Showing posts with label ವಂದಿಪೆ ಚರಣಾರವಿಂದಕೆ ಸದ್ಗುರು shyamasundara VANDIPE CHARANAARAVINDAKE SADGURU VADIRAJA STUTIH. Show all posts
Showing posts with label ವಂದಿಪೆ ಚರಣಾರವಿಂದಕೆ ಸದ್ಗುರು shyamasundara VANDIPE CHARANAARAVINDAKE SADGURU VADIRAJA STUTIH. Show all posts

Sunday, 5 December 2021

ವಂದಿಪೆ ಚರಣಾರವಿಂದಕೆ ಸದ್ಗುರು ankita shyamasundara VANDIPE CHARANAARAVINDAKE SADGURU VADIRAJA STUTIH



ವಂದಿಪೆ ಚರಣಾರವಿಂದಕೆ ಸದ್ಗುರು ವಾದಿರಾಜ

ಮಂದ ಮತಿಯ ಬಿಡಿಸಿಂದಿರೇಶನ ತೋರೋ ಪ


ದುರುಳ ಬುದ್ಧಿಲಿಂದ ಮರೆದು ಬಿಟ್ಟೆ ನಿನ್ನ ವಾದಿರಾಜ

ಧರಣಿಮಂಡಲದೊಳು ಪಾಪಿಷ ನಾನಾದೆ ವಾದಿರಾಜ

ಪರಮ ಪುರುಷ ಭಾವಿ ಮರುತ ನೀನೆÉಂದು ವಾದಿರಾಜ

ಹಿರಿಯರ ಮುಖದಿಂದ ನಿಶ್ಚೈಸಿದೆ ವಾದಿರಾಜ 1


ಶಿರದೊಳು ಹೂರಣದ್ಹರಿವಾಣ ಧರಿಸುತ ವಾದಿರಾಜ

ವರ ಭಕ್ತಿಯಿಂದಲಿ ತುರುಗಾಸ್ಯಗುಣಿಸಿದ ವಾದಿರಾಜ

ಗುರು ಜಗನ್ನಾಥ ದಾಸರ ಸ್ವಪ್ನದೊಳು ಬಂದು ವಾದಿರಾಜ

ಹÀರಿಕಥಾಮೃತಸಾರವಿರಚಿ ಸೆಂದರು ವಾದಿರಾಜ 2


ಶ್ರೀಮಧ್ವಾರ್ಯಮತ ಸಾಮ್ರಾಜ್ಯ ಧ್ವಜಪೆತ್ತಿ ವಾದಿರಾಜ

ಶಾಮಸುಂದರ ಕೃಷ್ಣ ನಾಮದ ಮಹಿಮೆಯ ವಾದಿರಾಜ

ಪಾಮರಂಗೆ ಪೇಳಿ ಪ್ರೇಮದಿ ಸಲುಹಿದ ವಾದಿರಾಜ 3

***