರಹಿತ ಹರಿಯ ಯಜಿಸಿ, ಇಂದು ಉಂಬೆ ದಿವ್ಯ ಪದವಿ16

ಭೀತಿ ಕರವು ನಿನ್ನ ರೂಪ, ವ್ರಾತ್ಯಗಣಕೆ ವಾದಿ ರಾಜ |

ದೂತ ನಿನಗೆ ಪ್ರತಿಯ ಕಾಣೆ, ಪ್ರೀತಿ ಸುರಿಸು ಭೃತ್ಯರೆಮಗೆ ಜೈ17

ರಾಜ ರೆಡೆಯ ಬಲದಿ ನೆಲಸಿ, ರಾಜ ಮಂತ್ರಿ ಕೆಲಸ ನಡೆಸಿ

ಸೂಜಿ ತಪ್ಪಿಗೆಡೆಯ ಕೊಡದೆ, ರಾಜ ಕ್ಷೇತ್ರ ಕಾಯುತಿರ್ಪೆ ಬೈ18

ಕರ್ಣ ಆವಿ ಕರ್ಣ ಗುಂಪು, ನಿನ್ನ ಸ್ತುತಿ ಸೇವಿಸುವರು |

ದೊಣ್ಣಿ ಸೇವೆ ದುಡುಕಿ ದವಗೆ, ಚಿಣ್ಣರೆಂದು ತಪ್ಪ ಕ್ಷಮಿಸು ಜೈ19

ಚಿತ್ರ ವೈಯ ನಿನ್ನ ಚರಿತೆ, ಭಕ್ತರಿಂದ ಕೊಂಡು ಹರಿಕೆ

ಕಿತ್ತು ವಗೆದು ವಿವಿಧ ದೋಷ, ಎತ್ತಿ ಕೊಡುವೆ ಕಾಮಿತಾರ್ಥಜೈ20

ಭೂತ ಪ್ರೇತ ಬಾಧೆ ಸಕಲ, ಆರ್ತಿನಾಶ ಪದವ ಪಠಿಸೆ |

ನಾಥ ಶ್ರೀ _ ಕೃಷ್ಣ ವಿಠಲ, ಪ್ರೀತಿ ಯಿಂದ ನಲಿದು

ನಲಿವ ಜೈ ಜೈ ಜೈ 21

****